ಧಾರವಾಡ -
ಶಿಕ್ಷಕಿಯರ ಸಮಸ್ಯೆಗಳಿಗೆ ಕಾನೂನು ಸೇವೆ ಪ್ರಾರಂಭ ವಿಭಾಗಕ್ಕೆ ಒಬ್ಬರು ಕಾನೂನು ಸಲಹೆಗಾರರು ನೇಮಕ ಹೌದು ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ ) ರಾಜ್ಯ ಘಟಕ ಧಾರವಾಡ ಸಂಘದ ಪದಾಧಿಕಾರಿಗಳಿಗೆ ಹಾಗೂ ಸದಸ್ಯ ಮಹಿಳಾ ಶಿಕ್ಷಕಿ ಯರ ಸಮಸ್ಯೆಗಳಿಗೆ ಕಾನೂನು ನೆರವು ಹಾಗೂ ಸೂಕ್ತ ಮಾರ್ಗದರ್ಶನ ನೀಡುವ ಉದ್ದೇಶದಿಂದ ಪ್ರತಿ ವಿಭಾಗಕ್ಕೆ ಒಬ್ಬರು ವಕೀಲರನ್ನು ಸಂಘದ ಕಾನೂನು ಸಲಹೆಗಾರರಾಗಿ ನೇಮಕ ಮಾಡಿಕೊಳ್ಳಲು ಸಿದ್ಧತೆ ನಡೆಸಲಾಗಿದೆ.ಧಾರವಾಡದ ವಕೀಲರಾದ ಶ್ರೀಮತಿ ನೂರಜಹಾನ್ ಬೇಗಂ ಎಂ. ಕಿಲ್ಲೆದಾರ್ ಅವರನ್ನು ಬೆಳಗಾವಿ ವಿಭಾಗಕ್ಕೆ ಕಾನೂನು ಸಲಹೆಗಾರರಾಗಿ ಈಗಾಗಲೇ ನೇಮಕ ಮಾಡಲಾಗಿದೆ
ಧಾರವಾಡ ವಕೀಲರಾದ ಶ್ರೀಮತಿ ನೂರಜಹಾನ್ ಬೇಗಂ ಎಂ ಕಿಲ್ಲೇದಾರ್ ಅವರು BA, MA, LLB, LLM, PGDC (HR) ವಿದ್ಯಾರ್ಹತೆ ಹೊಂದಿದ್ದು, ಧಾರವಾಡದಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿ ವಿಭಾಗದ ಎಲ್ಲಾ ಜಿಲ್ಲಾ ವ್ಯಾಪ್ತಿಗೆ ಬರುವ ಎಲ್ಲ ತಾಲೂಕು ಮಹಿಳಾ ಶಿಕ್ಷಕಿಯರು ತಮಗೆ ಎದುರಾಗುವ ವಿವಿಧ ಸಾಮಾಜಿಕ ತೊಂದರೆಗಳು, ಸಮಸ್ಯೆಗಳು, ಲೈಂಗಿಕ ದೌರ್ಜನ್ಯ ಗಳು (ಪೋಕ್ಸೋ ಕಾನೂನು ಸಂಬಂಧಿತ) ಸೇವಾ ಹಕ್ಕುಗಳು ಹಾಗೂ ಇತರ ಸಮಸ್ಯೆಗಳಿಗೆ ಅಗತ್ಯವಿರುವ ಕಾನೂನು ಮಾರ್ಗದರ್ಶನ ಮತ್ತು ನೆರವು ನೀಡುವ ಜವಾಬ್ದಾರಿ ಯನ್ನು ಅವರು ನಿರ್ವಹಿಸಲಿದ್ದಾರೆ.
ಮಹಿಳಾ ಶಿಕ್ಷಕಿಯರ ಹಕ್ಕುಗಳ ರಕ್ಷಣೆ ಹಾಗೂ ಅವರ ಸಮಸ್ಯೆಗಳಿಗೆ ಕಾನೂನುಬದ್ಧ ಪರಿಹಾರ ದೊರಕಿ ಸುವ ನಿಟ್ಟಿನಲ್ಲಿ ಬೆಳಗಾವಿ ವಿಭಾಗದಲ್ಲಿ ಕಾನೂನು ನೆರವು ವ್ಯವಸ್ಥೆ ಕಲ್ಪಿಸಿರುವುದು ಮಹತ್ವದ ಹೆಜ್ಜೆ ಯಾಗಿದೆ ನಮ್ಮ ಸಂಘದ ಕಾನೂನು ಸಲಹೆಗಾರರಾಗಿ ನಮ್ಮ ಶಿಕ್ಷಕಿಯರ ಸೇವೆ ಮಾಡಲು ಒಪ್ಪಿದ ನಮ್ಮ ಆತ್ಮೀಯ ವಕೀಲರಿಗೆ ಸಂಘದ ವತಿಯಿಂದ ಧನ್ಯವಾದಗಳೊಂದಿಗೆ ಅಭಿನಂದಿಸಿದೆ.

ಮಹಿಳಾ ಶಿಕ್ಷಕಿಯರು ತಮ್ಮ ಸಮಸ್ಯೆಗಳಿಗೆ ಸೂಕ್ತ ಕಾನೂನು ಮಾರ್ಗದರ್ಶನ ಹಾಗೂ ನೆರವು ಪಡೆಯಲು ಸಂಘದ ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ.ತುರ್ತು ಕಾನೂನು ಸೇವೆಗಾಗಿ ಸಂಪರ್ಕ: (ಶಾಲಾ ಅವಧಿ ಹೊರತು ಪಡಿಸಿ ಸಹಾಯ ವಾಣಿ ಆಕ್ಟಿವ್ ಇರಲಿದೆ)
ಹೆಲ್ಪ್‌ಲೈನ್: 8904772928 ಡಾ. ಲತಾ ಎಸ್. ಮುಳ್ಳೂರ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್ (ರಿ.), ನವದೆಹಲಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ.), ರಾಜ್ಯ ಘಟಕ–ಧಾರವಾಡ
ಸುದ್ದಿ ಸಂತೆ ನ್ಯೂಸ್ ಧಾರವಾಡ.....