LIVE TV LocalCrimeNationalInternationalPoliticsEducationTechnologyEntertainmentSportsFeature
State News

8th Pay Commission ವಿಳಂಬವಾದರೆ ಹೆಚ್ಚಾಗಲಿದೆ ಅರಿಯರ್ಸ್.....

ಬೆಂಗಳೂರು -

8th Pay Commission ವಿಳಂಬವಾದರೆ ಸರ್ಕಾರಿ ನೌಕರರಿಗೆ ಅರಿಯರ್ಸ್ ಹೆಚ್ಚಾಗಬಹುದೇ ಹೌದು ಹೊಸ ವೇತನ ಶ್ರೇಣಿ ಪರಿಣಾಮಕಾರಿ ದಿನಾಂಕ ಮತ್ತು ವಾಸ್ತವಿಕ ಅನುಷ್ಠಾನದ ನಡುವೆ ಅಂತರ ಉಂಟಾದರೆ, ಆ ಅವಧಿಗೆ ಬಾಕಿ ಮೊತ್ತ ಅಥವಾ ಅರಿಯರ್ಸ್ ಪಾವತಿಸುವ ಪ್ರಶ್ನೆ ಎದುರಾಗಬಹುದು. ಜನವರಿ 1, 2026ರಿಂದ ಪರಿಷ್ಕೃತ ವೇತನ ಅನ್ವಯಿ ಸುವ ನಿರ್ಧಾರವಾದರೆ ಅನುಷ್ಠಾನ ಮತ್ತಷ್ಟು ವಿಳಂಬವಾದಷ್ಟು ಬಾಕಿ ಮೊತ್ತದ ಅವಧಿಯೂ ಹೆಚ್ಚಾಗಬಹುದು.

ಆದರೆ ಅರಿಯರ್ಸ್ ಪಾವತಿ, ಲೆಕ್ಕಾಚಾರ ಮತ್ತು ನಿಖರ ಅನುಷ್ಠಾನ ದಿನಾಂಕದ ಬಗ್ಗೆ ಅಂತಿಮ ನಿರ್ಧಾರವನ್ನು ಕೇಂದ್ರ ಸರ್ಕಾರವೇ ತೆಗೆದು ಕೊಳ್ಳಲಿದೆ.ಹಿಂದಿನ ವೇತನ ಆಯೋಗಗಳ ಅವಧಿ ಯನ್ನು ಗಮನಿಸಿದರೆ, ವರದಿ ಸಿದ್ಧಪಡಿಸುವ ಪ್ರಕ್ರಿಯೆಗೆ ಸಾಕಷ್ಟು ಸಮಯ ಬೇಕಾಗಿರುವುದು ಕಂಡುಬರುತ್ತದೆ. 7ನೇ ವೇತನ ಆಯೋಗವನ್ನು 2014ರ ಫೆಬ್ರವರಿಯಲ್ಲಿ ರಚಿಸಲಾಗಿದ್ದು, 2015ರ ನವೆಂಬರ್‌ನಲ್ಲಿ ವರದಿ ಸಲ್ಲಿಸಿತ್ತು. 6ನೇ ವೇತನ ಆಯೋಗವನ್ನು 2006ರ ಅಕ್ಟೋಬರ್‌ನಲ್ಲಿ ರಚಿಸಲಾಗಿದ್ದು, 2008ರ ಮಾರ್ಚ್‌ನಲ್ಲಿ ವರದಿ ಸಲ್ಲಿಸಿತ್ತು.

ಹೀಗಾಗಿ 8ನೇ ವೇತನ ಆಯೋಗದ 18 ತಿಂಗಳ ಗಡುವು ಪ್ರಮುಖವಾಗಿದ್ದು, ವರದಿ ಸಲ್ಲಿಕೆಯ ನಂತರದ ಸರ್ಕಾರಿ ಪರಿಶೀಲನೆ ಮತ್ತು ಅನುಷ್ಠಾನ ಪ್ರಕ್ರಿಯೆಯೇ ನೌಕರರ ಸಂಬಳ ಏರಿಕೆ ಯಾವಾಗ ಕೈಗೆ ಸಿಗಲಿದೆ ಎಂಬುದನ್ನು ನಿರ್ಧರಿಸಲಿದ್ದು ಶೀಘ್ರದಲ್ಲೇ ಈ ಒಂದು ಕುರಿತು ನೌಕರರಿಗೆ ಸ್ಪಷ್ಟವಾದ ಮಾಹಿತಿ ಸಿಗಲಿದೆ‌

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BEO ಯಲ್ಲಮ್ಮ ಅಮಾನತು.....ಸರ್ಕಾರಿ ಶಾಲೆಯಲ್ಲಿ ಭೀಕರ ಅಗ್ನಿ ಅವಘಡ: ರಜೆ ಇದ್ದಿದ್ದರಿಂದ ತಪ್ಪಿದ ಭಾರೀ ದುರಂತBEO ಕಚೇರಿಯಲ್ಲಿ ಹಗಲಲ್ಲೂ ಉರಿಯುವ ಲೈಟ್ ಗಳು.....ಕಂಡು ಕಾಣದಂತೆ ಕುಳಿತಿದ್ದಾರೆಯೇ ಇಲಾಖೆಯ ಅಧಿಕಾರಿಗಳು.....ಧಾರವಾಡ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಹೊಸ ರೂಪ ತಂದ ಗುತ್ತಿಗೆದಾರ ಫಕ್ರುದ್ದೀನ್ ಅಲಿ ಕುಂದಗೋಳ.....ಫೇವರ್ಸ್ ಅಳವಡಿಸಿ ಅಂದಚೆಂದ ಹೆಚ್ಚಿಸಿದ ಗುತ್ತಿಗೆದಾರ.....ಧಾರವಾಡ ಜಯನಗರ ಬಿಗ್ ಮಿಶ್ರಾಗೆ ಮೊದಲ ವರ್ಷದ ಸಂಭ್ರಮ.....ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ ಸಂಜಯ ಮಿಶ್ರಾ ರವರ ಬಿಗ್ ಮಿಶ್ರಾ.....ಬಾದಾಮಿ ಬನಶಂಕರಿ ದೇವಾಲಯಕ್ಕೆ ಹೋಗ್ತಾ ಇದ್ದರೆ ಪ್ಲಾನ್ ಬದಲಾವಣೆ ಮಾಡಿಕೊಳ್ಳಿ.....ಅಕ್ಟೋಬರ್ 11 ರಂದು 7 ಗಂಟೆ ದರ್ಶನ ಬಂದ್.....ಒಂಬತ್ತು ಸರ್ಕಾರಿ ಅಧಿಕಾರಿಗಳಿಗೆ ನೌಕರರಿಗೆ ಸಮನ್ಸ್ ಜಾರಿ.....ಲೋಕಾಯುಕ್ತ ನ್ಯಾಯಾಲಯದಿಂದ ಜಾರಿ.....8th Pay Commission ವಿಳಂಬವಾದರೆ ಹೆಚ್ಚಾಗಲಿದೆ ಅರಿಯರ್ಸ್.....ಹೆಡ್ ಕಾನ್ಸ್ಟೇಬಲ್ ಹನುಮಂತ ಅಮಾನತು..... ಅಮಾನತು ಮಾಡಿದ SP.....ಪೊಟೊ ವಿಡಿಯೋ ವೈರಲ್ ಬೆನ್ನಲ್ಲೇ ಶಿಕ್ಷಕ ಅಮಾನತು.....