LIVE TV LocalCrimeNationalInternationalPoliticsEducationTechnologyEntertainmentSportsFeature
State News

BEO ಯಲ್ಲಮ್ಮ ಅಮಾನತು.....

ಉಡುಪಿ -

ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಯಲ್ಲಮ್ಮ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಶಿಕ್ಷಕರ ಬಡ್ತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ತೀವ್ರ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಉಡುಪಿಯ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಶ್ರೀಮತಿ ಯಲ್ಲಮ್ಮ ಅವರನ್ನು ಸೇವೆಯಿಂದ ಅಮಾನತುಗೊ ಳಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.

ಉಡುಪಿ ಜಿಲ್ಲೆಯಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ವೃಂದದಿಂದ ಉಪನ್ಯಾಸಕರ ಹುದ್ದೆಗೆ ಬಡ್ತಿ ಪಡೆಯಲು ಶಿಕ್ಷಕರು ಅರ್ಹತೆ ಹೊಂದಿದ್ದರು ಶಿಕ್ಷಕರ ಪೂರ್ಣ ಪ್ರಸ್ತಾವನೆಯನ್ನು ಇಲಾಖೆಗೆ ಸಲ್ಲಿಸಲಾಗಿತ್ತು. ಆದರೆ ಶಿಕ್ಷಕರ ಪ್ರಸ್ತಾವನೆಗಳನ್ನು ಸಲ್ಲಿಸುವಲ್ಲಿ ಶ್ರೀಮತಿ ಯಲ್ಲಮ್ಮ ಅವರು ಅನಗತ್ಯ ವಿಳಂಬ ಧೋರಣೆ ಅನುಸರಿಸಿ ದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅರ್ಹ ಶಿಕ್ಷಕರ ಕಾರ್ಯನಿರ್ವಹಣಾ ವರದಿ ಹಾಗೂ ಅಗತ್ಯ ದಾಖಲೆಗಳಿಗೆ ಸಹಿ ಮತ್ತು ಮೊಹರು ಮಾಡಿ ಕಳುಹಿಸಿಕೊಡುವಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸೂಚಿಸಿದ್ದರೂ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.ಉದ್ದೇಶಪೂರ್ವಕ ವಿಳಂಬದ ಆರೋಪದ ಹಿನ್ನೆಲೆಯಲ್ಲಿ ಈ ಒಂದು ಆದೇಶ ವನ್ನು ಮಾಡಲಾಗಿದೆ

ಜವಾಬ್ದಾರಿಯುತ ಹುದ್ದೆ ಯಲ್ಲಿದ್ದುಕೊಂಡು ಮೇಲಾಧಿಕಾರಿಗಳಿಗೆ ಸೂಕ್ತ ವಿವರಣೆ ನೀಡದೆ ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸಿ ದ್ದರಿಂದ ಮೇಲ್ನೋಟಕ್ಕೆ ಗಂಭೀರ ಕರ್ತವ್ಯ ಲೋಪ ಎಂದು ಸಾಬೀತಾಗಿದೆ.

ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಪ್ರಸ್ತಾವನೆ ಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರ, ಶಿಸ್ತು ಕ್ರಮ ಬಾಕಿ ಇರಿಸಿ ಶ್ರೀಮತಿ ಯಲ್ಲಮ್ಮ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಆಜ್ಞಾಪಿಸಿದೆ.(ಸರ್ಕಾರದ ಆದೇಶ ಸಂಖ್ಯೆ: ಇಪಿ 40 ಡಿಜಿಒ 2026 ಬೆಂಗಳೂರು, ದಿನಾಂಕ: 09ನೇ ಅಕ್ಟಪರಿಶೀಲಿಸಿದ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿ ಅಮಾನತು: ಸರ್ಕಾರದ ಆದೇಶ
ಬೆಂಗಳೂರು: ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿ ಯೊಬ್ಬರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆ ಯಿಂದ ಅಮಾನತುಗೊಳಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು......

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BEO ಯಲ್ಲಮ್ಮ ಅಮಾನತು.....ಸರ್ಕಾರಿ ಶಾಲೆಯಲ್ಲಿ ಭೀಕರ ಅಗ್ನಿ ಅವಘಡ: ರಜೆ ಇದ್ದಿದ್ದರಿಂದ ತಪ್ಪಿದ ಭಾರೀ ದುರಂತBEO ಕಚೇರಿಯಲ್ಲಿ ಹಗಲಲ್ಲೂ ಉರಿಯುವ ಲೈಟ್ ಗಳು.....ಕಂಡು ಕಾಣದಂತೆ ಕುಳಿತಿದ್ದಾರೆಯೇ ಇಲಾಖೆಯ ಅಧಿಕಾರಿಗಳು.....ಧಾರವಾಡ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಹೊಸ ರೂಪ ತಂದ ಗುತ್ತಿಗೆದಾರ ಫಕ್ರುದ್ದೀನ್ ಅಲಿ ಕುಂದಗೋಳ.....ಫೇವರ್ಸ್ ಅಳವಡಿಸಿ ಅಂದಚೆಂದ ಹೆಚ್ಚಿಸಿದ ಗುತ್ತಿಗೆದಾರ.....ಧಾರವಾಡ ಜಯನಗರ ಬಿಗ್ ಮಿಶ್ರಾಗೆ ಮೊದಲ ವರ್ಷದ ಸಂಭ್ರಮ.....ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ ಸಂಜಯ ಮಿಶ್ರಾ ರವರ ಬಿಗ್ ಮಿಶ್ರಾ.....ಬಾದಾಮಿ ಬನಶಂಕರಿ ದೇವಾಲಯಕ್ಕೆ ಹೋಗ್ತಾ ಇದ್ದರೆ ಪ್ಲಾನ್ ಬದಲಾವಣೆ ಮಾಡಿಕೊಳ್ಳಿ.....ಅಕ್ಟೋಬರ್ 11 ರಂದು 7 ಗಂಟೆ ದರ್ಶನ ಬಂದ್.....ಒಂಬತ್ತು ಸರ್ಕಾರಿ ಅಧಿಕಾರಿಗಳಿಗೆ ನೌಕರರಿಗೆ ಸಮನ್ಸ್ ಜಾರಿ.....ಲೋಕಾಯುಕ್ತ ನ್ಯಾಯಾಲಯದಿಂದ ಜಾರಿ.....8th Pay Commission ವಿಳಂಬವಾದರೆ ಹೆಚ್ಚಾಗಲಿದೆ ಅರಿಯರ್ಸ್.....ಹೆಡ್ ಕಾನ್ಸ್ಟೇಬಲ್ ಹನುಮಂತ ಅಮಾನತು..... ಅಮಾನತು ಮಾಡಿದ SP.....ಪೊಟೊ ವಿಡಿಯೋ ವೈರಲ್ ಬೆನ್ನಲ್ಲೇ ಶಿಕ್ಷಕ ಅಮಾನತು.....