ಬೆಂಗಳೂರು -
ಕರ್ನಾಟಕದ ಜಿಪಂ, ತಾಪಂ ಚುನಾವಣೆಗೆ ಮುಹೂರ್ತ ಫಿಕ್ಸ್: ಸರ್ಕಾರದಿಂದ ಅಧಿಕೃತ ಕರಡು ಮೀಸಲಾತಿ ಪಟ್ಟಿ ಪ್ರಕಟ ಹೌದು ರಾಜ್ಯದಲ್ಲಿ ಬಹು ನಿರೀಕ್ಷಿತ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು ಸರ್ಕಾರವು ಕ್ಷೇತ್ರವಾರು ಸದಸ್ಯ ಸ್ಥಾನಗಳ ವರ್ಗವಾರು ಮೀಸಲಾತಿ ನಿಗದಿಪಡಿಸಿ ಅಧಿಕೃತ ವಿಶೇಷ ರಾಜ್ಯಪತ್ರ ಅಧಿಸೂಚನೆಯನ್ನು ಪ್ರಕಟಿಸಿದೆ .
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ನಿಯಮಾವಳಿಗಳ ಅನ್ವಯ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈ ಮಹತ್ವದ ಅಧಿಸೂಚನೆಗಳನ್ನು ಹೊರಡಿಸಿದೆ .
ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ರಾಜ್ಯದ 31 ಜಿಲ್ಲಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 1,129 ಸ್ಥಾನಗಳು ಹಾಗೂ ತಾಲೂಕು ಪಂಚಾ ಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 3,656 ಸ್ಥಾನಗಳಿಗೆ ಮೀಸಲಾತಿ ಅಂತಿಮಗೊಳಿಸಲಾಗಿದೆ ಮಹಿಳೆಯರಿಗೆ ಶೇಕಡಾ 50ಕ್ಕೂ ಹೆಚ್ಚಿನ ಸ್ಥಾನಗಳು ಮೀಸಲಾಗಿರು ವುದು ಈ ಬಾರಿಯ ವಿಶೇಷತೆಯಾಗಿದೆ.







ರಾಜ್ಯದಲ್ಲಿ ಬಹುನಿರೀಕ್ಷಿತ ಜಿಲ್ಲಾ ಪಂಚಾಯತಿ (ZP) ಚುನಾವಣೆಗಳ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ರಾಜ್ಯದ ಎಲ್ಲಾ 31 ಜಿಲ್ಲಾ ಪಂಚಾಯತಿಗಳ ಒಟ್ಟು ಸದಸ್ಯ ಸ್ಥಾನಗಳಿಗೆ ವರ್ಗವಾರು ಮೀಸಲಾತಿಯನ್ನು ನಿಗದಿಪಡಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅಧಿಕೃತ ವಿಶೇಷ ರಾಜ್ಯಪತ್ರ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 162ರಲ್ಲಿ ಪ್ರದತ್ತವಾದ ಅಧಿಕಾರ ವನ್ನು ಚಲಾಯಿಸಿ ಸರ್ಕಾರ ಈ ಮಹತ್ವದ ಆದೇಶ ನೀಡಿದ್ದು, ಈ ಹಿಂದೆ ಹೊರಡಿಸಲಾಗಿದ್ದ ಎಲ್ಲಾ ಅಧಿಸೂಚನೆಗಳನ್ನು ರದ್ದುಪಡಿಸಿ ಹೊಸ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿದೆ.
ರಾಜ್ಯದ 31 ಜಿಲ್ಲಾ ಪಂಚಾಯತಿಗಳಲ್ಲಿ ಒಟ್ಟು 1,129 ಸದಸ್ಯ ಸ್ಥಾನಗಳನ್ನು ನಿಗದಿಪಡಿಸಲಾಗಿದ್ದು, ಈ ಪೈಕಿ ಮಹಿಳೆಯರಿಗೆ ಅರ್ಧಕ್ಕಿಂತ ಹೆಚ್ಚು ಅಂದರೆ ಬರೋಬ್ಬರಿ 571 ಸ್ಥಾನಗಳನ್ನು ಮೀಸಲಿರಿಸಲಾಗಿದೆ.
ವರ್ಗವಾರು ಮೀಸಲಾತಿಯ ಪೂರ್ಣ ವಿವರ ಹೀಗಿದೆ:ಅನುಸೂಚಿತ ಜಾತಿ (SC): ಒಟ್ಟು 225 ಸ್ಥಾನಗಳು (ಇದರಲ್ಲಿ ಮಹಿಳೆಯರಿಗೆ 121 ಸ್ಥಾನಗಳು) ಅನುಸೂಚಿತ ಪಂಗಡ (ST): ಒಟ್ಟು 102 ಸ್ಥಾನಗಳು (ಇದರಲ್ಲಿ ಮಹಿಳೆಯರಿಗೆ 59 ಸ್ಥಾನಗಳು)ಹಿಂದುಳಿದ ವರ್ಗ 'ಅ' (BC-A): ಒಟ್ಟು 183 ಸ್ಥಾನಗಳು (ಇದರಲ್ಲಿ ಮಹಿಳೆಯರಿಗೆ 98 ಸ್ಥಾನಗಳು)ಹಿಂದುಳಿದ ವರ್ಗ 'ಬ' (BC-B): ಒಟ್ಟು 43 ಸ್ಥಾನಗಳು (ಇದರಲ್ಲಿ ಮಹಿಳೆಯರಿಗೆ 25 ಸ್ಥಾನಗಳು)ಸಾಮಾನ್ಯ ವರ್ಗ (General): ಒಟ್ಟು 576 ಸ್ಥಾನಗಳು (ಇದರಲ್ಲಿ ಮಹಿಳೆಯರಿಗೆ 268 ಸ್ಥಾನಗಳು)
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....