LIVE TV LocalCrimeNationalInternationalPoliticsEducationTechnologyEntertainmentSportsFeature
State News

ರಾಜ್ಯ ಸರ್ಕಾರಿ ನೌಕರರಿಗೆ ಆರ್ಥಿಕ ಇಲಾಖೆಯಿಂದ ಮಹತ್ವದ ಮಾಹಿತಿ.....

ಬೆಂಗಳೂರು -

ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿ ಹಾಗೂ ನೌಕರರು ತಮ್ಮ ಸೇವಾ ವಿವರಗಳನ್ನು 'ವಿದ್ಯುನ್ಮಾನ ಸೇವಾ ವಹಿ' (e-SR) ನಲ್ಲಿ ಕಡ್ಡಾಯ ವಾಗಿ ನವೀಕರಿಸಿ ಪ್ರಕಟಿಸುವಂತೆ ಆರ್ಥಿಕ ಇಲಾಖೆಯ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ-2.0 (HRMS-2.0) ನಿರ್ದೇಶನಾಲಯವು ಕಟ್ಟುನಿಟ್ಟಿನ ಸೂಚನೆ ಹೊರಡಿಸಿದೆ.

ಅಕ್ಟೋಬರ್-2026 ರ ಅಂತ್ಯದ ವೇಳೆಗೆ ಹಳೆಯ HRMS-1.0 ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತ ಗೊಳಿಸಲಾಗುತ್ತಿದ್ದು ನವೆಂಬರ್-2026 ರಿಂದ ಕೇವಲ e-SR ಪ್ರಕಟಗೊಂಡಿರುವ ನೌಕರರಿಗೆ ಮಾತ್ರ HRMS -2.0 ತಂತ್ರಾಂಶದಲ್ಲಿ ವಾರ್ಷಿಕ ವೇತನ ಬಡ್ತಿ ಮುಂಬಡ್ತಿ, ವರ್ಗಾವಣೆ ಸೇರಿದಂತೆ ಪ್ರಮುಖ ಸೇವಾ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.

2021-22ನೇ ಸಾಲಿನಿಂದಲೇ ಸರ್ಕಾರಿ ಸೇವೆಗೆ ಸೇರ್ಪಡೆಗೊಂಡ ಸಿಬ್ಬಂದಿಯ ಸೇವಾ ವಹಿಯನ್ನು e-SR ಗೆ ಬದಲಾಯಿಸಲು ಸೂಚಿಸಲಾಗಿದ್ದರೂ ಹಾಗೂ ಮಾರ್ಚ್-2026ರ ಒಳಗೆ ಪ್ರಕ್ರಿಯೆ ಮುಗಿಸಲು ನಿರ್ದೇಶನ ನೀಡಿದ್ದರೂ, ಹಲವು ಇಲಾಖೆಗಳಲ್ಲಿ ಇದರ ಪ್ರಗತಿ ತೃಪ್ತಿಕರವಾಗಿಲ್ಲ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಇನ್ನು ಮುಂದೆ ನೌಕರರ ವಾರ್ಷಿಕ ವೇತನ ಬಡ್ತಿ, ಹಿಂದಿನ ಬಡ್ತಿ ಹಾಗೂ ವೇತನ ಸಂಬಂಧಿತ ಸೇವೆಗಳನ್ನು e-SR ಮತ್ತು HRMS-2 ರ ನೇರ (Live) ವಿವರಗಳ ಆಧಾರದ ಮೇಲೆಯೇ ನಿರ್ವಹಿಸಲಾಗುತ್ತದೆ.

ಅಲ್ಲದೆ ಪ್ರಧಾನ ಮಹಾಲೇಖಪಾಲರ (CAG) ಕಾಗದ ರಹಿತ ಕಾರ್ಯವಿಧಾನದ ಭಾಗವಾಗಿ ನಿವೃತ್ತಿ ವೇತನ (ಪೆನ್ಷನ್) ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುತ್ತಿದೆ. 2026ರ ಏಪ್ರಿಲ್ 1 ರಿಂದಲೇ ಎಲ್ಲಾ ಪಿಂಚಣಿ ಪ್ರಸ್ತಾವನೆಗಳನ್ನು (Form-7) ಕೇವಲ ಆನ್‌ಲೈನ್ ಮೂಲಕ ಸಿದ್ಧಪ ಡಿಸಿದ e-SR ದಾಖಲೆಗಳೊಂದಿಗೆ ರವಾನಿಸುವುದು ಕಡ್ಡಾಯವಾಗಿದೆ. ಆದ್ದರಿಂದ ಯಾವುದೇ ರೀತಿಯ ಸೇವಾ ತೊಡಕುಗಳು ಉಂಟಾಗದಂತೆ ತಕ್ಷಣವೇ ಸೇವಾ ವಿವರಗಳನ್ನು ಪರಿಶೀಲಿಸಿ, ತಿದ್ದುಪಡಿಗಳನ್ನು ಪೂರ್ಣಗೊಳಿಸಿ e-SR ಪ್ರಕಟಿಸಲು ಸೂಚಿಸಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಈ ತಿಂಗಳಿನಿಂದ ಹೆಚ್ಚಾಗಲಿದೆ ಸರ್ಕಾರಿ ನೌಕರರ ಸಂಬಳ.....ಎಷ್ಟು ಹೆಚ್ಚಾಗಲಿದೆ ಮೂಲ ವೇತನ ಕಂಪ್ಲೀಟ್ ಮಾಹಿತಿ.....ಅದ್ದೂರಿಯಾಗಿ ಶಾಸಕ ವಿಶ್ವಾಸ್ ವೈದ್ಯ ಹುಟ್ಟು ಹಬ್ಬ ಆಚರಣೆ.....ವಿರೇಶ ಬ್ಯಾಹಟ್ಟಿ ಆಂಡ್ ಟೀಮ್ ನಿಂದ ಅದ್ದೂರಿ ಆಚರಣೆ ಆತ್ಮೀಯರ ಅಭಿಮಾನಿಗಳ ಪ್ರೀತಿಯಲ್ಲಿ ಮಿಂದೆದ್ದ ಜನಸೇವಕ.....ನವೆಂಬರ್ ಒಳಗೆ 1,250 ಕೆಪಿಎಸ್‌ ಶಾಲೆಗಳು ಆರಂಭ.....ಮಾಹಿತಿ ನೀಡಿದ ಸಚಿವರು.....ರಾಜ್ಯ ಸರ್ಕಾರಿ ನೌಕರರಿಗೆ ಆರ್ಥಿಕ ಇಲಾಖೆಯಿಂದ ಮಹತ್ವದ ಮಾಹಿತಿ.....BEO ಕಚೇರಿ ಅವ್ಯವಹಾರ ತನಿಖೆಗೆ ಅನುಮತಿ.....ಆರಂಭಗೊಂಡ ತನಿಖೆ..... ಮರದ ಕೊಂಬೆ ಬಿದ್ದು ಶಿಕ್ಷಕ‌ ಸಾವು.....ದಸರಾ ರಜೆಯಲ್ಲೂ ನಡೆಯುತ್ತಿವೆ ವಿಶೇಷ ಕ್ಲಾಸ್.....ರಜೆಯ ಮೂಡ್ ನಡುವೆ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿ ಗಳು.....SSLC ,PUC ಪರೀಕ್ಷೆ ಗೆ ನೋಂದಣಿಗೆ ನವಂಬರ್ ‌11 ಕೊನೆಯ ದಿನಾಂಕ.....ಅಮಾನತು ಗೊಂಡ BEO ಇವರೇ ನೋಡಿ..... ಇಲಾಖೆಯಲ್ಲಿ ಇದ್ದುಕೊಂಡು ಮಾಡಿದ ಕೆಲಸ ನೋಡಿ.....ಭೀಕರ ಅಪಘಾತಕ್ಕೆ ಶಿಕ್ಷಕಿ ಬಲಿ.....ಈಗಷ್ಟೇ ನಡೆದ ಘಟನೆ.....