LIVE TV LocalCrimeNationalInternationalPoliticsEducationTechnologyEntertainmentSportsFeature
State News

ದಸರಾ ರಜೆಯಲ್ಲೂ ಆರಂಭಗೊಂಡ ಶಾಲೆಗಳು..... ಮನವಿ ನೀಡಿದ ಹೋರಾಟಗಾರರು.....

ಬೀದರ್ -

ರಜೆಯಲ್ಲಿ ಶಾಲಾ ಚಟುವಟಿಕೆಗೆ ವಿರೋಧ ಕ್ರಮಕ್ಕೆ ಶ್ರೀರಾಮ ಸೇನೆ ಆಗ್ರಹ ಹೌದು ದಸರಾ ರಜೆಯಲ್ಲೂ ಖಾಸಗಿ ಶಾಲಾ-ಕಾಲೇಜುಗಳಲ್ಲಿ ವಿವಿಧ ರೀತಿಯ ಚಟುವಟಿಕೆಗಳು, ಪರೀಕ್ಷೆ ನಡೆಸುತ್ತಿದ್ದು ಇದು ಸರ್ಕಾರದ ಆದೇಶದ ಉಲ್ಲಂಘನೆ. ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಶ್ರೀರಾಮ ಸೇನೆ ಬೀದರ್‌ ಜಿಲ್ಲಾ ಘಟಕ ಆಗ್ರಹಿಸಿದೆ.

ಈ ಸಂಬಂಧ ನಗರದಲ್ಲಿ ಡಿಡಿಪಿಐಗೆ ಮನವಿ ಪತ್ರ ಸಲ್ಲಿಸಿರುವ ಸೇನೆಯ ಪದಾಧಿಕಾರಿಗಳು,'ದಸರಾ ರಾಜ್ಯದ ಸಾಂಸ್ಕೃತಿಕ ಪರಂಪರೆ ಹಾಗೂ ನಾಡಿನ ಐತಿಹಾಸಿಕ ಕಾರ್ಯಕ್ರಮ.ಎಲ್ಲರೂ ಕುಟುಂಬದ ವರೊಂದಿಗೆ ಬೆರೆತು ಆಚರಿಸುವ ಹಬ್ಬವಾಗಿದೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ' ಎಂದು ಆರೋಪಿಸಿದ್ದಾರೆ.

'ರಜೆ ಅವಧಿಯಲ್ಲಿ ಪರೀಕ್ಷೆ, ತರಗತಿ ಅಥವಾ ಇತರ ಕಡ್ಡಾಯ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಶಾಲೆಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳ ಬೇಕು ಸಂಬಂಧಪಟ್ಟ ಅಧಿಕಾರಿಗಳು ಶಾಲೆಗಳಿಗೆ ಸರ್ಕಾರಿ ರಜೆ ಆದೇಶ ಕಟ್ಟುನಿಟ್ಟಾಗಿ ಪಾಲಿಸುವಂತೆ ಲಿಖಿತ ನಿರ್ದೇಶನ ನೀಡಬೇಕು' ಎಂದು ಒತ್ತಾಯಿಸಿ ದ್ದಾರೆ.

ಸೇನೆಯ ಜಿಲ್ಲಾಧ್ಯಕ್ಷ ರವಿ ಕೊಡಗಿ, ಉಪಾಧ್ಯಕ್ಷರಾದ ಚಿದಾನಂದ ಹಿಂಡೆ, ಸಾಯಿನಾಥ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್‌ ತಪಶಾಳೆ, ಕಾರ್ಯದರ್ಶಿ ಗಳಾದ ಬಸವರಾಜ ರೇಷ್ಮೆ, ಲಾಲಪ್ಪ, ಬೀದರ್‌ ತಾಲ್ಲೂಕು ಅಧ್ಯಕ್ಷ ಜೇತೇಂದ್ರ ಗುರುಜಡೆ, ಸಂಘಟನಾ ಕಾರ್ಯಾಧ್ಯಕ್ಷ ಯಲ್ಲೇಶ್ ಶಿವಗೊಂಡ, ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮ ಸಂಚಾಲಕ ಗಜಾನನ ಹಂಡೆ, ಸಂಘಟನಾ ಕಾರ್ಯದರ್ಶಿ ಲೋಕೇಶ್ ವಾಲಿ, ಸಂಘಟನಾ ಸಹ ಕಾರ್ಯದರ್ಶಿಗಳಾದ ದತ್ತು ಸಿಂಗ್‌ ರಜಪೂತ್‌, ಸೋಮನಾಥ, ಖಜಾಂಚಿ ಶೈಲೇಂದ್ರ ಗರ್ಗೆ, ಸದಸ್ಯರಾದ ಸಂತೋಷ್‌ ಜೆ.ಪಿ., ಪರಮೇಶ್‌ ಪಟ್ನೆ, ಶಶಿ ಪಾಟೀಲ, ನಾಗರಾಜ ಹೊನ್ನ ಇದ್ದರು.

ಸುದ್ದಿ ಸಂತೆ ನ್ಯೂಸ್ ಬೀದರ್.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗ್ರ್ಯಾಂಡ್ ಓಪನಿಂಗ್ ಗೆ ಗೋವಾ ದಲ್ಲಿ Big Mishra ಸಿದ್ದತೆ.....ಧಾರವಾಡ ಸವಿರುಚಿ ಗೋವಾದಲ್ಲಿ.....ಅಕ್ಟೋಬರ್ 11 ಉದ್ಘಾಟನೆ ಸರ್ವರಿಗೂ ಆಮಂತ್ರಣ ನೀಡಿದ ಸಂಜಯ ಮಿಶ್ರಾ.....ಶಾಲೆಗೆ ತಡವಾಗಿ ಬಂದರೆ ಶಿಕ್ಷಕರ ವೇತನ ಕಡಿತ.....ದಿಟ್ಟ ಹೆಜ್ಜೆ ಇಟ್ಟ ಇಲಾಖೆ..... ಶಾಲೆಯಲ್ಲಿ ಶಿಕ್ಷಕರಿಗೆ ಹೊಸ ನಿಯಮ.....ಶಿಕ್ಷಕರಿಗೆ ತಂದಿಟ್ಟ ನೂರೆಂಟು ನಿಯಮಗಳು.....ಇನ್ಮುಂದೆ ಮಕ್ಕಳನ್ನು ಶಾಲೆಯಲ್ಲಿ 'ಸೋಮಾರಿ' ಎಂದು ಕರೆಯುವಂತಿಲ್ಲ.....ಮಾನಸಿಕ ಆರೋಗ್ಯ ರಕ್ಷಣೆಗೆ ಸರ್ಕಾರದ ಮಹತ್ವದ ಹೆಜ್ಜೆಸ್ನೇಹಿತರ ಟಾರ್ಚರ್ ಗೆ ಆತ್ಮಹತ್ಯೆ ಮಾಡಿಕೊಂಡ 7ನೇ ತರಗತಿ ವಿದ್ಯಾರ್ಥಿ..... ಘಟನೆ ಯಿಂದ ಬೆಚ್ಚಿಬಿದ್ದ ಪೋಷಕರು.....ಶಿಕ್ಷಣ ಇಲಾಖೆಯ ನೌಕಕನಿಂದ ಲಕ್ಷ ಲಕ್ಷ ಹಣ ದುರ್ಬಳಕೆ.....ಬೆಳಕಿಗೆ ಬಂತು ದೊಡ್ಡ ಪ್ರಮಾಣದ ಭ್ರಷ್ಟಾಚಾರ.....8ನೇ ವೇತನ ಆಯೋಗದ ಮಹತ್ವದ ಅಪ್ಡೇಟ್.....ಹೃದಯಾಘಾತದಿಂದ ಶಿಕ್ಷಕ ಅಕ್ಬರ ಅಲಿ ಸೊಲ್ಲಾಪುರ ನಿಧನ.....ದಸರಾ ರಜೆಯಲ್ಲೂ ಆರಂಭಗೊಂಡ ಶಾಲೆಗಳು..... ಮನವಿ ನೀಡಿದ ಹೋರಾಟಗಾರರು.....ಸರ್ಕಾರಿ ಶಾಲೆಯಲ್ಲಿ ವಾಮಾಚಾರ.....ಆತಂಕ ಮೂಡಿಸಿದ ಘಟನೆ.....