ನವದೆಹಲಿ -
ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ನಿರೀಕ್ಷಿಸುತ್ತಿರುವ 8ನೇ ವೇತನ ಆಯೋಗದ ಪ್ರಕ್ರಿಯೆ ಇದೀಗ ಮಹತ್ವದ ಹಂತ ತಲುಪಿದೆ ಆಯೋಗ ತನ್ನ 18 ತಿಂಗಳ ಅವಧಿಯ ಸುಮಾರು 11 ತಿಂಗಳು ಪೂರ್ಣ ಗೊಳಿಸಿದ್ದು ನೌಕರರು ಮತ್ತು ಪಿಂಚಣಿದಾರರ ಸಂಘಟನೆಗಳೊಂದಿಗೆ ಸಮಾಲೋಚನೆ ಮುಂದುವರಿಸಿದೆ.
ಆದರೆ ಆಯೋಗ ವರದಿ ಸಲ್ಲಿಸಿದ ತಕ್ಷಣವೇ ವೇತನ ಪರಿಷ್ಕರಣೆ ಜಾರಿಗೆ ಬರುವುದಿಲ್ಲ ವರದಿ ಸಲ್ಲಿಕೆ ಸರ್ಕಾರದ ಪರಿಶೀಲನೆ ಅಂತಿಮ ಅನುಮೋದನೆ ಹಾಗೂ ಅಧಿಸೂಚನೆ ಸೇರಿದಂತೆ ಹಲವು ಹಂತಗಳ ಬಳಿಕವಷ್ಟೇ ಹೊಸ ವೇತನ ಶ್ರೇಣಿ ಜಾರಿಗೆ ಬರಲಿದೆ.
8ನೇ ವೇತನ ಆಯೋಗಕ್ಕೆ ನಿಗದಿಪಡಿಸಿರುವ 18 ತಿಂಗಳ ಅವಧಿ 2027ರ ಮೇ ತಿಂಗಳವರೆಗೆ ಇದೆ. ದೇಶದ ವಿವಿಧ ನಗರಗಳಲ್ಲಿ ನೌಕರರು ಹಾಗೂ ಪಿಂಚಣಿದಾರರ ಸಂಘಟನೆಗಳೊಂದಿಗೆ ಆಯೋಗ ಈಗಾಗಲೇ ಸಮಾಲೋಚನೆ ನಡೆಸಿದೆ.
ಎಲ್ಲಾ ಸಮಾಲೋಚನೆಗಳು ನವೆಂಬರ್ ವೇಳೆಗೆ ಪೂರ್ಣಗೊಂಡರೆ 2027ರ ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ವರದಿ ಸಲ್ಲಿಕೆಯಾಗಬಹುದು ಎಂಬ ಅಭಿಪ್ರಾಯವೂ ಇದೆಮತ್ತೊಂದೆಡೆ, ಆಯೋಗ ತನ್ನ ನಿಗದಿತ ಅವಧಿಯಂತೆ 2027ರ ಮೇ ವೇಳೆಗೆ ವರದಿ ಸಲ್ಲಿಸುವ ಸಾಧ್ಯತೆಯನ್ನೂ ತಜ್ಞರು ಹೇಳಿದ್ದಾರೆ.
ವೇತನ ಆಯೋಗದ ವರದಿ ಸಲ್ಲಿಕೆಯೇ ಅಂತಿಮ ಹಂತವಲ್ಲ. ಆಯೋಗ ಶಿಫಾರಸುಗಳನ್ನು ಸಲ್ಲಿಸಿದ ಬಳಿಕ ಸರ್ಕಾರ ರಚಿಸುವ ಸಚಿವರ ಸಮೂಹವು ವರದಿಯನ್ನು ಪರಿಶೀಲಿಸಬಹುದು. ಅಗತ್ಯವಿದ್ದರೆ ಸ್ಪಷ್ಟೀಕರಣಗಳನ್ನು ಕೇಳಬಹುದು ಅಥವಾ ಕೆಲವು ಶಿಫಾರಸುಗಳಲ್ಲಿ ಬದಲಾವಣೆಗಳನ್ನು ಸೂಚಿಸ ಬಹುದು.
ಈ ಪರಿಶೀಲನೆ ಪೂರ್ಣಗೊಂಡ ಬಳಿಕ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಂಡು ಶಿಫಾರಸುಗಳನ್ನು ಅಧಿಸೂಚನೆ ಮೂಲಕ ಜಾರಿಗೆ ತರಬೇಕಾಗುತ್ತದೆ. ಹೀಗಾಗಿ ವರದಿ ಸಲ್ಲಿಕೆ ಮತ್ತು ವಾಸ್ತವಿಕ ವೇತನ ಪರಿಷ್ಕರಣೆ ನಡುವೆ ಕೆಲವು ತಿಂಗಳ ಅಂತರ ಇರುವ ಸಾಧ್ಯತೆಯಿದೆ.
ಸುದ್ದಿ ಸಂತೆ ನ್ಯೂಸ್ ನವದೆಹಲಿ......