ಬದಾಮಿ -
ಅಕ್ಟೋಬರ್ 11 ರಂದು ಬಾದಾಮಿಯ ಐತಿಹಾಸಿಕ ಶಕ್ತಿ ದೇವತೆ ಬನಶಂಕರಿ ದರ್ಶನಕ್ಕೆ 7 ಗಂಟೆಗಳ ನಿರ್ಬಂಧ ಇದೆ ಹೌದು ಬಾಗಲಕೋಟೆ ಜಿಲ್ಲೆಯ ಬಾದಾಮಿ ಸಮೀಪದ ಇತಿಹಾಸ ಪ್ರಸಿದ್ಧ ಸುಕ್ಷೇತ್ರ ಬನಶಂಕರಿ ದೇವಸ್ಥಾನದಲ್ಲಿ ಆಶ್ವಯುಜ ನವರಾತ್ರಿ ಹಾಗೂ ಘಟಸ್ಥಾಪನೆಯ ಅಂಗವಾಗಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.
ಸ್ವಚ್ಛತಾ ಕಾರ್ಯದ ಹಿನ್ನೆಲೆಯಲ್ಲಿ ಅಕ್ಟೋಬರ್ 11 ರಂದು ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 4:00 ಗಂಟೆಯವರೆಗೆ ಸಾರ್ವಜನಿಕರಿಗೆ ಧರ್ಮದರ್ಶನ ಹಾಗೂ ಯಾವುದೇ ರೀತಿಯ ಧಾರ್ಮಿಕ ಸೇವೆಗಳು ಲಭ್ಯವಿರುವುದಿಲ್ಲ.ಅಂದು ಮಧ್ಯಾಹ್ನ 4:00 ಗಂಟೆಯ ಬಳಿಕ ದೇವಾಲಯದಲ್ಲಿ ಎಲ್ಲಾ ಪೂಜಾ ಕೈಂಕರ್ಯ ಗಳು ಹಾಗೂ ಭಕ್ತರ ದರ್ಶನ ಎಂದಿನಂತೆ ಯಥಾ ಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿಯ ಚೇರ್ಮನ್ ವೆಂಕಟೇಶ ಪೂಜಾರ ಅವರು ಮಾಹಿತಿ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬಾದಾಮಿ.....