LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಸೈಕಲ್ ತೆಗೆದುಕೊಳ್ಳಲು ಕೂಡಿಟ್ಟಿ ಹಣವನ್ನು ರಾಮ ಮಂದಿರ ನಿರ್ಮಾಣಕ್ಕೆ ಸಮರ್ಪಣೆ ಮಾಡಿದ ಪುಟಾಣಿ - ಪುಟಾಣಿ ಕಾರ್ಯ ನೋಡಿ ಅವಳಿಗೆ ಸೈಕಲ್ ಗಿಪ್ಟ್

ಧಾರವಾಡ -

ಸೈಕಲ್ ತಗೆದುಕೊಳ್ಳಲು ಪುಟಾಣಿ ಮಗುವೊಂದು ಹಣವನ್ನು ಕೂಡಿಟ್ಟಿದ್ದಳು. ಕಳೆದ ಒಂದು ವರುಷದಿಂದ ಸೈಕಲ್ ಗಾಗಿ ಕೂಡಿಟ್ಟ ಹಣಕ್ಕೆ ಇನ್ನಷ್ಟು ಕೂಡಿಸಿದರಾಯಿತು ಎಂದುಕೊಂಡಿದ್ದಳು ಪುಟಾಣಿ.

ಆದರೆ ಇಂದು ಅವರ ಮನೆಗೆ ರಾಮ ಮಂದಿರ ನಿರ್ಮಾಣಕ್ಕಾಗಿ ಧನ ಸಹಾಯ ಕೇಳಲು ಹೋಗಿದ್ದಾರೆ. ಮನೆಗೆ ಹೋಗುತ್ತಲೇ ಪುಟಾಣಿ ತಾನು ಕೂಡಿಟ್ಟ 611 ರೂಪಾಯಿ ಹಣವನ್ನು ದೇಣಿಗೆ ನೀಡಿದ್ದಾಳೆ.

ಹೌದು ಇಂಥದೊಂದು ವಿಶೇಷ ಚಿತ್ರಣವೊಂದು ಧಾರವಾಡದಲ್ಲಿ ಕಂಡು ಬಂದಿದೆ‌. ಧಾರವಾಡದ ಕಮಲಾಪುರ ಹೊಸೂರ ಓಣಿಯ ಪ್ರೀತಿ ಮುರಗೇಶ ಹೊನಕೇರಿಗೆ ಇಂದು ದೇಣಿಗೆ ನೀಡಿದ್ದಾಳೆ.

ಪುಟಾಣಿ ಪ್ರೀತಿ ತಾನು ಕೂಡಿಟ್ಟ ಹಣವನ್ನು ನೀಡುತ್ತಿದ್ದಂತೆ ಸ್ಥಳಿಯ ರಾಮಭಕ್ತರು ಆ ಪುಟಾಣಿಯ ಕಾರ್ಯ ಮೆಚ್ಚಿ ಅವಳಿಗೆ ಮರಳಿ ಹೊಸ ಸೈಕಲ‌ ಕೊಡಿಸಿ ಅಭಿನಂದನೆಗಳು ಸಲ್ಲಿಸಿ ಶುಭಾಶಯಗಳು ಕೋರಿದರು.

ಈ ಸಂದರ್ಭದಲ್ಲಿ ಶ್ರೀನಿವಾಸ ಕೋಟ್ಯಾನ ಬಸವರಾಜ ಬಾಳಗಿ ,ಈರಯ್ಯ ರಾಚಯ್ಯನವರ, ನಿಂಗಪ್ಪ ಸಪ್ಪುರಿ, ಬಸವರಾಜ ಗಮನಗೋಳ, ಮುರಗೇಶ ಹೊನಕೇರಿ, ಹಾಗೂ ಗುರು ಹಿರಿಯರು ಉಪಸ್ಥಿತರಿದ್ದರು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......