LIVE TV LocalCrimeNationalInternationalPoliticsEducationTechnologyEntertainmentSportsFeature
State News

ಧಾರವಾಡ ದ JSS ನಲ್ಲಿ ಸೆ 18 ರಂದು ರಕ್ತದಾನ‌ ಶಿಬಿರ.....ಬೃಹತ್ ರಕ್ತದಾನ‌ ಶಿಬಿರ.....

ಧಾರವಾಡ -

ಧಾರವಾಡದಲ್ಲಿ ಸೆಪ್ಟೆಂಬರ್.18ರಂದು ಬೃಹತ್ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿದೆ
ಜೆಎಸ್.ಎಸ್. ಸಂಸ್ಥೆಗಳ ಆಶ್ರಯದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಲಿದೆ ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ವಿದ್ಯಾಗಿರಿ, ಧಾರವಾಡ ಹಾಗೂ ಜೇ.ಎಸ್.ಎಸ್. ಜನತಾ ಕಲಾ, ವಾಣಿಜ್ಯ ಹಾಗೂ ದಾಸ್ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಸೆಪ್ಟೆಂಬರ್ 18ರಂದು ಬೆಳಿಗ್ಗೆ 10 ಗಂಟೆಗೆ ಧಾರವಾಡದ ಉತ್ತರ ಸಭಾಭವನದಲ್ಲಿ ಈ ರಕ್ತದಾನ ಶಿಬಿರ ನಡೆಯಲಿದೆ. ಸಾರ್ವಜನಿಕರು, ವಿದ್ಯಾರ್ಥಿ ಗಳು, ಸಿಬ್ಬಂದಿ ಹಾಗೂ ರಕ್ತದಾನಕ್ಕೆ ಅರ್ಹರಾದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವಂತೆ ಸಂಘಟಕರು ಮನವಿ ಮಾಡಿದ್ದಾರೆ.news_1789663615_0_516.webp

 

ಕಾರ್ಯಕ್ರಮಕ್ಕೆ ವಿವಿಧ ಗಣ್ಯರು ಹಾಗೂ ಅಧಿಕಾರಿ ಗಳು ಭಾಗವಹಿಸಲಿದ್ದು, ತೇರದಾಳದ ಪಲಿಕರ್ ಮಠದ ಎಸ್.ವಿ.ಎಂ. ರುದ್ರಭಾರದಾರ, ರಾಷ್ಟ್ರೋತ್ಥಾನದ ರಕ್ತ ಭಂಡಾರ ಹಾಗೂ ಪದ್ಮಶ್ರೀ ಆರ್.ಬಿ. ಪಾಟೀಲ ಕ್ಯಾನ್ಸರ್ ಆಸ್ಪತ್ರೆ, ನವನಗರ ಧಾರವಾಡ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿ ಗಳು ಕಾರ್ಯಕ್ರಮದಲ್ಲಿ ಉಪಸ್ಥಿತ ಇರಲಿದ್ದಾರೆ

ರಕ್ತದಾನವು ತುರ್ತು ಸಂದರ್ಭಗಳಲ್ಲಿ ರೋಗಿಗಳ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ ಸೇರಿದಂತೆ ವಿವಿಧ ವೈದ್ಯಕೀಯ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇರುವುದರಿಂದ ಇಂತಹ ಶಿಬಿರಗಳ ಮೂಲಕ ರಕ್ತ ಸಂಗ್ರಹಿಸುವುದು ಮಹತ್ವದ್ದಾಗಿದೆ.ಜೆ.ಎಸ್.ಎಸ್. ಸಂಸ್ಥೆಗಳ ವತಿಯಿಂದ ಆಯೋಜಿಸಿರುವ ಈ ಶಿಬಿರದ ಮೂಲಕ ಯುವಜನರು ಹಾಗೂ ಸಾರ್ವಜನಿಕರಲ್ಲಿ ರಕ್ತದಾನದ ಮಹತ್ವ ಮತ್ತು ಸಾಮಾಜಿಕ ಹೊಣೆಗಾರಿ ಕೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ.

“ರಕ್ತದಾನ ಮಾಡಿ – ಜೀವ ಉಳಿಸಿ”ರಕ್ತದಾನ ಮಾಡಲು ಅರ್ಹರಾಗಿರುವವರು ಸೆ.18ರಂದು ಬೆಳಿಗ್ಗೆ 10 ಗಂಟೆಗೆ ಶಿಬಿರಕ್ಕೆ ಆಗಮಿಸಿ ತಮ್ಮ ಅಮೂಲ್ಯ ಕೊಡುಗೆ ನೀಡುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಾಥಮಿಕ ಶಿಕ್ಷಕರಿಗೆ ಹೊಸ ಕೋರ್ಸ್ ಆರಂಭ.....ಎಲ್ಲವೂ ಮುಗಿಯಿತು ಎನ್ನುವಷ್ಟರಲ್ಲಿ ಮತ್ತೊಂದು ಆರಂಭ.....ಧಾರವಾಡದಲ್ಲಿ ವೀರಶೈವ ಲಿಂಗಾಯತ ಮಹಾಸಭಾಗೆ ನಿವೇಶನ ಮಂಜೂರು  - ಶಾಸಕ ವಿನಯ ಕುಲಕರ್ಣಿ ಮನವಿಗೆ ಸ್ಪಂದಿಸಿದ CM.....ಮಹಾಸಭಾದಿಂದ ಗೌರವ ಸನ್ಮಾನ.....ಬೆಳ್ಳಂ ಬೆಳಿಗ್ಗೆ ಇಬ್ಬರು ಸರ್ಕಾರಿ ಅಧಿಕಾರಿಗಳು ಅಮಾನತು..... ರಾಜಕೀಯ ಗುದ್ದಾಟಕ್ಕೆ ಬಲಿಯಾದ ಇಬ್ಬರು ಅಧಿಕಾರಿಗಳು.....NPS ಕುರಿತು ಅಂದು ಎಚ್ಚರಿಸಿದ ಧ್ವನಿ…ಇಂದು ಕಹಿ ಅನುಭವದ ಪ್ರತಿಧ್ವನಿ.....ನೌಕರರೊಬ್ಬರ ಪತ್ರ ವೈರಲ್.....2 KM ಶಾಲೆಗೆ ಹೋಗಲು 2 ಗಂಟೆ ಸಮಯ.....ಸಿಡಿದೆದ್ದ ಪೋಷಕರು ಶಾಲಾ ಇದು ಬದಲಾವಣೆಗೆ ಸಾಕ್ಷಿ.....Big Mishra 261ನೇ ಶಾಖೆ ಬೆಳಗಾವಿ ಯಲ್ಲಿ ಆರಂಭ.....ಸಂಜಯ ಮಿಶ್ರಾ ಅವರ Big Mishra ಮತ್ತಷ್ಟು ವಿಸ್ತಾರಸೇವಾನಿರತ ಶಿಕ್ಷಕರಿಗೆ 6 ತಿಂಗಳ ವಿಶೇಷ ತರಬೇತಿ.....ನಡೆಯಲಿದೆ ಸರ್ಟಿಫಿಕೇಟ್‌ ಕೋರ್ಸ್‌.....SSLC ಅರ್ಧವಾರ್ಷಿಕ ಪರೀಕ್ಷೆ'ಯ ವೇಳಾಪಟ್ಟಿ ಪ್ರಕಟ.....ಹೀಗಿದೆ ವೇಳಾಪಟ್ಟಿ.....ಧಾರವಾಡ ದ JSS ನಲ್ಲಿ ಸೆ 18 ರಂದು ರಕ್ತದಾನ‌ ಶಿಬಿರ.....ಬೃಹತ್ ರಕ್ತದಾನ‌ ಶಿಬಿರ.....ಬೆಳಗಾವಿಯಲ್ಲಿ ಸವಿರುಚಿಗೆ ಉದ್ಘಾಟನೆಗೆ ಸಜ್ಜಾದ Big Mishra.....ಸೆ.24ರಂದು "Big Mishra" Pedha & Family Restaurant’ ಶುಭಾರಂಭ.....