ಧಾರವಾಡ -
ಧಾರವಾಡದ ನೆಹರು ನಗರದಲ್ಲಿ ಪೆವರ್ಸ್ ಕಾಮಗಾರಿಗೆ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ಭೂಮಿಪೂಜೆ ಮಾಡಿ ಚಾಲನೆ ನೀಡಿದರು ಹೌದು
ವಾರ್ಡ್ ನಂ. 10ರ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಅವರು ಸ್ಥಳೀಯ ಮುಖಂಡರು ಕಾರ್ಯ ಕರ್ತರು ಭಾಗಿಯಾಗಿ ಶಾಸಕರಿಗೆ ಸಾಥ್ ನೀಡಿದರು
ಧಾರವಾಡ ಶಹರದ ವಾರ್ಡ್ ನಂ. 10ರ ವ್ಯಾಪ್ತಿಗೆ ಬರುವ ನೆಹರು ನಗರದಲ್ಲಿ ಪೆವರ್ಸ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.ಸ್ಥಳೀಯ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶ ದಿಂದ ಕೈಗೆತ್ತಿಕೊಳ್ಳಲಾಗಿರುವ ಈ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಬೆಲ್ಲದ ಅವರು ಭಾಗವಹಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಚಂದ್ರಕಲಾ ಕೋಟಬಾಗಿ, ಅರವಿಂದ್ ಅಲದಕಟ್ಟಿ, ಬಸವರಾಜ್ ಗರಗ, ಪಕ್ಷದ ಕಾರ್ಯಕರ್ತರು ಹಾಗೂ ಊರಿನ ಹಿರಿಯರು ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಇನ್ನೂ ಹೆಸರಾಂತ ಗುತ್ತಿಗೆದಾರ ಫಕ್ರುದ್ದೀನ್ ಅಲಿ ಕುಂದಗೋಳ, ಖ್ಚಾಜಾ ಕುಂದಗೋಳ, ಪ್ರಮೋದ್ ಕಪಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ.....