ಬೆಂಗಳೂರು -
SSLC ಅರ್ಧವಾರ್ಷಿಕ ಪರೀಕ್ಷೆ'ಯ ವೇಳಾಪಟ್ಟಿ ಪ್ರಕಟವಾಗಿದೆ ಹೌದು ರಾಜ್ಯದ ಪ್ರೌಢಶಾಲೆಗಳ 10ನೇ ತರಗತಿ ವಿದ್ಯಾರ್ಥಿಗಳಿಗೆ 2026-27ನೇ ಸಾಲಿನ ರಾಜ್ಯ ಮಟ್ಟದ ಮೊದಲನೇ ಸಂಕಲನಾತ್ಮಕ ಮೌಲ್ಯಮಾಪನ (SA-1) ಅರ್ಧವಾರ್ಷಿಕ ಪರೀಕ್ಷೆಯು ಸೆಪ್ಟೆಂಬರ್ 23 ರಿಂದ 30 ರವರೆಗೆ ನಡೆಯಲಿದ್ದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಅಧಿಕೃತ ವೇಳಾಪಟ್ಟಿ ಮತ್ತು ಮಾರ್ಗಸೂಚಿಯನ್ನು ಪ್ರಕಟಿಸಿದೆ.ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲಿದ್ದು ಆಯುಕ್ತರ ಕಚೇರಿಯ ಮೇಲ್ವಿಚಾರಣೆಯಲ್ಲಿ ಪರೀಕ್ಷಾ ದಿನ ದಂದು ಪ್ರೌಢಶಾಲಾ ಮುಖ್ಯ ಶಿಕ್ಷಕರ ಶಾಲಾ ಲಾಗಿನ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ ಡೌನ್‌ಲೋಡ್ ಮಾಡಿದ ಪ್ರಶ್ನೆಪತ್ರಿಕೆಯ ಮೇಲೆ ಸಂಬಂಧಿಸಿದ ಶಾಲಾ ಸಂಕೇತವು ವಾಟರ್‌ಮಾರ್ಕ್ ಆಗಿ ಮೂಡಿಬರಲಿದೆ.
ಪರೀಕ್ಷಾ ವೇಳಾಪಟ್ಟಿ ವಿವರ
23/09/2026 (ಬುಧವಾರ): ಪ್ರಥಮ ಭಾಷೆ (ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.45)
24/09/2026 (ಗುರುವಾರ): ವಿಜ್ಞಾನ (ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.45)
25/09/2026 (ಶುಕ್ರವಾರ): ತೃತೀಯ ಭಾಷೆ (ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30)
26/09/2026 (ಶನಿವಾರ): ಸಮಾಜ ವಿಜ್ಞಾನ (ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.45)
28/09/2026 (ಸೋಮವಾರ): ಗಣಿತ (ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.45)
29/09/2026 (ಮಂಗಳವಾರ): ದ್ವಿತೀಯ ಭಾಷೆ (ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30)
30/09/2026 (ಬುಧವಾರ): ದೈಹಿಕ ಶಿಕ್ಷಣ / ವೃತ್ತಿ ಶಿಕ್ಷಣ / ಮೌಲ್ಯ ಶಿಕ್ಷಣ (ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.45)
ಪರೀಕ್ಷಾ ದಿನದ ಪ್ರಕ್ರಿಯೆಗಳ ಸಮಯ ನಿಗದಿ
ಪರೀಕ್ಷಾ ದಿನಗಳಂದು 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಬೆಳಿಗ್ಗೆ 9.15ಕ್ಕೆ ಆರಂಭವಾಗಲಿದ್ದು, ಯಾವುದೇ ವಿದ್ಯಾರ್ಥಿ ಗೈರಾಗದಂತೆ ಕ್ರಮವಹಿಸಬೇಕಿದೆ.
ಬೆಳಿಗ್ಗೆ 9.30ಕ್ಕೆ ಮುಖ್ಯ ಶಿಕ್ಷಕರ ಶಾಲಾ ಲಾಗಿನ್‌ನಿಂದ ಪ್ರಶ್ನೆಪತ್ರಿಕೆ ಡೌನ್‌ಲೋಡ್ ಮಾಡಿಕೊಳ್ಳುವುದು.
ಬೆಳಿಗ್ಗೆ 9.45 ರಿಂದ 10.00 ಗಂಟೆಯೊಳಗೆ ವಿದ್ಯಾರ್ಥಿ ಗಳ ಸಂಖ್ಯೆಗೆ ಅನುಗುಣವಾಗಿ ಮುದ್ರಣ ಮಾಡುವುದು
ಬೆಳಿಗ್ಗೆ 10.15ಕ್ಕೆ ಪರೀಕ್ಷಾ ಕೊಠಡಿಗೆ ಪ್ರಶ್ನೆಪತ್ರಿಕೆಗಳ ಪ್ಯಾಕೆಟ್ ನೀಡುವುದು.
ಬೆಳಿಗ್ಗೆ 10.30 ರಿಂದ ಪರೀಕ್ಷೆ ಆರಂಭವಾಗಲಿದೆ.
ಮುಖ್ಯ ಶಿಕ್ಷಕರು ತಮ್ಮ ಸ್ವಂತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ನಮೂದಿಸಿ ಸ್ವತಃ ಪ್ರಶ್ನೆಪತ್ರಿಕೆ ಡೌನ್‌ಲೋಡ್ ಮಾಡಿಕೊಳ್ಳಬೇಕು ಯಾವುದೇ ಕಾರಣಕ್ಕೂ ಲಾಗಿನ್ ಮತ್ತು ಒಟಿಪಿಯನ್ನು ಇತರ ರೊಂದಿಗೆ ಹಂಚಿಕೊಳ್ಳಬಾರದು ಹಾಗೂ ನೋಡಲ್ ಶಿಕ್ಷಕರು ಈ ಕಾರ್ಯ ನಿರ್ವಹಿಸುವಂತಿಲ್ಲ. ಪ್ರಶ್ನೆಪತ್ರಿಕೆ ಮುದ್ರಣ, ಪ್ಯಾಕಿಂಗ್ ಮತ್ತು ವಿತರಣೆ ವೇಳೆ ಮೊಬೈಲ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಡಯಟ್ ಪ್ರಾಂಶುಪಾಲರಿಗೆ ಮೇಲ್ವಿಚಾರಣೆ ಹೊಣೆ ಅವ್ಯವಹಾರ ನಡೆದರೆ ಕ್ರಿಮಿನಲ್ ಕೇಸ್, ಶಾಲೆ ಮಾನ್ಯತೆ ರದ್ದು ಪರೀಕ್ಷಾ ಕೇಂದ್ರದಿಂದ ಪ್ರಶ್ನೆಪತ್ರಿಕೆ ಸೋರಿಕೆ, ನಕಲು ಮಾಡುವುದು,ಪತ್ರಿಕೆಯ ಫೋಟೋ ತೆಗೆದು ವಾಟ್ಸಾಪ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು, ಚೀಟಿ ಸರಬ ರಾಜು ಮಾಡುವುದು ಮುಂತಾದ ಕೃತ್ಯಗಳಲ್ಲಿ ಭಾಗಿ ಯಾದರೆ ಬಿಎನ್‌ಎಸ್ (ಭಾರತೀಯ ನ್ಯಾಯ ಸಂಹಿತೆ) ಕಾಯ್ದೆ 2023, ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆಗಳಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ.ನೌಕರರ ವಿರುದ್ಧ ಕೆಸಿಎಸ್ (ಸಿಸಿಎ) ನಿಯಮಾವಳಿಗಳಡಿ ಶಿಸ್ತುಕ್ರಮ ಜರುಗಿಸಲಾಗುವುದು.
ಅನುದಾನಿತ ಶಾಲೆಗಳು ಗೌಪ್ಯತೆ ಕಾಪಾಡದಿದ್ದರೆ ಮಾನ್ಯತೆ ರದ್ದುಪಡಿಸಿ, ಸರ್ಕಾರದ ಅನುದಾನ ಹಿಂಪಡೆಯಲಾಗುವುದು. ಅನುದಾನ ರಹಿತ (ಖಾಸಗಿ) ಶಾಲೆಗಳು ನಿಯಮ ಉಲ್ಲಂಘಿಸಿದರೆ ಅಂತಹ ಶಾಲೆಗಳ ಮಾನ್ಯತೆಯನ್ನು ಶಾಶ್ವತವಾಗಿ ರದ್ದುಪಡಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು......