LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಹೆಬ್ಬಳ್ಳಿ ಗ್ರಾಮದಲ್ಲಿ ಆರಂಭ ಗೊಂಡಿತು ವಿಶೇಷ ಕಾರ್ಯಕ್ರಮ ಮನೆಪಾಠ ಕಲಿಕಾ ಕೇಂದ್ರಗಳು ಆರಂಭ.....

ಹೆಬ್ಬಳ್ಳಿ -

ಹೆಬ್ಬಳ್ಳಿಯಲ್ಲಿ ಜನನಿ ಪ್ರತಿಷ್ಠಾನದದಿಂದ ಮನೆಪಾಠ ಕಲಿಕಾ ಕೇಂದ್ರಗಳು ಆರಂಭಗೊಂಡಿದೆ.ಹೌದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಜನನಿ ಪ್ರತಿಷ್ಠಾನದ ವತಿಯಿಂದ ಶಾಲಾ ಮಕ್ಕಳಿಗೆ ಮನೆಪಾಠ ಕಲಿಕಾ ಕೇಂದ್ರ ಗಳನ್ನು ಆರಂಭಿಸಲಾಯಿತು.ಧಾರವಾಡದ ಉಪವಿಭಾಗ ಅಧಿಕಾರಿಗಳು ಅಶೋಕ ತೇಲಿ ಮತ್ತು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ ಇವರ ಕನಸಿನ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದರು

ಹೆಬ್ಬಳ್ಳಿ ಗ್ರಾಮದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಯಲ್ಲಿ ಚಾಲನೆ ನೀಡಲಾಯಿತು.ಮನೆಪಾಠದ ಕಲಿಕಾ ಕೇಂದ್ರಗಳಗೆ ಕಪ್ಪು ಹಲಗೆ ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಮ‌ೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡ ಲಾಯಿತು.ತಾಲೂಕು ಪಂಚಾಯತಿ ಮಾಜಿ ಅದ್ಯಕ್ಷೆ ಸುಮಂಗಲಾ ಕೌದೆಣ್ಣವರ ಮನೆಪಾಠ ಕಲಿಕಾ ಕೇಂದ್ರದಿಂದ ಮಕ್ಕಳಿಗೆ ತುಂಬಾ ಅನುಕೂಲ ಆಗಲಿದೆ ಶಾಲೆಯಲ್ಲಿ ಶಿಕ್ಷಕರು ನೀಡಿದ ಮನೆಪಾಠವನ್ನು ಕೆಲವು ಮಕ್ಕಳು ಮಾಡುವುದಿಲ್ಲ ಏಕೆಂದರೆ ಅಂತಹ ಮಕ್ಕಳು ರೈತರು, ಕೂಲಿ ಕಾರ್ಮಿಕರ ಮಕ್ಕಳಾಗಿರುತ್ತಾರೆ ಅವರಿಗೆ ಈ ಕಲಿಕಾ ಕೇಂದ್ರ ಮೂಲಕ ಶಾಲೆಯಲ್ಲಿ ಶಿಕ್ಷಕರು ನೀಡಿದ ಗ್ರಹ ಪಾಠವನ್ನು ಮಾಡಿಸುವುದರಿಂದ ಗುಣಾತ್ಮಕ ಶಿಕ್ಷಣ ಸಾಧ್ಯವಿದೆ ಎಂದರು.

ಮುಖ್ಯ ಶಿಕ್ಷಕ ರಮೇಶ ಕಾಂಬಳೆ ಮಾತನಾಡಿ‌ ಬಹುತೇಕ ಮಕ್ಕಳು ಶಿಕ್ಷಕರ ನೀಡಿದ ಮನೆಗೆಲಸವನ್ನು ಮಾಡಿಕೊಂಡು ಬರುವುದಿಲ್ಲ ಶಾಲೆಯಲ್ಲಿ ಶಿಕ್ಷಕರು ಪ್ರಶ್ನೆ ಮಾಡಿದಾಗ ಏನಾದರೂ ಕಾರಣ ಹೇಳುತ್ತಾರೆ.ಇಂತಹ ಮಕ್ಕಳಿಗೆ ಇದು ತುಂಬಾ ಪ್ರಯೋಜನಕಾರಿ ಆಗಲಿದೆ.ಈ ಕಲಿಕಾ ಕೇಂದ್ರ ಗಳನ್ನು ನಡೆಸಲು ನಾನು ಸಂಪೂರ್ಣ ಸಹಕಾರ ನೀಡುವೆ ಎಂದರು.ಶಿಕ್ಷಕ ಎಲ್ ಐ ಲಕ್ಕಮ್ಮನವರ ಮಾತನಾಡಿ ಈ ಮನೆಪಾಠದ ಕಲಿಕಾ ಕೇಂದ್ರದಿಂದ ಮಕ್ಕಳು ಎರಡು ಗಂಟೆಗಳ ಕಾಲ ಮೊಬೈಲ್ ಬಳಕೆಯಿಂದ ದೂರವಾಗಿ ಕಲಿಕಾ ಚೇತರಿಕೆಯಲ್ಲಿ ತೊಡಗಿಕೊಳ್ಳುವರು ಇದರಿಂದ ಪಾಲಕರು ಮತ್ತು ಶಿಕ್ಷಕರಿಗೆ ತುಂಬಾ ಸಹಕಾರಿ ಆಗಲಿದೆ ಇದು ರಜೆಯ ಅವದಿಯಲ್ಲಿ ಅಷ್ಟೇ ಅಲ್ಲದೇ ನಿರಂತರ ವಾಗಿ ಸಾಯಂಕಾಲ 6- ರಿಂದ 8 ಎರಡು ತಾಸುಗಳವರೆಗೆ ಮಾತ್ರ ಕೇವಲ 20 ಮಕ್ಕಳು 4 ರಿಂದ ಏಳನೆಯ ತರಗತಿ ಯ ಮಕ್ಕಳಿಗೆ ಈ ಕಲಿಕಾ ಕೇಂದ್ರಗಳನ್ನು ನಡೆಸಲಾಗುತ್ತದೆ ಎಂದರು

ಜನನಿ ಪ್ರತಿಷ್ಠಾನದ ನೋಡಲ್ ಅಶ್ವಿನ್ ಮಾತನಾಡಿ ಈ ಕಲಿಕಾ ಕೇಂದ್ರದ ಪ್ರೇರಕರಿಗೆ ಸಂಸ್ಥೆ ಪ್ರತಿ ತಿಂಗಳು ಒಂದು ಸಾವಿರ ಗೌರವ ಧನವನ್ನು ನೀಡಲಾಗುತ್ತದೆ, ಜೊತೆಗೆ ಮೇಲಿಂದ ಮೇಲೆ ತರಬೇತಿಯನ್ನು ನೀಡಿ‌ ಗ್ರಾಮದ ಶಿಕ್ಷ ಣದ ಗುಣಮಟ್ಟವನ್ನು ಸುಧಾರಿಸಲು ಇದೊಂದು ಅತ್ಯುತ್ತ ಮ ಮಾರ್ಗವಾಗಿದೆ,ಈಗಾಗಲೇ ಶಿಬಾರಗಟ್ಟಿ,ಮುಳಮು ತ್ತಲು,ಕುರುಬಗಟ್ಟಿಯಲ್ಲಿ ಅತ್ಯಂತ ಯಶಸ್ವಿಯಾಗಿ ಈ ಕಲಿಕಾ ಕೇಂದ್ರಗಳು ನಡೆಯುತ್ತಿವೆ, ಗ್ರಾಮಸ್ಥರು ಸಹ ತುಂಬಾ ತುಂಬಾ ಸಹಕಾರ ನೀಡುತ್ತಿದ್ದಾರೆ ಎಂದರು ಶಾಲಾ ಭಿವೃದ್ದಿ ಸಮಿತಿಯ ಸದಸ್ಯ ಚಂದ್ರಶೇಖರ ಮಟ್ಟಿ ಶಿಕ್ಷಕಿ ನಾಗಮ್ಮ ಹೂಗಾರ ಇದ್ದರು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...