LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ಶಾಲೆಯಲ್ಲಿ ವಾಮಾಚಾರ.....ಆತಂಕ ಮೂಡಿಸಿದ ಘಟನೆ.....

ಹಾವೇರಿ -

ಸರ್ಕಾರಿ ಶಾಲೆಯ ಎದುರು ಬಾವಲಿ ಕೊಂದು ಮೊಟ್ಟೆ, ನಿಂಬೆಹಣ್ಣು ಇರಿಸಿ ವಾಮಾಚಾರದ ಪೂಜೆ ಮಾಡಿದ ಘಟನೆ ಹಾವೇರಿ ಯಲ್ಲಿ ನಡೆದಿದೆ ಜಿಲ್ಲೆಯ ರಾಣಿಬೆನ್ನೂರು ನಗರದ ನಗರಸಭಾ ಕ್ರೀಡಾಂಗಣದ ಬಳಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.7ರ ಎದುರು ಇರುವ ಶಾಲೆಯಲ್ಲಿ ಯಾರೋ ದುರುಳರು ವಾಮಾಚಾರ ನಡೆಸಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಶಾಲೆಯ ಎದುರು ಬಾವಲಿಯನ್ನು ಕೊಂದು ಅದರ ಸುತ್ತ ಮೊಟ್ಟೆ ಹಾಗೂ ನಿಂಬೆಹಣ್ಣುಗಳನ್ನು ಇಟ್ಟು ವಾಮಾಚಾರ ನಡೆಸಲಾಗಿದೆ.ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.ಶಾಲೆಯ ಸಮೀಪವೇ ಇಂತಹ ಕೃತ್ಯ ನಡೆದಿರುವುದು ಪೋಷಕರು ಹಾಗೂ ಸಾರ್ವಜನಿಕರಲ್ಲಿ ಕಳವಳಕ್ಕೆ ಕಾರಣವಾಗಿದೆ.

ದಸರಾ ರಜೆ ಆರಂಭವಾಗಿರುವುದರಿಂದ ಶಾಲೆಗೆ ಮಕ್ಕಳು ಬಂದಿರಲಿಲ್ಲ ಘಟನೆ ಗಮನಕ್ಕೆ ಬರುತ್ತಿದ್ದಂತೆ ಪೌರಕಾರ್ಮಿಕರು ಸ್ಥಳಕ್ಕೆ ತೆರಳಿ ವಾಮಾಚಾರದ ವಸ್ತುಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದ್ದಾರೆ. ಶಾಲೆಯ ಸುತ್ತಮುತ್ತ ಇಂತಹ ಘಟನೆಗಳು ಮರು ಕಳಿಸದಂತೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಘಟನೆಯ ಕುರಿತು ಪರಿಶೀಲನೆ ನಡೆಸಿ ಕೃತ್ಯ ಎಸಗಿದವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳ ಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹಾವೇರಿ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗ್ರ್ಯಾಂಡ್ ಓಪನಿಂಗ್ ಗೆ ಗೋವಾ ದಲ್ಲಿ Big Mishra ಸಿದ್ದತೆ.....ಧಾರವಾಡ ಸವಿರುಚಿ ಗೋವಾದಲ್ಲಿ.....ಅಕ್ಟೋಬರ್ 11 ಉದ್ಘಾಟನೆ ಸರ್ವರಿಗೂ ಆಮಂತ್ರಣ ನೀಡಿದ ಸಂಜಯ ಮಿಶ್ರಾ.....ಶಾಲೆಗೆ ತಡವಾಗಿ ಬಂದರೆ ಶಿಕ್ಷಕರ ವೇತನ ಕಡಿತ.....ದಿಟ್ಟ ಹೆಜ್ಜೆ ಇಟ್ಟ ಇಲಾಖೆ..... ಶಾಲೆಯಲ್ಲಿ ಶಿಕ್ಷಕರಿಗೆ ಹೊಸ ನಿಯಮ.....ಶಿಕ್ಷಕರಿಗೆ ತಂದಿಟ್ಟ ನೂರೆಂಟು ನಿಯಮಗಳು.....ಇನ್ಮುಂದೆ ಮಕ್ಕಳನ್ನು ಶಾಲೆಯಲ್ಲಿ 'ಸೋಮಾರಿ' ಎಂದು ಕರೆಯುವಂತಿಲ್ಲ.....ಮಾನಸಿಕ ಆರೋಗ್ಯ ರಕ್ಷಣೆಗೆ ಸರ್ಕಾರದ ಮಹತ್ವದ ಹೆಜ್ಜೆಸ್ನೇಹಿತರ ಟಾರ್ಚರ್ ಗೆ ಆತ್ಮಹತ್ಯೆ ಮಾಡಿಕೊಂಡ 7ನೇ ತರಗತಿ ವಿದ್ಯಾರ್ಥಿ..... ಘಟನೆ ಯಿಂದ ಬೆಚ್ಚಿಬಿದ್ದ ಪೋಷಕರು.....ಶಿಕ್ಷಣ ಇಲಾಖೆಯ ನೌಕಕನಿಂದ ಲಕ್ಷ ಲಕ್ಷ ಹಣ ದುರ್ಬಳಕೆ.....ಬೆಳಕಿಗೆ ಬಂತು ದೊಡ್ಡ ಪ್ರಮಾಣದ ಭ್ರಷ್ಟಾಚಾರ.....8ನೇ ವೇತನ ಆಯೋಗದ ಮಹತ್ವದ ಅಪ್ಡೇಟ್.....ಹೃದಯಾಘಾತದಿಂದ ಶಿಕ್ಷಕ ಅಕ್ಬರ ಅಲಿ ಸೊಲ್ಲಾಪುರ ನಿಧನ.....ದಸರಾ ರಜೆಯಲ್ಲೂ ಆರಂಭಗೊಂಡ ಶಾಲೆಗಳು..... ಮನವಿ ನೀಡಿದ ಹೋರಾಟಗಾರರು.....ಸರ್ಕಾರಿ ಶಾಲೆಯಲ್ಲಿ ವಾಮಾಚಾರ.....ಆತಂಕ ಮೂಡಿಸಿದ ಘಟನೆ.....