LIVE TV LocalCrimeNationalInternationalPoliticsEducationTechnologyEntertainmentSportsFeature
State News

BEO ಕಚೇರಿ ಅವ್ಯವಹಾರ ತನಿಖೆಗೆ ಅನುಮತಿ.....ಆರಂಭಗೊಂಡ ತನಿಖೆ.....

ಕುಷ್ಟಗಿ -

ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ನಡೆದ ಘಟನೆ ಕುರಿತು ಪ್ರಾಥಮಿಕ ತನಿಖೆಗೆ ಅನುಮತಿ ನೀಡಲಾಗಿದೆ ಇತ್ತೀಚೆಗೆ ನಡೆದ ಘಟನೆಗೆ ಸಂಬಂಧಿ ಸಿದಂತೆ ಇಲ್ಲಿಯ ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.ಘಟನೆಯಿಂದ ದೈಹಿಕ ಮಾನಸಿ ಕವಾಗಿ ಅಸ್ವಸ್ಥಗೊಂಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಅವರು ಘಟನೆಗೆ ಕಾರಣ ರಾದವರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದರು.

ಅಲ್ಲದೆ ಈ ಬಗ್ಗೆ ಪ್ರಾಥಮಿಕ ಹಂತದಲ್ಲಿ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಅಗತ್ಯ ಎನಿಸಿದರೆ ಎಫ್‌ಐಆರ್‌ ದಾಖಲಿಸುವಂತೆ ಗಂಗಾವತಿ ಉಪ ವಿಭಾಗದ ಡಿವೈಎಸ್‌ಪಿ ಇಲ್ಲಿಯ ಪೊಲೀಸರಿಗೆ ಅನುಮತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗ ಕಚೇರಿಗೆ ಬಂದ ಕೃಷ್ಣ, ವಿಠ್ಠಲ, ನಾಗರಾಜ ಮತ್ತು ಇತರೆ ಹತ್ತು ಜನರು ಕಚೇರಿಯಲ್ಲಿ ಎಸ್‌ಡಿಎ ಅವರಿಂದ ನಡೆದ ₹70 ಲಕ್ಷ ಸರ್ಕಾರದ ಹಣ ದುರ್ಬಳಕೆಗೆ ಸಂಬಂಧಿಸಿದಂತೆ ಪ್ರಶ್ನಿಸಿ ಆಕ್ಷೇಪಿಸತೊಡಗಿದ್ದರು ಅಲ್ಲದೆ ಕಚೇರಿಯ ಸಿಬ್ಬಂದಿ ರವಿರಾಜ ಎಂಬಾತನ ಪರ ವಹಿಸಿಕೊಂಡು ವಾದಕ್ಕಿಳಿದ ಈ ವ್ಯಕ್ತಿಗಳು ರವಿರಾಜನಿಗೆ ಕಚೇರಿ ಯಲ್ಲಿ ಬೇರೆ ಬೇರೆ ಕೆಲಸ ಹಂಚಿಕೆ ಮಾಡಬಾರದು, ಅಲ್ಲದೆ ಆತನಿಗೆ ನೋಟಿಸ್‌ ನೀಡದಂತೆಯೂ ತಮಗೆ ತಾಕೀತು ಮಾಡಿದರು.

ಕಚೇರಿ ಕೆಲಸ ಕಾರ್ಯಗಳ ವಿಚಾರ ತಮಗೆ ಸಂಬಂಧಿಸಿರದಿದ್ದರೂ ಅನಗತ್ಯವಾಗಿ ಏರುಧ್ವನಿಯಲ್ಲಿ ಪ್ರಶ್ನಿಸತೊಡಿಗಿ ಜಗಳಕ್ಕಿಳಿದಿದ್ದರು. ಅಲ್ಲದೆ ಇಲ್ಲ ಸಲ್ಲದ ಆಪಾದನೆಗಳನ್ನು ಮಾಡುವ ಮೂಲಕ ಮಾನಸಿಕ ಹಿಂಸೆ,ಕಿರುಕುಳ ನೀಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಇಒ ಉಮಾದೇವಿ ಅವರು ಅ.8 ರಂದು ಪೊಲೀಸರಿಗೆ ನೀಡಿದ ಲಿಖಿತ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ಘಟನೆ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ, ಬಿಇಒ ದೂರಿನಲ್ಲಿ ಹೆಸರಿಸಿರುವ ವ್ಯಕ್ತಿಗಳಿಗೆ ವಿಚಾರಣೆಗೆ ಬರುವಂತೆ ನೋಟಿಸ್‌ ನೀಡುವ ಸಾಧ್ಯತೆ ಇದೆ. ಅಲ್ಲದೆ ಘಟನೆ ನಡೆದ ಸಂದರ್ಭದಲ್ಲಿ ಕಚೇರಿಯಲ್ಲಿ ಸಿಬ್ಬಂದಿ ಇತರೆ ವ್ಯಕ್ತಿಗಳಿಂದ ಮಾಹಿತಿ ಸಂಗ್ರಹಿ ಸಲಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ

ಸುದ್ದಿ ಸಂತೆ ನ್ಯೂಸ್ ಕುಷ್ಟಗಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಈ ತಿಂಗಳಿನಿಂದ ಹೆಚ್ಚಾಗಲಿದೆ ಸರ್ಕಾರಿ ನೌಕರರ ಸಂಬಳ.....ಎಷ್ಟು ಹೆಚ್ಚಾಗಲಿದೆ ಮೂಲ ವೇತನ ಕಂಪ್ಲೀಟ್ ಮಾಹಿತಿ.....ಅದ್ದೂರಿಯಾಗಿ ಶಾಸಕ ವಿಶ್ವಾಸ್ ವೈದ್ಯ ಹುಟ್ಟು ಹಬ್ಬ ಆಚರಣೆ.....ವಿರೇಶ ಬ್ಯಾಹಟ್ಟಿ ಆಂಡ್ ಟೀಮ್ ನಿಂದ ಅದ್ದೂರಿ ಆಚರಣೆ ಆತ್ಮೀಯರ ಅಭಿಮಾನಿಗಳ ಪ್ರೀತಿಯಲ್ಲಿ ಮಿಂದೆದ್ದ ಜನಸೇವಕ.....ನವೆಂಬರ್ ಒಳಗೆ 1,250 ಕೆಪಿಎಸ್‌ ಶಾಲೆಗಳು ಆರಂಭ.....ಮಾಹಿತಿ ನೀಡಿದ ಸಚಿವರು.....ರಾಜ್ಯ ಸರ್ಕಾರಿ ನೌಕರರಿಗೆ ಆರ್ಥಿಕ ಇಲಾಖೆಯಿಂದ ಮಹತ್ವದ ಮಾಹಿತಿ.....BEO ಕಚೇರಿ ಅವ್ಯವಹಾರ ತನಿಖೆಗೆ ಅನುಮತಿ.....ಆರಂಭಗೊಂಡ ತನಿಖೆ..... ಮರದ ಕೊಂಬೆ ಬಿದ್ದು ಶಿಕ್ಷಕ‌ ಸಾವು.....ದಸರಾ ರಜೆಯಲ್ಲೂ ನಡೆಯುತ್ತಿವೆ ವಿಶೇಷ ಕ್ಲಾಸ್.....ರಜೆಯ ಮೂಡ್ ನಡುವೆ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿ ಗಳು.....SSLC ,PUC ಪರೀಕ್ಷೆ ಗೆ ನೋಂದಣಿಗೆ ನವಂಬರ್ ‌11 ಕೊನೆಯ ದಿನಾಂಕ.....ಅಮಾನತು ಗೊಂಡ BEO ಇವರೇ ನೋಡಿ..... ಇಲಾಖೆಯಲ್ಲಿ ಇದ್ದುಕೊಂಡು ಮಾಡಿದ ಕೆಲಸ ನೋಡಿ.....ಭೀಕರ ಅಪಘಾತಕ್ಕೆ ಶಿಕ್ಷಕಿ ಬಲಿ.....ಈಗಷ್ಟೇ ನಡೆದ ಘಟನೆ.....