LIVE TV LocalCrimeNationalInternationalPoliticsEducationTechnologyEntertainmentSportsFeature
State News

6ನೇ ತರಗತಿ ಮಕ್ಕಳಿಗೆ ಬಿಗ್ ರಿಲೀಫ್.....ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿ.....

ನವದೆಹಲಿ -

6ನೇ ತರಗತಿ ಮಕ್ಕಳಿಗೆ ರಿಲೀಫ್ ನೀಡಲು CBSEಗೆ ಸುಪ್ರೀಂ ಸೂಚನೆ ಹೌದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಜಾರಿಗೆ ತಂದಿರುವ ತ್ರಿಭಾಷಾ ನೀತಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಯೊಂದು ನಡೆದಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಆರನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿನಾಯಿತಿ ಅಥವಾ ಸೂಕ್ತ ರಿಯಾಯಿತಿ ನೀಡುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸುಪ್ರೀಂಕೋರ್ಟ್ CBSEಗೆ ಸೂಚಿಸಿದೆ.ತ್ರಿಭಾಷಾ ನೀತಿ ಪ್ರಶ್ನಿಸಿ ಸಲ್ಲಿಸಿ ರುವ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಿದೆ. ಇದೇ ವೇಳೆ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಆರನೇ ತರಗತಿಯ ವಿದ್ಯಾರ್ಥಿಗಳಿಗೆ ತ್ರಿಭಾಷಾ ನೀತಿಯಿಂದ ವಿನಾಯಿತಿ ಅಥವಾ ಇತರ ಅನುಕೂಲ ಕಲ್ಪಿಸುವ ಅವಕಾಶ ಇದೆಯೇ? ಎಂಬುದನ್ನು ಪರಿಶೀಲಿಸುವಂತೆ ಹೇಳಿದೆ.

ತ್ರಿಭಾಷಾ ನೀತಿ ಜಾರಿಯಿಂದ ವಿದ್ಯಾರ್ಥಿಗಳಿಗೆ ಉಂಟಾಗಬಹುದಾದ ಒತ್ತಡದ ಕುರಿತು ನ್ಯಾಯಾಲಯ ಈ ಹಿಂದೆಯೂ ಕಳವಳ ವ್ಯಕ್ತಪಡಿ ಸಿತ್ತು 6ನೇ ತರಗತಿಯನ್ನು ಹೊಸ ವ್ಯವಸ್ಥೆಯ ಆರಂಭದ ಹಂತವಾಗಿ ಆಯ್ಕೆ ಮಾಡಿಕೊಂಡಿದ್ದರೆ ಪ್ರಸಕ್ತ ವರ್ಷದ ಆರನೇ ತರಗತಿ ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡಿ ಮುಂದಿನ ವರ್ಷದಿಂದ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸುವ ಸಾಧ್ಯತೆಯನ್ನು ಪರಿಶೀಲಿಸಬಹುದು ಎಂಬ ಅಭಿಪ್ರಾಯವನ್ನು ಪೀಠ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯದ ಸಲಹೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂ ದಿಗೆ ಚರ್ಚಿಸಿ ಮತ್ತೆ ನ್ಯಾಯಾಲಯಕ್ಕೆ ಮಾಹಿತಿ ನೀಡು ವುದಾಗಿ ತಿಳಿಸಿದ್ದಾರೆ.ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಹಾಗೂ ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF-SE)-2023ಕ್ಕೆ ಅನುಗುಣ ವಾಗಿ CBSE ತನ್ನ ಭಾಷಾ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತಂದಿದೆ.

CBSEಯ 2026-27ರ ಅಧ್ಯಯನ ಯೋಜನೆಯ ಭಾಗವಾಗಿ 6ನೇ ತರಗತಿಯಲ್ಲಿ 'R3' ಅಂದರೆ ಮೂರನೇ ಭಾಷೆಯನ್ನು ಪರಿಚಯಿಸುವ ಕುರಿತು ಶಾಲೆಗಳಿಗೆ ಸೂಚಿಸಲಾಗಿತ್ತು. ಮೇ 4ರಂದು ಹೊರಡಿಸಿದ CBSE ಸುತ್ತೋಲೆಯಲ್ಲಿ 6ನೇ ತರಗತಿಯಲ್ಲಿ ಮೂರನೇ ಭಾಷೆ ಪರಿಚಯಿಸುವ ಹಿಂದಿನ ಸೂಚನೆಯನ್ನು ಪಾಲಿಸುವಂತೆ ಸಂಯೋಜಿತ ಶಾಲೆಗಳಿಗೆ ತಿಳಿಸಲಾಗಿತ್ತು.

2026ರ ಜುಲೈ 1ರಿಂದ 9ನೇ ತರಗತಿ ವಿದ್ಯಾರ್ಥಿಗಳು ಮೂರು ಭಾಷೆಗಳನ್ನು ಕಲಿಯುವುದನ್ನು ಕಡ್ಡಾಯ ಗೊಳಿಸುವ ವ್ಯವಸ್ಥೆಯೂ ಜಾರಿಗೆ ಬಂದಿದೆ ಈ ಮೂರು ಭಾಷೆಗಳಲ್ಲಿ ಕನಿಷ್ಠ ಎರಡು ಭಾರತೀಯ ಭಾಷೆಗಳಾಗಿರಬೇಕು. ವಿದೇಶಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಎರಡು ಭಾರತೀಯ ಭಾಷೆಗಳ ಜೊತೆಗೆ ಮೂರನೇ ಅಥವಾ ಹೆಚ್ಚುವರಿ ನಾಲ್ಕನೇ ಭಾಷೆಯಾಗಿ ಅದನ್ನು ಆಯ್ಕೆ ಮಾಡಿ ಕೊಳ್ಳಬಹುದು.

ಸುದ್ದಿ ಸಂತೆ ನ್ಯೂಸ್ ನವದೆಹಲಿ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಸಿಗುತ್ತಾ ಗಿಫ್ಟ್​..... DA ಇಷ್ಟು ಪರ್ಸೆಂಟ್​ ಹೆಚ್ಚಳಕ್ಕೆ ಸಿದ್ದತೆ.....ಶಾಲಾ ಸಮಯ ಬದಲಾವಣೆ ಮಾಡಿದ್ರೆ ಸಮಸ್ತ ಪರಿಹಾರವಾಗುತ್ತಾ.....ಶಾಲಾ ಸಮಯ ಬದಲಾವಣೆ ಮೇಲೆ ಹುಟ್ಟುಕೊಂಡಿವೆ ಹತ್ತಾರು ಪ್ರಶ್ನೆ ಗಳು.....ಪೊಲೀಸ್ ಇನ್ಸ್ಪೆಕ್ಟರ್ ಗಳ ವರ್ಗಾವಣೆ...... ಪೊಲೀಸ್ ಇಲಾಖೆಯ ಆಡಳಿತ ಯಂತ್ರಕ್ಕೆ ಸರ್ಜರಿ.....6ನೇ ತರಗತಿ ಮಕ್ಕಳಿಗೆ ಬಿಗ್ ರಿಲೀಫ್.....ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿ.....ಬೆಂಗಳೂರಿನಲ್ಲಿ ‘ಗುರು ವಂದನೆ–ಹೃದಯಾಭಿವಂದನೆ’ ಕಾರ್ಯಕ್ರಮ.....KSPSTA ಸಂಘಟನೆ ಯಿಂದ ಮಹಾನ್ ಕಾರ್ಯಕ್ರಮ.....ಶಾಲೆಗಳಲ್ಲಿ ಮಕ್ಕಳಿಗೆ ಶುರುವಾಗಲಿದೆ ಹೊಸ ಪಾಠ.....ಶಿಕ್ಷಕರಿಗೆ ಹೊಸದೊಂದು ಜವಾಬ್ದಾರಿ.....AI ಬಳಸಿ 1980ರ ಟ್ರೆಂಡಿಂಗ್‌ ಫೋಟೋ ಕ್ರಿಯೇಟ್ ಮಾಡುವ ಮುನ್ನ ಎಚ್ಚರ.....ಸರ್ಕಾರಿ ನೌಕರರೇ ಟಾರ್ಗೆಟ್.....ನೌಕರರ ಬಡ್ತಿಗೆ ಗ್ರಹಣ.....ನೌಕರರ ವಲಯದಿಂದ ಆಕ್ರೋಶ ಅಸಮಾಧಾನ.....ಶಿಕ್ಷಣ ಸಚಿವರನ್ನು ಭೇಟಿಯಾದ KSPSTA ಟೀಮ್..... ಸಚಿವರೊಂದಿಗೆ ಮಹತ್ವದ ಚರ್ಚೆ ಮಾಡಿದ ಚಂದ್ರಶೇಖರ ನುಗ್ಗಲಿ ನೇತೃತ್ವದ ನಿಯೋಗ.....ಗೌರಿ ಗಣೇಶ ಹಬ್ಬಕ್ಕೆ ಮಧುವಣಗಿತ್ತಿಯಂತೆ ಕಂಗೊಳಿಸುತ್ತಿರುವ Big Mishra.....ಹಬ್ಬದ ಸಂಭ್ರಮಕ್ಕೆ ಮಳಿಗೆಗಳಿಗೆ ಹೊಸ ಮೆರುಗು ನೀಡಿದ ಸಂಜಯ ಮಿಶ್ರಾ.....