ಧಾರವಾಡ -
ಶಿಕ್ಷಕ, ಸಾಹಿತಿ ಅಕ್ಬರ ಅಲಿ ಸೊಲ್ಲಾಪುರ ನಿಧನ ರಾಗಿದ್ದಾರೆ ಹೌದು KSPSTA ಧಾರವಾಡ ಶಹರ ಘಟಕದ ಕಾರ್ಯಾಧ್ಯಕ್ಷರು, ಸಾಹಿತಿಗಳು ಹಾಗೂ ಧಾರವಾಡ ದ GHPUS ನಂ. 2 ಮಾಳಾಪುರ ಶಾಲೆಯ ಶಿಕ್ಷಕರಾಗಿದ್ದ ಅಕ್ಬರ ಅಲಿ ಸೊಲ್ಲಾಪುರ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಕೊಡುಗೆ ನೀಡಿದ್ದರು. KSPSTA ಧಾರವಾಡ ಶಹರ ಘಟಕದ ಕಾರ್ಯಾಧ್ಯಕ್ಷರಾಗಿ ಶಿಕ್ಷಕರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಅಕಾಲಿಕ ನಿಧನದಿಂದ ಸಹೋದ್ಯೋಗಿಗಳು, ವಿದ್ಯಾರ್ಥಿಗಳು, ಸ್ನೇಹಿತರು ಹಾಗೂ ಬಂಧುಗಳಲ್ಲಿ ತೀವ್ರ ದುಃಖ ಆವರಿಸಿದೆ.
ಮೃತರು ಧಾರವಾಡ ದ ಜನ್ನತ ನಗರದ ನಿವಾಸಿ ಯಾಗಿದ್ದು, ಅವರ ಅಂತ್ಯಕ್ರಿಯೆ ಗುರುವಾರ ಸಂಜೆ 5.30ಕ್ಕೆ ಜನ್ನತನಗರ ಖಬರಸ್ಥಾನದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.ಅವರ ನಿಧನಕ್ಕೆ ಶಿಕ್ಷಕ ಸಮುದಾಯ ಹಾಗೂ ಗಣ್ಯರು ಸಂತಾಪ ಸೂಚಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ.....