ತ್ರಿಪುರ -
ಸರ್ಕಾರಿ ನೌಕರರಿಗೆ ದಸರಾ ಬಂಪರ್ ಗಿಫ್ಟ್ ನೀಡಿಸದ ತ್ರಿಪುರ ರಾಜ್ಯ ಶೇ 3ರಷ್ಟು DA ಶೇ 2ರಷ್ಟು HRA ಹೆಚ್ಚಳ ಮಾಡಿ ಆದೇಶ ಮಾಡಿದೆ ಹೌದು ಅಕ್ಟೋಬರ್ 6ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಮುಖ್ಯಮಂತ್ರಿ ಮಾಣಿಕ್ ಸಾಹಾ ಮತ್ತು ಹಣಕಾಸು ಸಚಿವ ಪ್ರಣಜಿತ್ ಸಿಂಘಾ ರಾಯ್ ಅವರು ಸರ್ಕಾರದ ನಿರ್ಧಾರದ ವಿವರಗಳನ್ನು ತಿಳಿಸಿದ್ದಾರೆ. ಪರಿಷ್ಕೃತ DA ಮತ್ತು DR ದರಗಳು 2026ರ ಅಕ್ಟೋಬರ್ 1ರಿಂದಲೇ ಜಾರಿಗೆ ಬರಲಿದ್ದು, ಅಕ್ಟೋಬರ್ ತಿಂಗಳ ವೇತನ ಮತ್ತು ಪಿಂಚಣಿಯನ್ನು ಪರಿಷ್ಕೃತ ದರದ ಆಧಾರದ ಮೇಲೆ ಪಾವತಿಸಲಾ ಗುತ್ತದೆ
DA ಹೆಚ್ಚಳದ ಬಳಿಕ ತ್ರಿಪುರಾ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಮೂಲ ವೇತನದ ಶೇ.44ಕ್ಕೆ ಏರಿಕೆಯಾಗಲಿದೆ. ಇದೇ ರೀತಿ ಪಿಂಚಣಿದಾರರ DR ಕೂಡ ಶೇ.44ಕ್ಕೆ ಹೆಚ್ಚಳವಾಗಲಿದೆ. ಇದರಿಂದ ರಾಜ್ಯದ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಪ್ರತಿ ತಿಂಗಳು ಹೆಚ್ಚುವರಿ ಹಣ ದೊರೆಯಲಿದೆ. DA ಮತ್ತು DR ಹೆಚ್ಚಳದಿಂದ ತ್ರಿಪುರಾ ಸರ್ಕಾರದ ಮೇಲೆ ವಾರ್ಷಿಕ ಸುಮಾರು ₹300 ಕೋಟಿ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂದು ಮುಖ್ಯಮಂತ್ರಿ ಮಾಣಿಕ್ ಸಾಹಾ ತಿಳಿಸಿದ್ದಾರೆ.
ನೌಕರರು ಮತ್ತು ಪಿಂಚಣಿದಾರರ ಆರ್ಥಿಕ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.ಇನ್ನು DA ಹೆಚ್ಚಳದ ಜೊತೆಗೆ HRAಯಲ್ಲೂ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಮೂಲ ವೇತನದ ಶೇ.8ರಷ್ಟು HRA ಪಡೆಯುತ್ತಿದ್ದ ನೌಕರರಿಗೆ ಇದೀಗ ಶೇ.10ರಷ್ಟು HRA ದೊರೆಯಲಿದೆ. ಅಂದರೆ HRA ದರದಲ್ಲಿ ಶೇ.2ರಷ್ಟು ಹೆಚ್ಚಳವಾಗಿದೆ ಉದಾಹರಣೆಗೆ, ₹30,000 ಮೂಲ ವೇತನ ಪಡೆಯುವ ನೌಕರರಿಗೆ ಈ ಹಿಂದೆ HRA ರೂಪದಲ್ಲಿ ₹2,400 ಸಿಗುತ್ತಿತ್ತು. ಇದೀಗ ಶೇ.10ರ ಹೊಸ ದರ ಅನ್ವಯವಾಗುವು ದರಿಂದ ₹3,000 HRA ದೊರೆಯಲಿದೆ ಅಂದರೆ ಪ್ರತಿ ತಿಂಗಳು ₹600 ಹೆಚ್ಚುವರಿ HRA ಸಿಗಲಿದೆ.
HRAಗೆ ಸಂಬಂಧಿಸಿದ ಗರಿಷ್ಠ ಮಿತಿಯನ್ನೂ ಸರ್ಕಾರ ಹೆಚ್ಚಿಸಿದೆ. ಈ ಹಿಂದೆ ತಿಂಗಳಿಗೆ ಗರಿಷ್ಠ ₹3,000 HRA ಪಡೆಯಬಹುದಾಗಿತ್ತು. ಇದೀಗ ಈ ಮಿತಿಯನ್ನು ₹10,000ಕ್ಕೆ ಏರಿಸಲಾಗಿದೆ ಇದರಿಂದ ಹೆಚ್ಚಿನ ಮೂಲ ವೇತನ ಹೊಂದಿರುವ ನೌಕರರಿಗೆ ಹಿಂದಿನ ಮಿತಿಗಿಂತ ಹೆಚ್ಚಿನ ಮನೆ ಬಾಡಿಗೆ ಭತ್ಯೆ ಪಡೆಯಲು ಅವಕಾಶ ಸಿಗಲಿದೆ. ಉದಾಹರಣೆಗೆ, ₹70,000 ಮೂಲ ವೇತನ ಹೊಂದಿರುವ ನೌಕರರಿಗೆ ಶೇ.10ರ ದರದಲ್ಲಿ ₹7,000 HRA ದೊರೆಯಲಿದೆ. ಈ ಹಿಂದೆ ಇದ್ದ ₹3,000 ಗರಿಷ್ಠ ಮಿತಿಗೆ ಹೋಲಿಸಿದರೆ ಇದು ಗಮನಾರ್ಹ ಹೆಚ್ಚಳ ವಾಗಿದೆ.
ತ್ರಿಪುರಾದಲ್ಲಿ 2018ರಿಂದ 7ನೇ ವೇತನ ಆಯೋಗದ ಶಿಫಾರಸುಗಳು ಜಾರಿಯಲ್ಲಿವೆ. ಆದರೆ DA ವಿಚಾರ ದಲ್ಲಿ ರಾಜ್ಯ ಸರ್ಕಾರಿ ನೌಕರರು ಕೇಂದ್ರ ಸರ್ಕಾರಿ ನೌಕರರಿಗಿಂತ ಕಡಿಮೆ ದರ ಪಡೆಯುತ್ತಿದ್ದಾರೆ. ಈ ಅಂತರವನ್ನು ಹಂತಹಂತವಾಗಿ ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಮಾಣಿಕ್ ಸಾಹಾ ತಿಳಿಸಿದ್ದಾರೆ. ಕೇಂದ್ರ ಸರ್ಕಾರಿ ನೌಕರರು ಪ್ರಸ್ತುತ ಪಡೆಯುತ್ತಿರುವ DA ದರ ಮತ್ತು ತ್ರಿಪುರಾ ರಾಜ್ಯ ಸರ್ಕಾರಿ ನೌಕರರ DA ದರದ ನಡುವೆ ಇರುವ ವ್ಯತ್ಯಾಸವೂ ಈ ಹಿನ್ನೆಲೆಯಲ್ಲಿ ಗಮನ ಸೆಳೆಯುತ್ತಿದೆ. ರಾಜ್ಯ ಸರ್ಕಾರವು ತನ್ನ ನೌಕರರ ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ವಿಚಾರ ಗಳನ್ನು ಸಕ್ರಿಯವಾಗಿ ಪರಿಶೀಲಿಸುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಇನ್ನು 8ನೇ ವೇತನ ಆಯೋಗದ ಜಾರಿಗೆ ಸಂಬಂಧಿ ಸಿದ ವಿಚಾರವೂ ರಾಜ್ಯ ಸರ್ಕಾರಿ ನೌಕರರಲ್ಲಿ ಕುತೂಹಲ ಮೂಡಿಸಿದೆ. ಕೇಂದ್ರ ಸರ್ಕಾರ 8ನೇ ವೇತನ ಆಯೋಗದ ಪ್ರಕ್ರಿಯೆಯನ್ನು ಆರಂಭಿಸಿರುವ ಹಿನ್ನೆಲೆಯಲ್ಲಿ ತ್ರಿಪುರಾ ಸರ್ಕಾರವೂ ಈ ಬೆಳವಣಿಗೆ ಯನ್ನು ಗಮನಿಸುತ್ತಿದೆ. ಮುಂದಿನ ದಿನಗಳಲ್ಲಿ ಕೇಂದ್ರದ ಶಿಫಾರಸುಗಳು ಮತ್ತು ಅವುಗಳ ಅನುಷ್ಠಾನದ ಆಧಾರದ ಮೇಲೆ ರಾಜ್ಯದಲ್ಲೂ ವೇತನ ಪರಿಷ್ಕರಣೆ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಯಿದೆ. ತ್ರಿಪುರಾ ಸರ್ಕಾರದ ಇತ್ತೀಚಿನ ನಿರ್ಧಾರ ದಿಂದ ರಾಜ್ಯ ಸರ್ಕಾರಿ ನೌಕರರಿಗೆ DAಯಲ್ಲಿ ಶೇ.3 ರಷ್ಟು ಮತ್ತು HRAಯಲ್ಲಿ ಶೇ.2ರಷ್ಟು ಹೆಚ್ಚಳವಾಗಲಿದೆ. ಪಿಂಚಣಿದಾರರ DR ಕೂಡ ಶೇ.3ರಷ್ಟು ಏರಿಕೆಯಾ ಗಲಿದೆ. ಈ ಪರಿಷ್ಕರಣೆಗಳು ಅಕ್ಟೋಬರ್ 1, 2026 ರಿಂದ ಜಾರಿಗೆ ಬರಲಿದ್ದು, ಅಕ್ಟೋಬರ್ ತಿಂಗಳ ವೇತನ ಮತ್ತು ಪಿಂಚಣಿಯಲ್ಲಿ ಇದರ ಪ್ರಯೋಜನ ದೊರೆಯಲಿದೆ
ಸುದ್ದಿ ಸಂತೆ ನ್ಯೂಸ್ ತ್ರಿಪುರ.....