LIVE TV LocalCrimeNationalInternationalPoliticsEducationTechnologyEntertainmentSportsFeature
State News

8 ಶಿಕ್ಷಕರ ಅಮಾನತು - ರಾಜ್ಯದಲ್ಲಿ ಮುಂದುವರೆದ ಶಿಕ್ಷಕರ ಅಮಾನತು.....

ಬೆಂಗಳೂರು -

ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ಕಾರ್ಯಕ್ಕೆ ಹಾಜರಾಗದೇ, ಅಧಿಕಾರಿಗಳ ಕರೆ ಸ್ವೀಕರಿಸದೆ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಯಲ್ಲಿ ಒಟ್ಟು  8 ಸಹಶಿಕ್ಷಕರನ್ನು ಅಮಾನತುಗೊಳಿಸ ಲಾಗಿದೆ'

ಡಿಡಿಪಿಐ ಎಸ್‌.ಟಿ.ಜವರೇಗೌಡ ತಿಳಿಸಿದ್ದಾರೆ.ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್‌ಕುಮಾರ್‌ ಆದೇಶದ ಮೇರೆಗೆ ಕ್ರಮ ವಹಿಸಲಾಗಿದೆ' ಎಂದು ಅವರು ಮಾಹಿತಿ ನೀಡಿದ್ದಾರೆ.ಕೊಪ್ಪಳ ದಲ್ಲಿ ಸಮೀಕ್ಷೆಗೆ ಬರದೇ ಕರ್ತವ್ಯಲೋಪ ಎಸಗಿದ್ದ ತಾಲ್ಲೂಕಿನ ಜೂಲಕುಂಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕ ರಾಮಪ್ಪ ತಳವಾರ ಅವರನ್ನು ಅಮಾನತು ಪಡಿಸಲಾಗಿದೆ.ರಾಮಪ್ಪ ತಳವಾರ ಸಮೀಕ್ಷೆ ಕೆಲಸ ಆರಂಭಿಸಿಲ್ಲ ಎಂಬುದು ಸೇರಿ ಕುಷ್ಟಗಿ ಸಿಆರ್‌ಪಿ ವರದಿ ಆಧರಿಸಿ ಕ್ರಮ ಜರುಗಿಸ ಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಸಮೀಕ್ಷೆಗೆ ಗೈರು: 57 ಸಿಬ್ಬಂದಿಗೆ ನೋಟಿಸ್
ಲಿಂಗಸುಗೂರು (ರಾಯಚೂರು ಜಿಲ್ಲೆ) ಸಮೀಕ್ಷೆಗೆ ನಿರಂತರವಾಗಿ ಗೈರಾದ 57 ಸಿಬ್ಬಂದಿಗೆ ತಾಲ್ಲೂಕು ಮಟ್ಟದ ಸಮನ್ವಯ ಸಮಿತಿ ಅಧ್ಯಕ್ಷ, ಉಪ ವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

'ತಾಲ್ಲೂಕಿನಲ್ಲಿ ಸಮೀಕ್ಷೆಗೆ ನಿಯೋಜನೆಗೊಂಡ ಸಿಬ್ಬಂದಿ ಪೈಕಿ 57 ಮಂದಿ ಸತತವಾಗಿ ಗೈರಾಗಿದ್ದಾರೆ. ಹಾಜರಾ ಗಲು ಸೂಚಿಸಿದರೂ ಬಂದಿಲ್ಲ. ನಿರ್ಲಕ್ಷ್ಯದಿಂದಾಗಿ ಸಮೀಕ್ಷಾ ಕಾರ್ಯ ಕುಂಠಿತವಾಗಿದೆ. 24 ಗಂಟೆಯೊಳಗೆ ಸಮಜಾಯಿಷಿ ನೀಡಿ' ಎಂದು ಸೂಚಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......