ತಿಪಟೂರು -
ಮರದ ಕೊಂಬೆಯೊಂದು ಶಿಕ್ಷಕರೊಬ್ಬರ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ತಿಪಟೂರಿನಲ್ಲಿ ನಡೆದಿದೆ ನಗರದ ಬಿ.ಎಚ್.ರಸ್ತೆಗೆ ಹೊಂದಿಕೊಂಡಂತಿರುವ ಕಲ್ಪತರು ಕಾಲೇಜಿನ ಮುಂಭಾಗ ಬೃಹತ್ ಮರ ಕೊಂಬೆ ರಸ್ತೆಗೆ ಉರುಳಿಬಿದ್ದ ಪರಿಣಾಮ ಶಾರದ ನಗರದ ನಿವಾಸಿ ಶಿಕ್ಷಕ ಶಿವಸ್ವಾಮಿ ಎಂಬು ವವರು ಮೃತಪಟ್ಟಿರುವ ಘಟನೆ ನಡೆದಿದೆ.ಬಹಳಷ್ಟು ವರ್ಷ ಗಳಿಂದ ಒಣಗಿ ನಿಂತಿದ್ದ ಮರದ ಬೃಹತ್ ಕೊಂಬೆಯೂ ಇದ್ದಕ್ಕಿದ್ದ ಹಾಗೆ ಮುರಿದು ಬಿದ್ದು ವ್ಯಕ್ತಿಯನ್ನು ಬಲಿ ಪಡೆದುಕೊಂಡಿದೆ.
ನಗರದಲ್ಲಿ ಬೀಳುವ ಹಂತದಲ್ಲಿ ನೂರಾರು ಮರಗಳಿದ್ದು ಯಾವುದೇ ಕ್ಷಣದಲ್ಲಾದರೂ, ಅಪಾಯ ಸಂಭವಿಸುವ ಸ್ಥಿತಿ ಹೆಚ್ಚಾಗಿದೆ ಇದರಿಂದ ಸಾರ್ವಜನಿಕರು ಸೇರಿದಂತೆ ವಾಹನ ಸವಾರರು ಆತಂಕದಲ್ಲಿ ಓಡಾಡುವಂತಹ ಪರಿಸ್ಥಿತಿ ಉಂಟಾಗಿದೆ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಠಾಣಾ ಸಿಬ್ಬಂದಿ, ನಗರಸಭೆ ಅಧಿಕಾರಿಗಳು ಹಾಗೂ ಬೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೃಹತ್ ಕೊಂಬೆ ಬಿದ್ದ ಪರಿಣಾಮ ಕೆಲ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ.
ಬೀಳುವ ಹಂತದಲ್ಲಿರುವ ನೂರಾರು ಮರಗಳ ಕೊಂಬೆಗಳು ಇದ್ದರೂ ಕೂಡ ಕ್ರಮ ಯಾವುದೇ ಕೈಗೊಂಡಿಲ್ಲ. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗೆ ಸಾರ್ವಜನಿಕರು ಇಡೀ ಶಾಪ ಹಾಕುವುದರ ಜತೆಗೆ ಕೂಡಲೇ ಒಣಗಿರುವ ಮರಗಳನ್ನು ತೆರವುಗೊಳಿಸ ಬೇಕೆಂದು ಆಗ್ರಹಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ತಿಪಟೂರು.....