ಬೆಂಗಳೂರು -
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಜೆಟ್ ಹಾಗೂ ಮಧ್ಯಮ ವರ್ಗದ ಖಾಸಗಿ ಶಾಲೆ ಗಳುತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಒಂದು ಕಾಲದಲ್ಲಿ ಪೋಷಕರ ಮೊದಲ ಆಯ್ಕೆಯಾಗಿದ್ದ ಖಾಸಗಿ ಶಾಲೆಗಳಲ್ಲಿ ಇದೀಗ ವಿದ್ಯಾರ್ಥಿಗಳ ದಾಖಲಾತಿ ಗಣನೀಯವಾಗಿ ಇಳಿಕೆಯಾಗಿದೆ.ಇದರ ಪರಿಣಾಮವಾಗಿ ನಿರ್ವಹಣೆ ಸಾಧ್ಯವಾಗದೆ ನೂರಾರು ಶಾಲೆಗಳು ಮಾರಾಟದ ಹಂತಕ್ಕೆ ಬಂದು ನಿಂತಿವೆ.
ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಖಾಸಗಿ ಶಾಲೆಗಳಿಗೆ ಆರ್ಥಿಕ ಸಂಕಷ್ಟ ಶುರುವಾಗಿದೆ. ಮಕ್ಕಳ ದಾಖಲಾತಿ ಕುಸಿತದ ಬೆನ್ನಲ್ಲೇ ನೂರಾರು ಖಾಸಗಿ ಶಾಲೆಗಳು ಮಾರಾಟಕ್ಕೆ ಮುಂದಾಗಿವೆ.ಕಾರ್ಪೊರೇಟ್ ಶಾಲೆಗಳ ಜೊತೆ ಸ್ಪರ್ಧಿಸಲಾಗದೆ ಸಂಕಷ್ಟಕ್ಕೆಸಿಲುಕಿದ್ದು ಒಂದೆಡೆ ವಿದ್ಯಾರ್ಥಿಗಳ ಸಂಖ್ಯೆ ಕೂಡ ಇಳಿಕೆ ಆಗಿದೆ. ಮತ್ತೊಂದೆಡೆ ಶಾಲೆಗಳ ನಿರ್ವಹಣಾ ವೆಚ್ಚ ಏರಿಕೆ ಸೇರಿದಂತೆ ಸಿಬ್ಬಂದಿ ವೇತನ, ನೀರು, ವಿದ್ಯುತ್ ವೆಚ್ಚ ಭರಿಸುವುದು ಸವಾಲಾಗಿದೆ. ಹೆಚ್ಚುತ್ತಿರುವ ಖರ್ಚು, ವೆಚ್ಚದಿಂದ ಶಾಲಾ ಕಟ್ಟಡಗಳನ್ನು ಮಾರಾಟ ಮಾಡಲು ಮಾಲೀಕರ ಮುಂದಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆ ಯಾಗಿದೆ. ಕೇವಲ ಬೆಂಗಳೂರು ಅಥವಾ ಕರ್ನಾಟಕ ಅಷ್ಟೇ ಅಲ್ಲ ದೇಶದ 23 ರಾಜ್ಯಗಳ ಶಾಲೆಯಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕುಸಿತ ಕಂಡಿದೆ. ಇದರಿಂದ ಮಧ್ಯಮ ವರ್ಗದ ಶಾಲೆಗಳನ್ನ ನಡೆಸಲು ಆಗದೇ ಮುಚ್ಚುವ ಹಂತ ತಲುಪಿವೆ. ಇನ್ನೂ ಇದಕ್ಕೆ ಕಾರಣ ಮಕ್ಕಳು ಹುಟ್ಟುವ ಸಂಖ್ಯೆ ಕಡಿಮೆಯಾಗಿದೆ. ವರ್ಷದಿಂದ ವರ್ಷಕ್ಕೆ ನಾನಾ ಕಾರಣಗಳಿಂದ ಮಕ್ಕಳ ಜನನ ಪ್ರಮಾಣ ಕುಸಿಯುತ್ತಿರುವುದು ಹಾಗೂ ಹೆಚ್ಚಿನ ಸಂಖ್ಯೆಗಳಲ್ಲಿ ಶಾಲೆಗಳನ್ನ ತೆರೆಯುತ್ತಿರುವುದು. ನಿರಂತರ ದಾಖಲಾತಿ ಕುಸಿತದಿಂದ ಮಧ್ಯಮ ವರ್ಗದ ಬಜೆಟ್ ಶಾಲೆಗಳಿಗೆ ಹೊಡೆತ ಬಿದಿದ್ದೆ. ಸರ್ಕಾರಿ ಶಾಲೆಗಳ ಜೊತೆಗೆ ಖಾಸಗಿ ಶಾಲೆಗಳಲ್ಲೂ ದಾಖಲಾತಿ ಕುಸಿತದ ಪರಿಣಾಮ ಶಾಲೆಗಳ ಮಾರಾಟಕ್ಕೆ ಮುಂದಾಗಿವೆ.
ಕಳೆದ ಬಾರಿ ಅಂದರೆ 2025-26ನೇ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಕೆಲ ಶಾಲೆಗಳಲ್ಲಿ ಶೇ 40ರಷ್ಡು ದಾಖಲಾತಿ ಕುಸಿದಿದೆ ಮಕ್ಕಳು ಶಾಲೆಗೆ ಬಾರದೆ ಆರ್ಥಿಕ ಸಂಕಷ್ಟ ಎದುರಾಗಿದೆ. ಹೀಗಾಗಿ ಶಾಲೆ ನಿರ್ವಹಣೆ ಸೇರಿದಂತೆ ಎಲ್ಲದಕ್ಕೂ ಹಣಕಾಸಿನ ಸಮಸ್ಯೆ ಎದುರಾಗಿರುವುದರಿಂದ ಮಾಲೀಕರು ಶಾಲೆಗಳನ್ನ ಬಂದ್ ಮಾಡಲು ಮುಂದಾಗುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....