LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸ್ನೇಹಿತರ ಟಾರ್ಚರ್ ಗೆ ಆತ್ಮಹತ್ಯೆ ಮಾಡಿಕೊಂಡ 7ನೇ ತರಗತಿ ವಿದ್ಯಾರ್ಥಿ..... ಘಟನೆ ಯಿಂದ ಬೆಚ್ಚಿಬಿದ್ದ ಪೋಷಕರು.....

ದಾವಣಗೆರೆ -

ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದ ಸ್ನೇಹಿತರು ಹಣ ನೀಡುವಂತೆ ಪೀಡಿಸುತ್ತಿದ್ದುದಕ್ಕೆ ಬೇಸತ್ತ ಬಾಲಕ ನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾ ಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೊಮಟ್ಟಿಯಲ್ಲಿ ನಡೆದಿದೆ. ಮನೋಜ್ ಟಿ.ಆರ್ (13) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕ.

ಗ್ರಾಮದ ನಾಲ್ವರು ಬಾಲಕರು ಫ್ರೀ ಫೈರ್ ಗೇಮ್ ಆಪ್‌ನಲ್ಲಿ ಹಣ ಹಾಕುವಂತೆ ಒತ್ತಾಯಿಸಿದ್ದರು. ಹಣ ತರದೇ ಇದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದೇ ಕಾರಣಕ್ಕೆ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಆರೋಪಿ ಸಿದ್ದಾರೆ.

ಸ್ನೇಹಿತರು ಒತ್ತಾಯಕ್ಕೆ ಮನೆಯಿಂದ ಸುಮಾರು 4 ಲಕ್ಷ ರೂ. ಹಣವನ್ನು ಮನೋಜ್‌ ತೆಗೆದುಕೊಂಡು ಹೋಗಿದ್ದ. ಮನೆಯಲ್ಲಿ ಇಟ್ಟಿದ್ದ ಹಣದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ, ಪರಿಶೀಲನೆ ನಡೆಸಿದಾಗ ನಾಲ್ವರು ಹಣ ತರುವಂತೆ ಒತ್ತಾಯಿಸಿರುವುದು ಗೊತ್ತಾಗಿದೆ. ಅಲ್ಲದೇ ಹಣಕ್ಕಾಗಿ ಮಗನ ಮೇಲೆ ಹಲ್ಲೆ ಸಹ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

ಸುದ್ದಿ ಸಂತೆ ನ್ಯೂಸ್ ದಾವಣಗೆರೆ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗ್ರ್ಯಾಂಡ್ ಓಪನಿಂಗ್ ಗೆ ಗೋವಾ ದಲ್ಲಿ Big Mishra ಸಿದ್ದತೆ.....ಧಾರವಾಡ ಸವಿರುಚಿ ಗೋವಾದಲ್ಲಿ.....ಅಕ್ಟೋಬರ್ 11 ಉದ್ಘಾಟನೆ ಸರ್ವರಿಗೂ ಆಮಂತ್ರಣ ನೀಡಿದ ಸಂಜಯ ಮಿಶ್ರಾ.....ಶಾಲೆಗೆ ತಡವಾಗಿ ಬಂದರೆ ಶಿಕ್ಷಕರ ವೇತನ ಕಡಿತ.....ದಿಟ್ಟ ಹೆಜ್ಜೆ ಇಟ್ಟ ಇಲಾಖೆ..... ಶಾಲೆಯಲ್ಲಿ ಶಿಕ್ಷಕರಿಗೆ ಹೊಸ ನಿಯಮ.....ಶಿಕ್ಷಕರಿಗೆ ತಂದಿಟ್ಟ ನೂರೆಂಟು ನಿಯಮಗಳು.....ಇನ್ಮುಂದೆ ಮಕ್ಕಳನ್ನು ಶಾಲೆಯಲ್ಲಿ 'ಸೋಮಾರಿ' ಎಂದು ಕರೆಯುವಂತಿಲ್ಲ.....ಮಾನಸಿಕ ಆರೋಗ್ಯ ರಕ್ಷಣೆಗೆ ಸರ್ಕಾರದ ಮಹತ್ವದ ಹೆಜ್ಜೆಸ್ನೇಹಿತರ ಟಾರ್ಚರ್ ಗೆ ಆತ್ಮಹತ್ಯೆ ಮಾಡಿಕೊಂಡ 7ನೇ ತರಗತಿ ವಿದ್ಯಾರ್ಥಿ..... ಘಟನೆ ಯಿಂದ ಬೆಚ್ಚಿಬಿದ್ದ ಪೋಷಕರು.....ಶಿಕ್ಷಣ ಇಲಾಖೆಯ ನೌಕಕನಿಂದ ಲಕ್ಷ ಲಕ್ಷ ಹಣ ದುರ್ಬಳಕೆ.....ಬೆಳಕಿಗೆ ಬಂತು ದೊಡ್ಡ ಪ್ರಮಾಣದ ಭ್ರಷ್ಟಾಚಾರ.....8ನೇ ವೇತನ ಆಯೋಗದ ಮಹತ್ವದ ಅಪ್ಡೇಟ್.....ಹೃದಯಾಘಾತದಿಂದ ಶಿಕ್ಷಕ ಅಕ್ಬರ ಅಲಿ ಸೊಲ್ಲಾಪುರ ನಿಧನ.....ದಸರಾ ರಜೆಯಲ್ಲೂ ಆರಂಭಗೊಂಡ ಶಾಲೆಗಳು..... ಮನವಿ ನೀಡಿದ ಹೋರಾಟಗಾರರು.....ಸರ್ಕಾರಿ ಶಾಲೆಯಲ್ಲಿ ವಾಮಾಚಾರ.....ಆತಂಕ ಮೂಡಿಸಿದ ಘಟನೆ.....