LIVE TV LocalCrimeNationalInternationalPoliticsEducationTechnologyEntertainmentSportsFeature
State News

ಆರ್ಥಿಕ ಇಲಾಖೆಯಿಂದ ರಾಜ್ಯದ ಸರ್ಕಾರಿ ನೌಕರರಿಗೆ ತುರ್ತು ಸಂದೇಶ.....

ಬೆಂಗಳೂರು -

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸೇವಾ ವಿವರ ಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿ ಸುವ ನಿಟ್ಟಿನಲ್ಲಿ ಆರ್ಥಿಕ ಇಲಾಖೆಯು ಮಹತ್ವದ ಹೆಜ್ಜೆಯಿಟ್ಟಿದೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರ ಸೇವಾ ವಹಿಯನ್ನು ಕಡ್ಡಾಯವಾಗಿ ಎಲೆಕ್ಟ್ರಾನಿಕ್ ಸರ್ವೀಸ್ ರಿಜಿಸ್ಟರ್ (e-SR) ನಲ್ಲಿ ಅನುಷ್ಠಾನಗೊಳಿಸುವಂತೆ ಸೂಚಿಸಿರುವ ಸರ್ಕಾರ, ಇದೀಗ e-SR ಪ್ರಕಟಿಸುವ ಕಾರ್ಯವನ್ನು ಪೂರ್ಣ ಗೊಳಿಸಲು ಗಡುವನ್ನು ವಿಸ್ತರಿಸಿ ನವೆಂಬರ್ 17, 2026 ರಂದು ನೂತನ ಆದೇಶ ಹೊರಡಿಸಿದೆ.

2021-22ನೇ ಸಾಲಿನಿಂದಲೇ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಎಲ್ಲಾ ನೌಕರರ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿ (e-SR) ಮುಖಾಂತರ ನಿರ್ವಹಿಸಲು ಈ ಹಿಂದೆಯೇ ಸರ್ಕಾರ ಆದೇಶಿಸಿತ್ತು. ಪ್ರಸ್ತುತ ಎಲ್ಲಾ ಇಲಾಖೆಗಳು HRMS-2 ತಂತ್ರಾಂಶಕ್ಕೆ ಸೇರ್ಪಡೆಗೊಂಡಿದ್ದು ಮುಂಬರುವ ದಿನಗಳಲ್ಲಿ ಅಧಿಕಾರಿಗಳ ಹಾಗೂ ನೌಕರರ ವಾರ್ಷಿಕ ವೇತನ ಬಡ್ತಿ, ಹಿಂದಿನ ಬಡ್ತಿ, ವರ್ಗಾವಣೆ ಸೇರಿದಂತೆ ಇತರ ಸೇವಾ ವಿವರಗಳನ್ನು e-SR ಮೂಲಕವೇ ಪರಿಗಣಿಸಲಾಗುತ್ತದೆ. ಅಲ್ಲದೆ, ಮಹಾಲೇಖಪಾಲರ (CAG) ಕಾಗದರಹಿತ ಕಾರ್ಯವಿಧಾನದ ಆಶಯ ದಂತೆ ಪಿಂಚಣಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವ ಸಲುವಾಗಿ ಎಲ್ಲಾ ಪಿಂಚಣಿ ಪ್ರಸ್ತಾವನೆಗಳನ್ನು ಇ-ಸೇವಾ ವಹಿ ಒಳಗೊಂಡಂತೆ ಕೇವಲ ಆನ್‌ಲೈನ್ ಮೂಲಕವೇ ರವಾನಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡ ಲಾಗಿದೆ.

ಮಾರ್ಚ್ 2026ರೊಳಗೆ ಸಿಬ್ಬಂದಿಯ ವೈಯಕ್ತಿಕ e-SR ಕಾರ್ಯವನ್ನು ಪೂರ್ಣಗೊಳಿಸಲು ಸೂಚಿಸಲಾಗಿ ದ್ದರೂ, ಇಲಾಖೆಗಳ ಪ್ರಗತಿಯು ತೃಪ್ತಿಕರವಾಗಿರಲಿಲ್ಲ. ಜೊತೆಗೆ ಅಕ್ಟೋಬರ್ 2026ರ ಅಂತ್ಯಕ್ಕೆ ಹಳೆಯ HRMS-1.0 ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತ ಗೊಳಿಸುವ ಬಗ್ಗೆಯೂ ಎಚ್ಚರಿಸಲಾಗಿತ್ತು. ಇದೀಗ ಅನೇಕ ಇಲಾಖಾ ಮುಖ್ಯಸ್ಥರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ, e-SR ಪೂರ್ಣಗೊಳಿಸುವ ಅಂತಿಮ ದಿನಾಂಕವನ್ನು 31/12/2026 ರವರೆಗೆ ವಿಸ್ತರಿಸಲಾಗಿದೆ.

ಆದರೆ, HRMS-2.0 ತಂತ್ರಾಂಶದಲ್ಲಿ ಲಭ್ಯವಿರುವ ಸೇವಾ ಸೌಲಭ್ಯಗಳನ್ನು ಪಡೆಯಲು ಎಲ್ಲಾ ಅಧಿಕಾರಿ ಹಾಗೂ ನೌಕರರು ಕಡ್ಡಾಯವಾಗಿ ದಿನಾಂಕ 15/12/2026 ರೊಳಗೆ ತಮ್ಮ e-SR ಅನ್ನು ಪೂರ್ಣ ಗೊಳಿಸಿ ಪ್ರಕಟಿಸುವಂತೆ ಆರ್ಥಿಕ ಇಲಾಖೆಯ ಹೆಚ್ ಆರ್ ಎಂ ಎಸ್-2.0 ಯೋಜನಾ ವ್ಯವಸ್ಥಾಪಕರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಜನವರಿ 2027 ರಿಂದ ಕೇವಲ e-SR ಪ್ರಕಟವಾಗಿರುವ ನೌಕರರಿಗೆ ಮಾತ್ರ ವರ್ಗಾವಣೆ, ಮುಂಬಡ್ತಿ, ವಾರ್ಷಿಕ ವೇತನ ಬಡ್ತಿ ಮತ್ತು ಇತರ ಸೇವಾ ಸೌಲಭ್ಯಗಳು ದೊರೆಯಲಿವೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆರ್ಥಿಕ ಇಲಾಖೆಯಿಂದ ರಾಜ್ಯದ ಸರ್ಕಾರಿ ನೌಕರರಿಗೆ ತುರ್ತು ಸಂದೇಶ.....ರಾಜ್ಯ ಸರ್ಕಾರಿ ನೌಕರರಿಗೆ ಆರ್ಥಿಕ ಇಲಾಖೆ ಯಿಂದ ಮಹತ್ವದ ಮಾಹಿತಿ.....ರಾಜ್ಯ ಸರ್ಕಾರಿ ನೌಕರರಿಗೆ ಆರ್ಥಿಕ ಇಲಾಖೆ ಯಿಂದ ಮಹತ್ವದ ಮಾಹಿತಿ.....ರಸ್ತೆ ಅಪಘಾತ ಶಿಕ್ಷಕ ಸಾವು.....ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ನಿಧನ.....ನಾಳೆಯಿಂದ ಖಾಸಗಿ ಶಾಲೆ, ಕಾಲೇಜ್‌ಗಳು ಬಂದ್ ಆಗುತ್ತಾ.....ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ.....ಡಾ ಸೌಭಾಗ್ಯ ಕುಲಕರ್ಣಿ ಗೆ ಧೀಮಂತ ಪ್ರಶಸ್ತಿ .....ಹೆಸರಾಂತ ಪ್ರಸೂತಿ,ಸ್ತ್ರೀರೋಗ ತಜ್ಞೆಗೆ ಒಲಿದು ಬಂದ ಪ್ರತಿಷ್ಠಿತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪ್ರಶಸ್ತಿ.....ಶಿಕ್ಷಕರ ವರ್ಗಾವಣೆ ನಿಯಮ ಬದಲಾಗಲಿ.....ಸರ್ಕಾರಿ ಶಾಲಾ ಶಿಕ್ಷಕಿ ಬಾಯಲ್ಲಿ ಇದೆಂಥಾ ಮಾತು.....ವೈರಲ್ ಆಗಿವೆ ಮಾತುಗಳು.....ಸರ್ಕಾರಿ ಶಾಲಾ ಮುಖ್ಯಶಿಕ್ಷಕಿ ಸೇರಿ ಮೂವರು ಅಮಾನತು..... ದೂರು ದಾಖಲು.....ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸರ್ಕಾರಿ ನೌಕರರಿಗೆ ಹೊಸ ನಿಯಮ ಜಾರಿಗೆ.....