ಬೆಂಗಳೂರು -
ಸರಕಾರಿ ಕಚೇರಿಗಳಲ್ಲಿ ಪಾರದರ್ಶಕತೆ ತರುವ ಹಾಗೂ ಆಡಳಿತಾತ್ಮಕ ಶಿಸ್ತು ಕಾಪಾಡುವ ನಿಟ್ಟಿನಲ್ಲಿ, ರಾಜ್ಯ ಸರಕಾರದ ಎಲ್ಲ ಇಲಾಖೆ, ನಿಗಮ ಮತ್ತು ಮಂಡಳಿಗಳ ಅಧಿಕಾರಿ ಹಾಗೂ ಸಿಬಂದಿ ಡಿ. 1ರಿಂದ ಕರ್ತವ್ಯ ತಂತ್ರಾಂಶದಲ್ಲಿಯೇ ಚಲನವಲನ ವಹಿ ಮತ್ತು ನಗದು ಘೋಷಣಾ ವಹಿಯನ್ನು ದಾಖಲಿಸುವುದನ್ನು ರಾಜ್ಯ ಸರಕಾರ ಕಡ್ಡಾಯಗೊಳಿಸಿ ಆದೇಶ ಹೊರಡಿ ಸಿದೆ
ಈ ಕುರಿತು ಪ್ರಜಾಸೇವಾ ಇಲಾಖೆ ಆದೇಶ ಹೊರಡಿ ಸಿದೆ. ಎ. 15ರಿಂದ ಜಾರಿಗೆ ಬಂದಿರುವ ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣ ವ್ಯವಸ್ಥೆಯ ʼಕರ್ತವ್ಯ' ಅಪ್ಲಿಕೇಶನ್‌ನಲ್ಲಿಯೇ ಇನ್ನು ಮುಂದೆ ಹಾಜರಾತಿಯ ಜತೆಗೆ ಈ ಎರಡೂ ವಹಿಗಳನ್ನು ನಿರ್ವಹಿಸುವ ಸೌಲಭ್ಯ ಒದಗಿಸಲಾಗಿದೆ.ಹೈಕೋರ್ಟ್ ನಿರ್ದೇಶನದಂತೆ ಪ್ರತಿಯೊಬ್ಬ ನೌಕರರು ಪ್ರತಿದಿನ ಕೆಲಸದ ಆರಂಭದಲ್ಲಿ ತಮ್ಮ ಬಳಿ ಇರುವ ನಗದು ಮೊತ್ತವನ್ನು ಕಡ್ಡಾಯವಾಗಿ ಘೋಷಿಸಬೇಕು. ಅಲ್ಲದೆ, ಕಚೇರಿ ಅವಧಿಯಲ್ಲಿ ಅನ್ಯ ಕರ್ತವ್ಯದ ಮೇಲೆ ಹೊರಗೆ ತೆರಳುವ ನೌಕರರು ತಂತ್ರಾಂಶದಲ್ಲಿ ಸಕಾರಣ ನಮೂದಿಸಿ, ಮೇಲಧಿಕಾರಿಗಳ ಪೂರ್ವಾನುಮತಿ ಪಡೆಯಬೇಕಾಗುತ್ತದೆ.
ಈ ಹಿಂದೆ ಹೊರಡಿಸಿದ್ದ ಸುತ್ತೋಲೆಗಳ ಹೊರತಾ ಗಿಯೂ ಕಚೇರಿಗಳಲ್ಲಿ ಭೌತಿಕ ವಹಿಗಳನ್ನು ಸರಿಯಾಗಿ ನಿರ್ವಹಿಸದಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ತಂತ್ರಾಂಶದಲ್ಲಿ ನೌಕರರು ನಮೂದುಗಳನ್ನು ಮಾಡುತ್ತಿರುವ ಬಗ್ಗೆ ಆಯಾ ಇಲಾಖೆಯ ನೋಡಲ್ ಅಧಿಕಾರಿಗಳು ಆಗ್ಗಿಂದಾಗ್ಗೆ ಪರಿಶೀಲಿಸಬೇಕು ಹಾಗೂ ನಿಯಮ ಉಲ್ಲಂ ಸಿದ ಅಧಿಕಾರಿ ಮತ್ತು ನೌಕರರ ವಿರುದ್ಧ ಸಕ್ಷಮ ಪ್ರಾಧಿಕಾರವು ಸೂಕ್ತ ಶಿಸ್ತು ಕ್ರಮ ಜರುಗಿಸ ಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....