ಕಲಬುರಗಿ -
ಕರ್ತವ್ಯದ ವೇಳೆ ಮದ್ಯ ಸೇವಿಸಿದ ಹೆಡ್ ಕಾನ್ಸ್ಟೇಬಲ್ ಅಮಾನತುಗೊಳಿಸಿ ಕಲ್ಬುರ್ಗಿ ಎಸ್ ಪಿ ಅಡ್ಡರು ಶ್ರೀನಿವಾಸಲು ಆದೇಶ ಹೊರಡಿಸಿದ್ದಾರೆ. ಮಹಗಾಂವ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಹನುಮಂತ ಸಸ್ಪೆಂಡ್ ಆಗಿದ್ದು ಕಲ್ಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮಹಾಗಾವ್ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸು ತ್ತಿದ್ದರು.
ಮಹಾಗವ್ ಠಾಣಾ ವ್ಯಾಪ್ತಿಯ ಅರಸೂರು ಗ್ರಾಮ ದಲ್ಲಿ ಗಲಾಟೆ ಆಗಿತ್ತು ಈ ವೇಳೆ ಬಂದೋಬಸ್ತಿಗೆ ಹಣಮಂತನನ್ನು ನಿಯೋಚನೆ ಮಾಡಲಾಗಿತ್ತು. ಆದರೆ ಕರ್ತವ್ಯದ ವೇಳೆ ಹೆಡ್ ಕಾನ್ಸ್ಟೇಬಲ್ ಹನುಮಂತ ಮದ್ಯ ಸೇವನೆ ಮಾಡಿದ್ದಾನೆ ಮಸೀದಿ ಚಾವಣಿಯ ಮೇಲೆ ನಿಂತು ಮಧ್ಯ ಸೇವಿಸಿದ್ದ ಹನುಮಂತ. ಇದನ್ನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಗ್ರಾಮಸ್ಥರು ಹರಿಬಿಟ್ಟಿದ್ದರು. ತನಿಖೆ ಬೆಲೆ ಹೆಡ್ ಕಾನ್ಸ್ಟೇಬಲ್ ಮಧ್ಯ ಸೇವನೆ ಮಾಡಿರುವುದು ದೃಢವಾಗಿದ್ದು ಕರ್ತವ್ಯ ಲೋಕದ ಆರೋಪದ ಇದೀಗ ಅಮಾನತು ಆಗಿದ್ದಾನೆ.
ಸುದ್ದಿ ಸಂತೆ ನ್ಯೂಸ್ ಕಲಬುರಗಿ.....