LIVE TV LocalCrimeNationalInternationalPoliticsEducationTechnologyEntertainmentSportsFeature
State News

8ನೇ ವೇತನ ಆಯೋಗ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಹೆಚ್ಚಳ.....

ನವದೆಹಲಿ -

8ನೇ ವೇತನ ಆಯೋಗ ಸರ್ಕಾರಿ ನೌಕರರ ಮೂಲ ವೇತನ ₹47,600 ದಿಂದ ₹1,22,332 ಮೀರುವ ಸಾಧ್ಯತೆ ಹೌದು ಕೇಂದ್ರ ಸರ್ಕಾರಿ ನೌಕರರು ಬಹು ದಿನಗಳಿಂದ ನಿರೀಕ್ಷಿಸುತ್ತಿರುವ 8ನೇ ವೇತನ ಆಯೋಗದ ಪ್ರಕ್ರಿಯೆ ಮುಂದುವರಿದಿದೆ ನಿಗದಿತ ಅವಧಿಯೊಳಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಿರುವ ಶಿಫಾರಸುಗಳನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಆಯೋಗವು ವಿವಿಧ ನೌಕರರ ಸಂಘಟನೆಗಳು ಹಾಗೂ ಪಿಂಚಣಿದಾರರ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ

ಈ ಹಿನ್ನೆಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಹಲವು ಪ್ರಮುಖ ಸಭೆಗಳು ನಡೆಯಲಿವೆ.8ನೇ ವೇತನ ಆಯೋಗವು ಕರ್ನಾಟಕದ ಬೆಂಗಳೂರಿನಲ್ಲಿ ಅಕ್ಟೋಬರ್ 7 ಮತ್ತು 8ರಂದು ಸಭೆ ನಡೆಸಲಿದೆ. ಬಳಿಕ ಅಕ್ಟೋಬರ್ 22 ಮತ್ತು 23ರಂದು ಮುಂಬೈನಲ್ಲಿ ಸಭೆ ನಡೆಸಿ, ಕೇಂದ್ರ ಸರ್ಕಾರಿ ನೌಕರರ ಸಂಘಟನೆ ಗಳು ಹಾಗೂ ಪಿಂಚಣಿದಾರರ ಸಂಘಗಳ ಪ್ರತಿನಿಧಿ ಗಳ ಅಭಿಪ್ರಾಯಗಳನ್ನು ಆಲಿಸಲಿದೆ ಈ ಸಭೆಗಳಲ್ಲಿ ವೇತನ ಪರಿಷ್ಕರಣೆ, ಪಿಂಚಣಿ, ಫಿಟ್‌ಮೆಂಟ್ ಫ್ಯಾಕ್ಟರ್ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳು ಚರ್ಚೆ ಯಾಗುವ ಸಾಧ್ಯತೆಯಿದೆ.

ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರ ನೇತೃತ್ವದ 8ನೇ ವೇತನ ಆಯೋಗವು ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನೌಕರರ ಸಂಘಟನೆಗಳು ಹಾಗೂ ಪಿಂಚಣಿದಾರರ ಸಂಘಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ. ಆಯೋಗಕ್ಕೆ ನೀಡಿರುವ 18 ತಿಂಗಳ ಕಾಲಾವಧಿಯಲ್ಲಿ ಈಗಾಗಲೇ ಸುಮಾರು 11 ತಿಂಗಳುಗಳು ಪೂರ್ಣ ಗೊಂಡಿದ್ದು, ಮುಂದಿನ ವರ್ಷದ ಮೇ ವೇಳೆಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವ ಯೋಜನೆಯಿದೆ.

8ನೇ ವೇತನ ಆಯೋಗದ ಶಿಫಾರಸುಗಳ ಜಾರಿಯ ನಂತರ ಕೇಂದ್ರ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಾಗಲಿದೆ ಎಂಬುದರಲ್ಲಿ 'ಫಿಟ್‌ಮೆಂಟ್ ಫ್ಯಾಕ್ಟರ್' ಪ್ರಮುಖ ಪಾತ್ರ ವಹಿಸಲಿದೆ 7ನೇ ವೇತನ ಆಯೋಗದ ಸಂದರ್ಭದಲ್ಲಿ 2.57ರ ಫಿಟ್‌ಮೆಂಟ್ ಫ್ಯಾಕ್ಟರ್ ಬಳಸಲಾಗಿತ್ತು. ಇದೀಗ ವಿವಿಧ ನೌಕರರ ಸಂಘಟನೆಗಳು ಇದಕ್ಕಿಂತ ಹೆಚ್ಚಿನ ಫಿಟ್‌ಮೆಂಟ್ ಫ್ಯಾಕ್ಟರ್ ನಿಗದಿಪಡಿಸುವಂತೆ ಒತ್ತಾಯಿಸುತ್ತಿವೆ.

ನ್ಯಾಷನಲ್ ಕೌನ್ಸಿಲ್-ಜಾಯಿಂಟ್ ಕನ್ಸಲ್ಟೇಟಿವ್ ಮೆಷಿನರಿ (NC-JCM) 3.833ರ ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು ಶಿಫಾರಸು ಮಾಡಿದೆ. ಭಾರತೀಯ ರೈಲ್ವೆ ತಾಂತ್ರಿಕ ಮೇಲ್ವಿಚಾರಕರ ಸಂಘ (IRTSA) ವಿವಿಧ ಹಂತಗಳ ನೌಕರರಿಗೆ 2.92ರಿಂದ 4.38 ರವರೆಗೆ ಫಿಟ್‌ಮೆಂಟ್ ಫ್ಯಾಕ್ಟರ್ ನೀಡುವಂತೆ ಶಿಫಾರಸು ಮಾಡಿದೆ. AIDEF, FNPO ಸೇರಿದಂತೆ ಕೆಲವು ಸಂಘಟನೆಗಳು 3.38ರ ಫಿಟ್‌ಮೆಂಟ್ ಫ್ಯಾಕ್ಟರ್‌ಗೆ ಒತ್ತಾಯಿಸಿವೆ.

ಫಿಟ್‌ಮೆಂಟ್ ಫ್ಯಾಕ್ಟರ್‌ನ ಆಧಾರದ ಮೇಲೆ ಹೊಸ ಮೂಲ ವೇತನವನ್ನು ನಿರ್ಧರಿಸಲಾಗುತ್ತದೆ. ನಂತರ ಹೊಸ ಮೂಲ ವೇತನದ ಆಧಾರದಲ್ಲಿ ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ಸಾರಿಗೆ ಭತ್ಯೆ ಸೇರಿದಂತೆ ಇತರ ಸೌಲಭ್ಯಗಳನ್ನು ಲೆಕ್ಕ ಹಾಕಲಾ ಗುತ್ತದೆ. ಹೀಗಾಗಿ ಫಿಟ್‌ಮೆಂಟ್ ಫ್ಯಾಕ್ಟರ್ ಎಷ್ಟು ನಿಗದಿಯಾಗುತ್ತದೆ ಎಂಬುದು ನೌಕರರ ಅಂತಿಮ ವೇತನದ ಮೇಲೆ ಪ್ರಮುಖ ಪರಿಣಾಮ ಬೀರುವ ಸಾಧ್ಯತೆಯಿದೆ.

ಸದ್ಯಕ್ಕೆ ಸರ್ಕಾರವು 8ನೇ ವೇತನ ಆಯೋಗದ ಫಿಟ್‌ಮೆಂಟ್ ಫ್ಯಾಕ್ಟರ್ ಕುರಿತು ಯಾವುದೇ ಅಂತಿಮ ಘೋಷಣೆ ಮಾಡಿಲ್ಲ. ಆದ್ದರಿಂದ 7ನೇ ವೇತನ ಆಯೋಗದಲ್ಲಿ ಬಳಸಲಾದ 2.57ರ ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು ಆಧಾರವಾಗಿಟ್ಟುಕೊಂಡು ಅಂದಾಜು ಲೆಕ್ಕಾಚಾರ ಮಾಡಲಾಗಿದೆ.7ನೇ ವೇತನ ಆಯೋಗದ ಪ್ರಕಾರ ಲೆವೆಲ್ 6ರ ಮೂಲ ವೇತನ ₹35,400, ಲೆವೆಲ್ 7ರ ಮೂಲ ವೇತನ ₹44,900 ಮತ್ತು ಲೆವೆಲ್ 8ರ ಮೂಲ ವೇತನ ₹47,600 ಇದೆ.

2.57ರ ಫಿಟ್‌ಮೆಂಟ್ ಫ್ಯಾಕ್ಟರ್ ಆಧಾರದಲ್ಲಿ ಲೆಕ್ಕ ಹಾಕಿದರೆ, ಲೆವೆಲ್ 6ರ ₹35,400 ಮೂಲ ವೇತನವು ಸುಮಾರು ₹90,978ಕ್ಕೆ, ಲೆವೆಲ್ 7ರ ₹44,900 ಮೂಲ ವೇತನವು ಸುಮಾರು ₹1,15,393ಕ್ಕೆ ಹಾಗೂ ಲೆವೆಲ್ 8ರ ₹47,600 ಮೂಲ ವೇತನವು ಸುಮಾರು ₹1,22,332ಕ್ಕೆ ಏರಿಕೆಯಾಗಬಹುದು ಎಂದು ಅಂದಾ ಜಿಸಲಾಗಿದೆ.

ನ್ಯಾಷನಲ್ ಕೌನ್ಸಿಲ್-ಜಾಯಿಂಟ್ ಕನ್ಸಲ್ಟೇಟಿವ್ ಮೆಷಿನರಿ (NC-JCM) 3.833ರ ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು ಶಿಫಾರಸು ಮಾಡಿದೆ. ಭಾರತೀಯ ರೈಲ್ವೆ ತಾಂತ್ರಿಕ ಮೇಲ್ವಿಚಾರಕರ ಸಂಘ (IRTSA) ವಿವಿಧ ಹಂತಗಳ ನೌಕರರಿಗೆ 2.92ರಿಂದ 4.38 ರವರೆಗೆ ಫಿಟ್‌ಮೆಂಟ್ ಫ್ಯಾಕ್ಟರ್ ನೀಡುವಂತೆ ಶಿಫಾರಸು ಮಾಡಿದೆ. AIDEF, FNPO ಸೇರಿದಂತೆ ಕೆಲವು ಸಂಘಟನೆಗಳು 3.38ರ ಫಿಟ್‌ಮೆಂಟ್ ಫ್ಯಾಕ್ಟರ್‌ಗೆ ಒತ್ತಾಯಿಸಿವೆ.

ಫಿಟ್‌ಮೆಂಟ್ ಫ್ಯಾಕ್ಟರ್‌ನ ಆಧಾರದ ಮೇಲೆ ಹೊಸ ಮೂಲ ವೇತನವನ್ನು ನಿರ್ಧರಿಸಲಾಗುತ್ತದೆ. ನಂತರ ಹೊಸ ಮೂಲ ವೇತನದ ಆಧಾರದಲ್ಲಿ ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ಸಾರಿಗೆ ಭತ್ಯೆ ಸೇರಿದಂತೆ ಇತರ ಸೌಲಭ್ಯಗಳನ್ನು ಲೆಕ್ಕ ಹಾಕಲಾಗು ತ್ತದೆ. ಹೀಗಾಗಿ ಫಿಟ್‌ಮೆಂಟ್ ಫ್ಯಾಕ್ಟರ್ ಎಷ್ಟು ನಿಗದಿಯಾಗುತ್ತದೆ ಎಂಬುದು ನೌಕರರ ಅಂತಿಮ ವೇತನದ ಮೇಲೆ ಪ್ರಮುಖ ಪರಿಣಾಮ ಬೀರುವ ಸಾಧ್ಯತೆಯಿದೆ.

ಸದ್ಯಕ್ಕೆ ಸರ್ಕಾರವು 8ನೇ ವೇತನ ಆಯೋಗದ ಫಿಟ್‌ಮೆಂಟ್ ಫ್ಯಾಕ್ಟರ್ ಕುರಿತು ಯಾವುದೇ ಅಂತಿಮ ಘೋಷಣೆ ಮಾಡಿಲ್ಲ. ಆದ್ದರಿಂದ 7ನೇ ವೇತನ ಆಯೋಗದಲ್ಲಿ ಬಳಸಲಾದ 2.57ರ ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು ಆಧಾರವಾಗಿಟ್ಟುಕೊಂಡು ಅಂದಾಜು ಲೆಕ್ಕಾಚಾರ ಮಾಡಲಾಗಿದೆ. 7ನೇ ವೇತನಆಯೋಗದ ಪ್ರಕಾರ ಲೆವೆಲ್ 6ರ ಮೂಲ ವೇತನ ₹35,400, ಲೆವೆಲ್ 7ರ ಮೂಲ ವೇತನ ₹44,900 ಮತ್ತು ಲೆವೆಲ್ 8ರ ಮೂಲ ವೇತನ ₹47,600 ಇದೆ.

2.57ರ ಫಿಟ್‌ಮೆಂಟ್ ಫ್ಯಾಕ್ಟರ್ ಆಧಾರದಲ್ಲಿ ಲೆಕ್ಕ ಹಾಕಿದರೆ, ಲೆವೆಲ್ 6ರ ₹35,400 ಮೂಲ ವೇತನವು ಸುಮಾರು ₹90,978ಕ್ಕೆ, ಲೆವೆಲ್ 7ರ ₹44,900 ಮೂಲ ವೇತನವು ಸುಮಾರು ₹1,15,393ಕ್ಕೆ ಹಾಗೂ ಲೆವೆಲ್ 8ರ ₹47,600 ಮೂಲ ವೇತನವು ಸುಮಾರು ₹1,22,332ಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಲೆವೆಲ್ 6ರ ನೌಕರರಿಗೆ ₹35,400ರಿಂದ ₹90,978, ಲೆವೆಲ್ 7ರ ನೌಕರರಿಗೆ ₹44,900ರಿಂದ ₹1,15,393 ಹಾಗೂ ಲೆವೆಲ್ 8ರ ನೌಕರರಿಗೆ ₹47,600ರಿಂದ ₹1,22,332ರವರೆಗೆ ವೇತನ ಹೆಚ್ಚಳವಾಗಬಹುದು ಎಂಬ ಲೆಕ್ಕಾಚಾರಗಳು ಸದ್ಯ ಚರ್ಚೆಯಲ್ಲಿವೆ. ಆದರೆ ಇವು ಅಧಿಕೃತ ವೇತನ ಅಂಕಿಅಂಶಗಳಲ್ಲ ಎಂಬೊ ದನ್ನು ಗಮನಿಸಬೇಕು.

8ನೇ ವೇತನ ಆಯೋಗವು ಅಂತಿಮವಾಗಿ ಶಿಫಾರಸು ಮಾಡುವ ಫಿಟ್‌ಮೆಂಟ್ ಫ್ಯಾಕ್ಟರ್, DA, HRA ಮತ್ತು ಇತರ ಭತ್ಯೆಗಳ ಲೆಕ್ಕಾಚಾರದ ಆಧಾರದ ಮೇಲೆ ನೌಕರರ ಒಟ್ಟು ವೇತನದಲ್ಲಿ ವ್ಯತ್ಯಾಸವಾಗಬ ಹುದು. ಹೀಗಾಗಿ 3.0, 3.38, 3.833 ಅಥವಾ 4.38 ರಂತಹ ಫಿಟ್‌ಮೆಂಟ್ ಫ್ಯಾಕ್ಟರ್‌ಗಳ ಆಧಾರದ ಮೇಲೆ ಹರಿದಾಡುತ್ತಿರುವ ಲೆಕ್ಕಾಚಾರಗಳನ್ನು ಸದ್ಯಕ್ಕೆ ಅಂದಾಜುಗಳೆಂದು ಮಾತ್ರ ಪರಿಗಣಿಸಬೇಕಾಗಿದೆ.

ಆಯೋಗವು ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಬಳಿಕ ಸರ್ಕಾರದ ಮಟ್ಟದಲ್ಲಿ ಶಿಫಾರಸುಗಳ ಪರಿಶೀಲನೆ ನಡೆಯಲಿದೆ. ಅಗತ್ಯ ಬದಲಾವಣೆಗ ಳೊಂದಿಗೆ ಶಿಫಾರಸುಗಳನ್ನು ಅಂತಿಮಗೊಳಿಸಿ ನಂತರ ಜಾರಿಗೆ ತರುವ ಪ್ರಕ್ರಿಯೆ ನಡೆಯಬಹುದು. ಹೀಗಾಗಿ ವರದಿ ಸಲ್ಲಿಕೆಯಾದ ತಕ್ಷಣವೇ ವೇತನ ಪರಿಷ್ಕರಣೆ ಜಾರಿಗೆ ಬರಲಿದೆ ಎಂದು ಹೇಳಲು ಸಾಧ್ಯವಿಲ್ಲ. 8ನೇ ವೇತನ ಆಯೋಗದ ಅಂತಿಮ ಶಿಫಾರಸುಗಳು ಮತ್ತು ಸರ್ಕಾರದ ನಿರ್ಧಾರದ ಬಳಿಕವೇ ಕೇಂದ್ರ ಸರ್ಕಾರಿ ನೌಕರರಿಗೆ ವಾಸ್ತವವಾಗಿ ಎಷ್ಟು ವೇತನ ಹೆಚ್ಚಳವಾಗಲಿದೆ ಎಂಬುದು ಸ್ಪಷ್ಟವಾಗಲಿದೆ.

ಸುದ್ದಿ ಸಂತೆ ನ್ಯೂಸ್ ನವದೆಹಲಿ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
1K ಆಸೆಗೆ ಬಿದ್ದು ಜೈಲು ಸೇರಿದ ಸರ್ಕಾರಿ ನೌಕರ.....ಲೋಕಾಯುಕ್ತ ಟ್ರ್ಯಾಪ್.....ಬಾಗಿಲು ಮುಚ್ಚುವ ಹಂತಕ್ಕೆ ಸಾವಿರಾರು ಶಾಲೆಗಳು.....ಪಣಜಿಯಲ್ಲಿ Big Mishra Pedha ಗ್ರ್ಯಾಂಡ್ ಓಪನಿಂಗ್......ಅಕ್ಟೋಬರ್ 11ರಂದು Big Mishra Pedha ಶುಭಾರಂಭ.....ರಾಜ್ಯದ ಜಿಪಂ, ತಾಪಂ ಚುನಾವಣೆಗೆ ಮುಹೂರ್ತ.....ಸರ್ಕಾರದಿಂದ ಮೀಸಲಾತಿ ಪಟ್ಟಿ ಪ್ರಕಟ.....8ನೇ ವೇತನ ಆಯೋಗ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಹೆಚ್ಚಳ.....ಸರ್ಕಾರಿ ನೌಕರರಿಗೆ ದಸರಾ ಬಂಪರ್ ಗಿಫ್ಟ್.....DA , HRA ಹೆಚ್ಚಳ.....ನಾಲ್ವರು ವಿದ್ಯಾರ್ಥಿಗಳು ಸಾವು.....ಭೀಕರ ಘಟನೆ ಯಿಂದ ಬೆಚ್ಚಿಬಿದ್ದ ಶಾಲಾ ಆವರಣ.....ರಾಜ್ಯದ ಸರ್ಕಾರಿ ಶಾಲೆಯಲ್ಲಿ ಅಮಾನವೀಯ ಘಟನೆ..... ತಡವಾಗಿ ಬೆಳಕಿಗೆ ಬಂದ ಪ್ರಕರಣ ಪೊಟೊ ಗಳು ವೈರಲ್.....6ನೇ ತರಗತಿಯಿಂದ ಮಕ್ಕಳಿಗೆ AI ಪಾಠ....ಸರ್ಕಾರಿ ಶಾಲೆಗಳ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ.....ಮದ್ಯಮುಕ್ತ ಕಂದಕೂರಿನಲ್ಲಿ ಬೃಹತ್ ಪಾದಯಾತ್ರೆ.....ಪೊಲೀಸ್ ಇನ್ಸ್ಪೆಕ್ಟರ್ ವಿಶ್ವನಾಥ ಹಿರೇಗೌಡರ ಟೀಮ್ ಜೊತೆ ಜನರ ಬೃಹತ್ ಜಾಗೃತಿ ನಡಿಗೆ.....