ಬೆಂಗಳೂರು -
2027ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ SSLC ಹಾಗೂ ಪದವಿ ಪೂರ್ವ (PUC) ವಾರ್ಷಿಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಈ ಬಾರಿಯ ಪರೀಕ್ಷೆಗೆ ಹೊಸ ವಿದ್ಯಾರ್ಥಿಗಳು ಪುನರಾವರ್ತಿತರು ಹಾಗೂ ಖಾಸಗಿ ಅಭ್ಯರ್ಥಿಗಳು ನೋಂದಾಯಿಸಿಕೊಳ್ಳಲು ಅಗತ್ಯ ವಿರುವ ಮಾರ್ಗಸೂಚಿ ಮತ್ತು ಕೈಪಿಡಿಗಳನ್ನು ಇಲಾಖೆಯು ಬಿಡುಗಡೆ ಮಾಡಿದೆ.
ಆಯಾ ಶಾಲಾ-ಕಾಲೇಜುಗಳ ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರು ತಮ್ಮ ಶಾಲಾ ಲಾಗಿನ್ ಮೂಲಕ ನವೆಂಬರ್ 11ರ ಒಳಗಾಗಿ ನೋಂದಣಿ ಪ್ರಕ್ರಿಯೆ ಯನ್ನು ಪೂರ್ಣಗೊಳಿಸಲು ಕಾಲಾವಕಾಶ ನೀಡ ಲಾಗಿದೆ.ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆಯಲ್ಲಿ ಸ್ಯಾಟ್ಸ್ ತಂತ್ರಾಂಶವನ್ನು ಪ್ರಮುಖವಾಗಿ ಬಳಸಿಕೊಳ್ಳ ಲಾಗುತ್ತಿದ್ದು, ಹೆಚ್ಚಿನ ವಿವರಗಳು ಇದರಿಂದಲೇ ಲಭ್ಯವಾಗಲಿವೆ.
ಹೀಗಾಗಿ ಅಭ್ಯರ್ಥಿಯ ಹೆಸರು, ತಂದೆ-ತಾಯಿಯ ಹೆಸರು, ಜನ್ಮ ದಿನಾಂಕ, ಪ್ರವರ್ಗ, ಧರ್ಮ, ಲಿಂಗ ಹಾಗೂ ಪರೀಕ್ಷಾ ಮಾಧ್ಯಮಗಳ ವಿವರಗಳನ್ನು ಲಾಗಿನ್ ಸಮಯದಲ್ಲಿ ನೇರವಾಗಿ ಬದಲಾಯಿಸಲು ಸಾಧ್ಯವಿಲ್ಲ. ಒಂದು ವೇಳೆ ವಿದ್ಯಾರ್ಥಿಗಳ ಮಾಹಿತಿ ಗಳಲ್ಲಿ ಏನೆಲ್ಲಾ ಲೋಪದೋಷಗಳಿದ್ದು ತಿದ್ದುಪಡಿ ಮಾಡಬೇಕಿದ್ದರೆ, ಮೊದಲಿಗೆ ಸ್ಯಾಟ್ಸ್ ತಂತ್ರಾಂಶ ದಲ್ಲಿಯೇ ಬದಲಾವಣೆಗಳನ್ನು ಸರಿಪಡಿಸಿಕೊಂಡು, ಆ ನಂತರವೇ ನೋಂದಣಿ ಪ್ರಕ್ರಿಯೆ ಮುಂದುವರಿ ಸುವಂತೆ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....