LIVE TV LocalCrimeNationalInternationalPoliticsEducationTechnologyEntertainmentSportsFeature
State News

ಹುಬ್ಬಳ್ಳಿಯಲ್ಲಿ NWKRTC ಚಾಲಕ ಕಂ ನಿರ್ವಾಹಕ ಮನೆಯ ಮೇಲೆ ಲೋಕಾಯುಕ್ತ ದಾಳಿ.....

ಹುಬ್ಬಳ್ಳಿ -

ಹುಬ್ಬಳ್ಳಿಯಲ್ಲಿ ಲೋಕಾಯುಕ್ತ ದಾಳಿ NWKRTC ಚಾಲಕ ಕಂ ನಿರ್ವಾಹಕ ಷಡಕ್ಷರಯ್ಯ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ಶೋಧ ಹೌದು 
ಹುಬ್ಬಳ್ಳಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಚಾಲಕ ಕಂ ನಿರ್ವಾಹಕ ಷಡಕ್ಷರಯ್ಯ ಅವರ ಮನೆ ಮೇಲೆ ಶೋಧ ಕಾರ್ಯಾ ಚರಣೆ ಕೈಗೊಂಡಿದ್ದಾರೆ.

ಹುಬ್ಬಳ್ಳಿ ನಗರದ ಡಿಪೋದಲ್ಲಿ ಕಾರ್ಯನಿರ್ವಹಿಸು ತ್ತಿರುವ ಷಡಕ್ಷರಯ್ಯ ಅವರ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಮಾಡಿರುವ ಆರೋಪದ ಹಿನ್ನೆಲೆ ಯಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಹುಬ್ಬಳ್ಳಿಯ ಗಾಂಧಿನಗರದಲ್ಲಿರುವ ಅವರ ನಿವಾಸದ ಮೇಲೆ ಧಾರವಾಡ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ಮನೆಯಲ್ಲಿರುವ ದಾಖಲೆಗಳು ಹಾಗೂ ಆಸ್ತಿ-ಪಾಸ್ತಿಗೆ ಸಂಬಂಧಿಸಿದ ದಾಖಲಾತಿಗ ಳನ್ನು ಪರಿಶೀಲಿಸುತ್ತಿದೆ.

ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಅಧಿಕಾರಿಗಳು ವಿವಿಧ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ಕಲೆಹಾಕುತ್ತಿದ್ದಾರೆ.ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ಮುಂದುವರಿ ಸಿದ್ದು, ಪರಿಶೀಲನೆ ಪೂರ್ಣಗೊಂಡ ಬಳಿಕವಷ್ಟೇ ದಾಳಿಯ ಸಂಪೂರ್ಣ ವಿವರಗಳು ತಿಳಿದುಬರ ಬೇಕಿದೆ.

ಲೋಕಾಯುಕ್ತ ದಾಳಿಯಿಂದ ಸಾರಿಗೆ ಸಂಸ್ಥೆಯ ವಲಯದಲ್ಲಿ ಕುತೂಹಲ ಮೂಡಿದ್ದು ಅಧಿಕಾರಿಗಳ ಪರಿಶೀಲನೆಯತ್ತ ಎಲ್ಲರ ಗಮನ ಸೆಳೆದಿದೆ

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಕಿಯ ಮೇಲೆ ಹಲ್ಲೆ ಮಾಡಿದವರ ಬಂಧನ.....ಪ್ರಶ್ನೆ ಮಾಡಿದರೆ ಹಲ್ಲೆ.....ಶಿಕ್ಷಕಿಯ ಮೇಲೆ ಹಲ್ಲೆ ಮಾಡಿದವರ ಬಂಧನ.....ಪ್ರಶ್ನೆ ಮಾಡಿದರೆ ಹಲ್ಲೆ.....ಸರಕಾರಿ ನೌಕರರಿಗೆ ತಲೆನೋವು ತಂದಿಟ್ಟ ನಿತ್ಯ ನಗದು ಘೋಷಣೆ.....ಶಿಕ್ಷಕಿಯರ ಸಮಸ್ಯೆಗಳಿಗೆ ಕಾನೂನು ಸೇವೆ ಪ್ರಾರಂಭ.....ವಿಭಾಗಕ್ಕೆ ಒಬ್ಬರು ಕಾನೂನು ಸಲಹೆಗಾರರು ನೇಮಕ.....ಮುಂಬೈನಲ್ಲಿ ಆರಂಭಗೊಂಡ ಬಸವೇಶ್ವರ ಖಾನಾವಳಿ ಮುಂಬೈನ ವಾಸಿಯಲ್ಲಿ ಉತ್ತರ ಕರ್ನಾಟಕ ದ ಫೇಮಸ್ ಬಸವೇಶ್ವರ ಖಾನಾವಳಿ ಸವಿರುಚಿ.....ಲೋಕಾಯುಕ್ತ ದಾಳಿಯಾಗುತ್ತಿದ್ದಂತೆ ಮಗನ ಸ್ಕೂಲ್ ಬ್ಯಾಗ್ ನಲ್ಲಿ ಕಂತೆ ಕಂತೆ ಹಣ ಅಧಿಕಾರಿ..... ಬೆಳ್ಳಂಬೆಳಗ್ಗೆ ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್.....ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ದಾಳಿ.....ಹುಬ್ಬಳ್ಳಿಯಲ್ಲಿ NWKRTC ಚಾಲಕ ಕಂ ನಿರ್ವಾಹಕ ಮನೆಯ ಮೇಲೆ ಲೋಕಾಯುಕ್ತ ದಾಳಿ.....ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕೆ ಆರಂಭವಾಗಲಿವೆ ಹೊಸ ಕ್ಲಾಸ್ ಗಳು.....ಆರ್ಥಿಕ ಇಲಾಖೆಯಿಂದ ರಾಜ್ಯದ ಸರ್ಕಾರಿ ನೌಕರರಿಗೆ ತುರ್ತು ಸಂದೇಶ.....