LIVE TV LocalCrimeNationalInternationalPoliticsEducationTechnologyEntertainmentSportsFeature
State News

ಒಂಬತ್ತು ಸರ್ಕಾರಿ ಅಧಿಕಾರಿಗಳಿಗೆ ನೌಕರರಿಗೆ ಸಮನ್ಸ್ ಜಾರಿ.....ಲೋಕಾಯುಕ್ತ ನ್ಯಾಯಾಲಯದಿಂದ ಜಾರಿ.....

ತುಮಕೂರು -

ತುಮಕೂರು ಜಿಲ್ಲೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಜಮೀನು ಅಕ್ರಮ ಭೂಪರಿವರ್ತನೆ ಮತ್ತು ಪರಬಾರೆ ಮಾಡಿರುವ ಆರೋಪಕ್ಕೆ ಸಂಬಂಧಿಸಿ ದಂತೆ, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೇರಿದಂತೆ ಒಟ್ಟು 9 ಅಧಿಕಾರಿಗಳಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಸಾಮಾಜಿಕ ಕಾರ್ಯಕರ್ತ ಎಚ್.ಜಿ. ರಮೇಶ್ ಅವರು ಸಲ್ಲಿಸಿದ್ದ ಖಾಸಗಿ ದೂರಿನ (ಪಿಸಿಆರ್) ಆಧಾರದ ಮೇಲೆ ಲೋಕಾಯುಕ್ತದ 7ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಮತ್ತು ವಿಶೇಷ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬರುವ ನವೆಂಬರ್ 16ರಂದು ಸೂಕ್ತ ದಾಖಲೆಗ ಳೊಂದಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ

ತುಮುಲು ಗ್ರಾಮದ ವಿವಿಧ ಸರ್ವೇ ನಂಬರ್‌ಗಳಿಗೆ ಸೇರಿದ ಬರೋಬ್ಬರಿ 43.11 ಎಕರೆ ಸರ್ಕಾರಿ ಜಮೀನನ್ನು ಯಾವುದೇ ನಿಯಮಗಳನ್ನು ಪಾಲಿಸದೆ ಖಾಸಗಿಯವರ ಪಾಲು ಮಾಡಲಾಗಿದೆ ಎಂದು ದೂರಿ ನಲ್ಲಿ ಗಂಭೀರ ಆರೋಪ ಮಾಡಲಾಗಿದೆ ಸ್ಥಳ ಪರಿಶೀಲನೆ ಹಾಗೂ ಅಧಿಕೃತ ದಾಖಲೆಗಳನ್ನು ಪರಿಶೀಲಿಸದೆಯೇ ಕಡತಗಳನ್ನು ರವಾನೆ ಮಾಡ ಲಾಗಿದ್ದು, ಅಧಿಕಾರಿಗಳು ಆಮಿಷಕ್ಕೆ ಒಳಗಾಗಿ ಈ ಭೂ ಪರಿವರ್ತನೆಗೆ ಶಿಫಾರಸು ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ರಮೇಶ್ ತಿಳಿಸಿದ್ದಾರೆ.

ಸರ್ವೇ ನಂಬರ್ 22ರ ಜಮೀನು ಸಂಪೂರ್ಣವಾಗಿ ಸರ್ಕಾರಕ್ಕೆ ಸೇರಿದ್ದು, ಅದನ್ನು ಮಂಜೂರು ಮಾಡಲು ಅವಕಾಶವಿಲ್ಲ ಎಂದು ಶಿರಸ್ತೇದಾರ್ ಸ್ಪಷ್ಟವಾಗಿ ಟಿಪ್ಪಣಿ ಬರೆದಿದ್ದರು. ಅಲ್ಲದೆ, ಭೂ ಸುಧಾರಣೆ ಕಾಯ್ದೆ ಸೆಕ್ಷನ್ 77(ಎ) ಅಡಿಯಲ್ಲಿಯೂ ಸರ್ಕಾರಿ ಜಮೀನು ಮಂಜೂರು ಮಾಡಲು ಬರುವುದಿಲ್ಲ ಎಂದು ಸಿಬ್ಬಂದಿ ಅಭಿಪ್ರಾಯಪಟ್ಟಿದ್ದರು. ಆದರೂ, ಶಿರಸ್ತೇದಾರ್ ಅವರ ಎಚ್ಚರಿಕೆಯ ಟಿಪ್ಪಣಿಯನ್ನು ಕಡೆಗಣಿಸಿ, ಕಡತವನ್ನು ಸರಿಯಾಗಿ ಪರಿಶೀಲಿಸದೆ ಜಿಲ್ಲಾಧಿಕಾರಿ ಗಳು ಭೂ ಪರಿವರ್ತನೆಗೆ ಅನುಮೋದನೆ ನೀಡಿದ್ದಾರೆ 

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತ್ರವಲ್ಲದೆ, ಅಂದಿನ ಎಫ್‌ಡಿಎ, ಮಧುಗಿರಿಯ ನಿವೃತ್ತ ಎಸಿ, ಇಬ್ಬರು ತಹಶೀಲ್ದಾರರು, ಕಂದಾಯ ನಿರೀಕ್ಷಕರು ಹಾಗೂ ಕುಣಿಗಲ್ ಮತ್ತು ಮಧುಗಿರಿಯ ಅಂದಿನ ಉಪ ನೋಂದಣಾಧಿಕಾರಿಗಳು ಸೇರಿದಂತೆ ಒಟ್ಟು 9 ಹಿರಿಯ ಅಧಿಕಾರಿಗಳಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

ಯಾವುದೇ ಕಾನೂನುಬದ್ಧ ದಾಖಲೆಗಳಿಲ್ಲದಿದ್ದರೂ ಮತ್ತು 11ಇ (11E) ಸ್ಕೆಚ್ ಇಲ್ಲದೆಯೇ ಜಮೀನು ನೋಂದಣಿ ಮಾಡಿಕೊಡಲಾಗಿದೆ. ಜಿಲ್ಲಾಧಿಕಾರಿ ಯವರ ಡಿಜಿಟಲ್ ಸಹಿಯನ್ನೂ ದುರುಪಯೋಗ ಪಡಿಸಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಆಸ್ತಿಯನ್ನು ಕಬಳಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಖಾಸಗಿ ವ್ಯಕ್ತಿಗಳ ಜೊತೆ ಸರ್ಕಾರಿ ಹಿರಿಯ ಅಧಿಕಾರಿ ಗಳೇ ಕೈಜೋಡಿಸಿ ಈ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 175(3) ರ ಅಡಿಯಲ್ಲಿ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಲಾಗಿದೆ. ಲೋಕಾಯುಕ್ತ ಪೊಲೀಸರಿಂದ ಈ ಕುರಿತು ಸಮಗ್ರ ತನಿಖೆ ನಡೆಸು ವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.

ಸುದ್ದಿ ಸಂತೆ ನ್ಯೂಸ್ ತುಮಕೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BEO ಯಲ್ಲಮ್ಮ ಅಮಾನತು.....ಸರ್ಕಾರಿ ಶಾಲೆಯಲ್ಲಿ ಭೀಕರ ಅಗ್ನಿ ಅವಘಡ: ರಜೆ ಇದ್ದಿದ್ದರಿಂದ ತಪ್ಪಿದ ಭಾರೀ ದುರಂತBEO ಕಚೇರಿಯಲ್ಲಿ ಹಗಲಲ್ಲೂ ಉರಿಯುವ ಲೈಟ್ ಗಳು.....ಕಂಡು ಕಾಣದಂತೆ ಕುಳಿತಿದ್ದಾರೆಯೇ ಇಲಾಖೆಯ ಅಧಿಕಾರಿಗಳು.....ಧಾರವಾಡ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಹೊಸ ರೂಪ ತಂದ ಗುತ್ತಿಗೆದಾರ ಫಕ್ರುದ್ದೀನ್ ಅಲಿ ಕುಂದಗೋಳ.....ಫೇವರ್ಸ್ ಅಳವಡಿಸಿ ಅಂದಚೆಂದ ಹೆಚ್ಚಿಸಿದ ಗುತ್ತಿಗೆದಾರ.....ಧಾರವಾಡ ಜಯನಗರ ಬಿಗ್ ಮಿಶ್ರಾಗೆ ಮೊದಲ ವರ್ಷದ ಸಂಭ್ರಮ.....ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ ಸಂಜಯ ಮಿಶ್ರಾ ರವರ ಬಿಗ್ ಮಿಶ್ರಾ.....ಬಾದಾಮಿ ಬನಶಂಕರಿ ದೇವಾಲಯಕ್ಕೆ ಹೋಗ್ತಾ ಇದ್ದರೆ ಪ್ಲಾನ್ ಬದಲಾವಣೆ ಮಾಡಿಕೊಳ್ಳಿ.....ಅಕ್ಟೋಬರ್ 11 ರಂದು 7 ಗಂಟೆ ದರ್ಶನ ಬಂದ್.....ಒಂಬತ್ತು ಸರ್ಕಾರಿ ಅಧಿಕಾರಿಗಳಿಗೆ ನೌಕರರಿಗೆ ಸಮನ್ಸ್ ಜಾರಿ.....ಲೋಕಾಯುಕ್ತ ನ್ಯಾಯಾಲಯದಿಂದ ಜಾರಿ.....8th Pay Commission ವಿಳಂಬವಾದರೆ ಹೆಚ್ಚಾಗಲಿದೆ ಅರಿಯರ್ಸ್.....ಹೆಡ್ ಕಾನ್ಸ್ಟೇಬಲ್ ಹನುಮಂತ ಅಮಾನತು..... ಅಮಾನತು ಮಾಡಿದ SP.....ಪೊಟೊ ವಿಡಿಯೋ ವೈರಲ್ ಬೆನ್ನಲ್ಲೇ ಶಿಕ್ಷಕ ಅಮಾನತು.....