LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ಶಾಲೆಯಲ್ಲಿ ಭೀಕರ ಅಗ್ನಿ ಅವಘಡ: ರಜೆ ಇದ್ದಿದ್ದರಿಂದ ತಪ್ಪಿದ ಭಾರೀ ದುರಂತ

ಮಂಡ್ಯ -

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಕಸ್ಮಿಕ ವಾಗಿ ಬೆಂಕಿ ಕಾಣಿಸಿಕೊಂಡು ಎರಡು ಕೊಠಡಿ ಗಳಲ್ಲಿದ್ದ ಪೀಠೋಪಕರಣಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಮಹಾಲಯ ಅಮಾವಾಸ್ಯೆಯ ರಜೆ ಇದ್ದ ಕಾರಣ ಶಾಲೆಯಲ್ಲಿ ವಿದ್ಯಾರ್ಥಿಗಳಾಗಲಿ, ಶಿಕ್ಷಕರಾಗಲಿ ಇರಲಿಲ್ಲ.

ಹೀಗಾಗಿ ಸಂಭವಿಸಬಹುದಾಗಿದ್ದ ಭಾರಿ ಪ್ರಾಣಾ ಪಾಯವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ.ಮಧ್ಯಾಹ್ನದ ವೇಳೆ ಶಾಲೆಯ ಒಂದು ಕೊಠಡಿಯಲ್ಲಿ ಆರಂಭವಾದ ಬೆಂಕಿ ನೋಡನೋಡು ತ್ತಿದ್ದಂತೆ ಪಕ್ಕದ ಕೊಠಡಿಗೂ ಆವರಿಸಿಕೊಂಡಿತು. ದಟ್ಟ ಹೊಗೆಯೊಂದಿಗೆ ಜ್ವಾಲೆ ಹೆಚ್ಚಾಗುತ್ತಿದ್ದಂತೆ ಕೊಠಡಿ ಯಲ್ಲಿದ್ದ ಡೆಸ್ಕ್‌ಗಳು, ಮೇಜು, ಕುರ್ಚಿಗಳು ಸೇರಿದಂತೆ ಪ್ರಮುಖ ಶಾಲಾ ಸಾಮಗ್ರಿಗಳು ಅಗ್ನಿಗೆ ಆಹುತಿ ಯಾದವು.

ಶಾಲೆಯ ಕಟ್ಟಡದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ಠಾಣೆಗೆ ಮಾಹಿತಿ ರವಾನಿಸಿದರು. ಸ್ಥಳಕ್ಕೆ ದೌಡಾ ಯಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದು, ಅಕ್ಕಪಕ್ಕದ ಕಟ್ಟಡಗಳಿಗೆ ಹರಡದಂತೆ ತಡೆದರು.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಈ ಅವಘಡ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಂಡವಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದು ವರಿದಿದೆ.

ಸುದ್ದಿ ಸಂತೆ ನ್ಯೂಸ್ ಮಂಡ್ಯ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BEO ಯಲ್ಲಮ್ಮ ಅಮಾನತು.....ಸರ್ಕಾರಿ ಶಾಲೆಯಲ್ಲಿ ಭೀಕರ ಅಗ್ನಿ ಅವಘಡ: ರಜೆ ಇದ್ದಿದ್ದರಿಂದ ತಪ್ಪಿದ ಭಾರೀ ದುರಂತBEO ಕಚೇರಿಯಲ್ಲಿ ಹಗಲಲ್ಲೂ ಉರಿಯುವ ಲೈಟ್ ಗಳು.....ಕಂಡು ಕಾಣದಂತೆ ಕುಳಿತಿದ್ದಾರೆಯೇ ಇಲಾಖೆಯ ಅಧಿಕಾರಿಗಳು.....ಧಾರವಾಡ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಹೊಸ ರೂಪ ತಂದ ಗುತ್ತಿಗೆದಾರ ಫಕ್ರುದ್ದೀನ್ ಅಲಿ ಕುಂದಗೋಳ.....ಫೇವರ್ಸ್ ಅಳವಡಿಸಿ ಅಂದಚೆಂದ ಹೆಚ್ಚಿಸಿದ ಗುತ್ತಿಗೆದಾರ.....ಧಾರವಾಡ ಜಯನಗರ ಬಿಗ್ ಮಿಶ್ರಾಗೆ ಮೊದಲ ವರ್ಷದ ಸಂಭ್ರಮ.....ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ ಸಂಜಯ ಮಿಶ್ರಾ ರವರ ಬಿಗ್ ಮಿಶ್ರಾ.....ಬಾದಾಮಿ ಬನಶಂಕರಿ ದೇವಾಲಯಕ್ಕೆ ಹೋಗ್ತಾ ಇದ್ದರೆ ಪ್ಲಾನ್ ಬದಲಾವಣೆ ಮಾಡಿಕೊಳ್ಳಿ.....ಅಕ್ಟೋಬರ್ 11 ರಂದು 7 ಗಂಟೆ ದರ್ಶನ ಬಂದ್.....ಒಂಬತ್ತು ಸರ್ಕಾರಿ ಅಧಿಕಾರಿಗಳಿಗೆ ನೌಕರರಿಗೆ ಸಮನ್ಸ್ ಜಾರಿ.....ಲೋಕಾಯುಕ್ತ ನ್ಯಾಯಾಲಯದಿಂದ ಜಾರಿ.....8th Pay Commission ವಿಳಂಬವಾದರೆ ಹೆಚ್ಚಾಗಲಿದೆ ಅರಿಯರ್ಸ್.....ಹೆಡ್ ಕಾನ್ಸ್ಟೇಬಲ್ ಹನುಮಂತ ಅಮಾನತು..... ಅಮಾನತು ಮಾಡಿದ SP.....ಪೊಟೊ ವಿಡಿಯೋ ವೈರಲ್ ಬೆನ್ನಲ್ಲೇ ಶಿಕ್ಷಕ ಅಮಾನತು.....