LIVE TV LocalCrimeNationalInternationalPoliticsEducationTechnologyEntertainmentSportsFeature
State News

ನೌಕರರ ಬಡ್ತಿಗೆ ಗ್ರಹಣ.....ನೌಕರರ ವಲಯದಿಂದ ಆಕ್ರೋಶ ಅಸಮಾಧಾನ.....

ಕಲಬುರಗಿ -

ಹೌದುಕ ಲ್ಯಾಣ ಕರ್ನಾಟಕಕ್ಕೆ ವಿಶೇಷ ಪ್ರಾತಿನಿಧ್ಯ ಸಿಕ್ಕಿ 13 ವರ್ಷಗಳು ಕಳೆದಿವೆ. ಆದರೆ, ಈ ಭಾಗದ ನೌಕರ ರಿಗೆ 371 ಜೆ ವಿಶೇಷ ಸ್ಥಾನಮಾನ ವರವಾಗದೆ ಶಾಪ ವಾಗಿ ಪರಿಣಮಿಸಿದೆ.ಕಲ್ಯಾಣದ ನೌಕರರು ಜೂನಿಯ ರ್‌ಗಳಾದರೆ ಕಲ್ಯಾಣ ಕರ್ನಾಟಕೇತರರು ಸೀನಿಯರ್‌ ಗ್ರೇಡ್‌ ಹುದ್ದೆಗಳನ್ನು ಪಡೆಯುತ್ತಿದ್ದಾರೆ.ಈ ಸಮಸ್ಯೆ ಬಗೆಹರಿಸಲು ಸರಕಾರ ಮುಂದಾಗದಿರುವುದಕ್ಕೆ ನೌಕರರ ವಲಯದಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗ ಹಿಂದುಳಿದ ಕಾರಣಕ್ಕಾಗಿ 371ಜೆ ವಿಶೇಷ ಸ್ಥಾನಮಾನವನ್ನು ಜಾರಿ ಮಾಡಲಾಗಿದೆ

ಶಿಕ್ಷಣ ಮತ್ತು ನೇಮಕಾತಿಯಲ್ಲಿ ಪ್ರಸ್ತುತ ಸರಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಆದರೆ, ಸರಕಾರಿ ನೌಕರರಿಗೆ 371ಜೆ ಯಾಕಾದರು ತರಲಾಗಿದೆ ಎನ್ನುವಂತಾಗಿದೆ. ಏಕೆಂದರೆ ಕಲ್ಯಾಣ ಕರ್ನಾಟಕ ಭಾಗದವರಿಗೆ ಸೀನಿ ಯಾರಿಟಿ ಇದ್ದರೂ ಬಡ್ತಿ ಸಿಗುತ್ತಿಲ್ಲ. ಆದರೆ, ಕಲ್ಯಾಣ ಕರ್ನಾಟಕೇತರ ಬೇರೆ ಜಿಲ್ಲೆಗಳ ನೌಕರರು ಈ ಭಾಗದ ನೌಕರರಿಗಿಂತ ಜೂನಿಯರ್‌ಗಳಿದ್ದರೂ ಕಲ್ಯಾಣದವ ರಿಗಿಂತ ಬೇಗ ಬಡ್ತಿ ಪಡೆದು ನಮ್ಮ ಭಾಗದ ನೌಕರರಿ ಗಿಂತ ಸೀನಿಯರ್‌ ಗ್ರೇಡ್‌ ಹುದ್ದೆಗಳನ್ನು ಪಡೆಯು ವಂತಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ನೌಕರರು ಸರಕಾರದ ವಿರುದ್ಧ ಅಸಮಾ ಧಾನ ವ್ಯಕ್ತಪಡಿಸುತ್ತಿದ್ದಾರೆ.

ಸರಕಾರಿ ನೌಕರರಿಗೆ ಬಡ್ತಿಯನ್ನು ಜಾರಿ ಮಾಡುವಾಗ ಮೊದಲು ನೌಕರರ ಅಭಿಪ್ರಾಯಗಳನ್ನು ಸಂಗ್ರಹಿಸ ಲಾಗುತ್ತಿದೆ. ಯಾರಿಗೆ 371ಜೆ ಸೌಲಭ್ಯ ಬೇಕು ಎಂದು ಪ್ರಶ್ನೆ ಕೇಳಿದಾಗ ಅನಿವಾರ್ಯವಾಗಿ ಈ ಭಾಗದ ನೌಕರರು ಕಲ್ಯಾಣ ಕರ್ನಾಟಕ ಎಂದು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಇಲಾಖೆಗಳು ಕಲ್ಯಾಣ ಕರ್ನಾಟಕ ಒಂದು ಸೀನಿಯಾರಿಟಿ ಲಿಸ್ಟ್‌ ಮತ್ತು ನಾನ್‌ ಕಲ್ಯಾಣ ಕರ್ನಾಟಕ ಇನ್ನೊಂದು ಲಿಸ್ಟ್‌ ಸೇರಿ ಒಟ್ಟು ಎರಡು ಲಿಸ್ಟ್‌ಗಳನ್ನು ಮಾಡಲಾಗುತ್ತಿದೆ.

ಉದಾಹರಣೆಗೆ ಕಲ್ಯಾಣ ಕರ್ನಾಟಕದ 'ಸಿ' ಗ್ರೇಡ್‌ ನೌಕರ 'ಬಿ' ಗ್ರೇಡ್‌ ಹುದ್ದೆಗೆ ಬಡ್ತಿ ಪಡೆಯಬೇಕಾದರೆ ಕಲ್ಯಾಣ ಕರ್ನಾಟಕದಲ್ಲಿ ಬಡ್ತಿಗೆ ಖಾಲಿ ಇರುವ ಶೇ.75 ರಷ್ಟು ಹುದ್ದೆಗಳಲ್ಲಿ ಮಾತ್ರ ಅರ್ಹನಾಗಿರುತ್ತಾನೆ. ಕಲ್ಯಾಣ ಕರ್ನಾಟಕದವರು ಹೆಚ್ಚು ಜನರು ಇರುವಾಗ ಶೇ.75ರಷ್ಟು ಜನರಿಗೆ ಮಾತ್ರ ಬಡ್ತಿ ಸಿಗುತ್ತದೆ. ಆದರೆ, ಈ ಭಾಗದಲ್ಲಿ ಕಲ್ಯಾಣ ಕರ್ನಾಟಕೇತರ ನೌಕರರು ಶೇ.5ರಿಂದ 6ರಷ್ಟು ಇದ್ದಾರೆ. ಇವರಿಗೆ ಶೇ.20ರಿಂದ ಶೇ.25ರಷ್ಟು ಬಡ್ತಿಯಲ್ಲಿ ಹುದ್ದೆಗಳು ಖಾಲಿಯಿವೆ.

ಇವರು ಕಡಿಮೆ ನೌಕರರು ಇದ್ದು, ಹೆಚ್ಚು ಹುದ್ದೆಗಳು ಸಿಗುವುದರಿಂದ ಅನಿವಾರ್ಯವಾಗಿ 'ಬಿ' ದರ್ಜೆಯ ಹುದ್ದೆ ಬಡ್ತಿ ಸಿಗುತ್ತದೆ. ಇದರಿಂದ ಕಲ್ಯಾಣದ ನೌಕರರು ಜೂನಿಯರ್‌ಗಳಾಗಿ ಉಳಿದರೆ ಬೇರೆ ಜಿಲ್ಲೆಯ ನೌಕರರು ಸೀನಿಯರ್‌ಗಳಾಗುತ್ತಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಕಲಬುರಗಿ......

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
AI ಬಳಸಿ 1980ರ ಟ್ರೆಂಡಿಂಗ್‌ ಫೋಟೋ ಕ್ರಿಯೇಟ್ ಮಾಡುವ ಮುನ್ನ ಎಚ್ಚರ.....ಸರ್ಕಾರಿ ನೌಕರರೇ ಟಾರ್ಗೆಟ್.....ನೌಕರರ ಬಡ್ತಿಗೆ ಗ್ರಹಣ.....ನೌಕರರ ವಲಯದಿಂದ ಆಕ್ರೋಶ ಅಸಮಾಧಾನ.....ಶಿಕ್ಷಣ ಸಚಿವರನ್ನು ಭೇಟಿಯಾದ KSPSTA ಟೀಮ್..... ಸಚಿವರೊಂದಿಗೆ ಮಹತ್ವದ ಚರ್ಚೆ ಮಾಡಿದ ಚಂದ್ರಶೇಖರ ನುಗ್ಗಲಿ ನೇತೃತ್ವದ ನಿಯೋಗ.....ಗೌರಿ ಗಣೇಶ ಹಬ್ಬಕ್ಕೆ ಮಧುವಣಗಿತ್ತಿಯಂತೆ ಕಂಗೊಳಿಸುತ್ತಿರುವ Big Mishra.....ಹಬ್ಬದ ಸಂಭ್ರಮಕ್ಕೆ ಮಳಿಗೆಗಳಿಗೆ ಹೊಸ ಮೆರುಗು ನೀಡಿದ ಸಂಜಯ ಮಿಶ್ರಾ.....ಶಾಲಾ ಸಮಯ ಬದಲಾವಣೆ ಗೆ ಶಿಕ್ಷಕ ಸಂಘಟನೆಗಳು ಮನವಿ ನೀಡಿದ್ರಾ.....ಮಾಹಿತಿ ಬಿಚ್ಚಿಟ್ಟ ಸಚಿವರು.....ಚರಂಡಿ ದಾಟಲು ವೃದ್ಧನ ಹೆಗಲೇರಿದ ಸರ್ಕಾರಿ ಅಧಿಕಾರಿ.....ಇದು ಆಡಳಿತ ವ್ಯವಸ್ಥೆ.....ಒಂದು ಹುದ್ದೆಗೆ ಇಬ್ಬರು BEO.....ಗೊಂದಲ ದಲ್ಲಿ ಶಿಕ್ಷಕರು.....ಕರ್ತವ್ಯ ಮಾಡುತ್ತಿರುವ ಇಬ್ಬರು.....ಶಾಲಾ ವಿದ್ಯಾರ್ಥಿ ಅಪಹರಣ..... ಲಕ್ಷ ಲಕ್ಷ ವಸೂಲಿ ಚಿನ್ನ ಸುಲಿಗೆ.....ನಿಲ್ಲದ ಬೆದರಿಕೆ.....ನಾಡಿನ ಜನತೆಗೆ Big Mishra ದಿಂದ ಗೌರಿ ಗಣೇಶ ಹಬ್ಬದ ಶುಭಾಶಯಗಳು..... ಸಂಸ್ಥೆಯ ಪರವಾಗಿ ಶುಭ ಕೋರಿದ ಸಂಜಯ ಮಿಶ್ರಾ.....ರಕ್ಷಣೆ ಇಲ್ಲದ ಶತಮಾನದ ಸರಕಾರಿ ಶಾಲೆ.....ಶಾಲೆಗೆ ಎದುರಾಗಿದೆ ಬಹುದೊಡ್ಡ ಆತಂಕ.....