LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಬರ್ಬರವಾಗಿ ಯುವಕನ ಕೊಲೆ – ಬೆಚ್ಚಿ ಬಿದ್ದ ಎಸ್ ಎಮ್ ಕೃಷ್ಣಾ ನಗರ

ಹುಬ್ಬಳ್ಳಿ -

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೇ ನೆತ್ತರು ಹರಿದಿದಿ. ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ನಗರದ ಕಸಬಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಎಸ್ ಎಮ್ ಕೃಷ್ಣಾ ನಗರದಲ್ಲಿ ಕೊಲೆಯಾಗಿದೆ.

ಶಾರುಖ್ ಸೌದಾಗರ್ ಎಂಬ ಯುವಕನೇ ಕೊಲೆಯಾದ ಯುವಕನಾಗಿದ್ದಾರೆ. ಸಲೀಂ ಬಳ್ಳಾರಿ ಮತ್ತು ಗ್ಯಾಂಗ್ ನವರು ಶಾರುಖ್ ನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಎಸ್ ಎಮ್ ಕೃಷ್ಣಾ ನಗರದಲ್ಲಿ ಶಾರುಖ್ ಸೌದಾಗರ್ ನಿಂತುಕೊಂಡಿದ್ದ ಮಾಹಿತಿ ತಿಳಿದ ಸಲೀಂ ಬಳ್ಳಾರಿ ಮತ್ತು ಗ್ಯಾಂಗ್ ಮೊದಲು ಕೈಯಿಂದ ಹಲ್ಲೆಯನ್ನು ಮಾಡಿದ್ದಾರೆ. ನಂತರ ಮಾರಕಾಸ್ತ್ರಗಳಿಂದ ಹೊಡೆದಿದ್ದಾರೆ. ತೀವ್ರವಾಗಿ ಗಾಯಗೊಂಡ ಶಾರುಖ್ ಸೌದಾಗರ್ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.

ಇನ್ನೂ ಕೊಲೆಯ ವಿಷಯ ತಿಳಿದ ಕಸಬಾ ಪೊಲೀಸ್ ಠಾಣೆ ಪೊಲೀಸ್ ಇನಸ್ಪೇಕ್ಟರ್ ರತನಕುಮಾರ್ ಜೀರಗ್ಯಾಳ ಮತ್ತು ಸಿಬ್ಬಂದಿಗಳು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿದರು. ಸಧ್ಯ ಕೊಲೆಯಾದ ಯುವಕ ಶಾರುಖ್ ಸೌದಾಗರ್ ಮೃತ ದೇಹ ಕಿಮ್ಸ್ ಶವಾಗಾರದಲ್ಲಿದ್ದು ಇನ್ನೂ ಇತ್ತ ಕಸಬಾ ಪೊಲೀಸ್ ಠಾಣಾ ಸಿಬ್ಬಂದಿಗಳು ಕೊಲೆ ಮಾಡಿದ ಎಸ್ಕೇಫ್ ಆಗಿರುವ ಆರೋಪಿಗಳ ಬಂಧನಕ್ಕೇ ಜಾಲ ಬೀಸಿದ್ದು ಕೊಲೆಗೆ ನಿಖರವಾದ ಕಾರಣವನ್ನು ಹುಡುಕುತ್ತಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......