ಬೆಂಗಳೂರು -
ಸಧ್ಯ ರಾಜ್ಯದಲ್ಲಿ ಶಾಲೆಗಳ ಸಮಯದಲ್ಲಿ ಬದಲಾವಣೆ ಆಗುತ್ತಾ ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೆ ಏನಾಗಲಿದೆ ಏನು ಎಂಬ ಬಗ್ಗೆ ಬಿಸಿ ಬಿಸಿ ಮಾತುಗಳು ಚರ್ಚೆಯ ನಡುವೆ ಮತ್ತೊಂದು ದೊಡ್ಡ ಪ್ರಶ್ನೆ ಹುಟ್ಟುಕೊಂಡಿದೆ ಹೌದು ಶಾಲೆಗಳ ಸಮಯ ವನ್ನು ಬದಲಾವಣೆ ಮಾಡಿದರೆ ಸಮಸ್ಯೆ ಬಗೆಹರಿಯುತ್ತಾ ಎಂಬ ಮಾತುಗಳು ಚರ್ಚೆ ಗೆ ವೇದಿಕೆಯಾಗಿವೆ
ಶಾಲಾ ಸಮಯ ಬದಲಾವಣೆ ಮಾತ್ರದಿಂದ ಬೆಂಗಳೂರು ಸೇರಿದಂತೆ ಕೆಲ ಪ್ರಮುಖ ನಗರ ಗಳ ಟ್ರಾಫಿಕ್ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾ ಗುತ್ತದೆಯೇ ಎಂಬ ಪ್ರಶ್ನೆಯೂ ಎದುರಾಗಿದೆ. ನಗರ ದಲ್ಲಿ ಹೆಚ್ಚುತ್ತಿರುವ ಖಾಸಗಿ ವಾಹನಗಳ ಸಂಖ್ಯೆ, ಶಾಲಾ ಬಸ್‌ಗಳು, ಕ್ಯಾಬ್‌ಗಳು, ಕಚೇರಿ ವಾಹನಗಳು ಹಾಗೂ ಪೀಕ್ ಅವರ್‌ಗಳಲ್ಲಿನ ಸಂಚಾರದ ಒತ್ತಡವನ್ನು ಸಮಗ್ರವಾಗಿ ನಿರ್ವಹಿಸುವ ಅಗತ್ಯವಿದೆ.
ಶಾಲೆಗಳ ಸಮಯವನ್ನು ಬದಲಿಸಿದರೆ ಪೋಷಕರ ಕಚೇರಿ ಸಮಯಕ್ಕೆ ಹೊಂದಾಣಿಕೆಯಾಗದಿರುವ ಸಾಧ್ಯತೆಯೂ ಇದೆ ವಿಶೇಷವಾಗಿ ಇಬ್ಬರೂ ಉದ್ಯೋಗದಲ್ಲಿರುವ ಕುಟುಂಬಗಳಿಗೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಮತ್ತು ಮರಳಿ ಕರೆತರುವ ವ್ಯವಸ್ಥೆ ಮತ್ತಷ್ಟು ಸವಾಲಾಗಬಹುದು.
ಹೀಗಾಗಿ ಕೇವಲ ಆಡಳಿತಾತ್ಮಕವಾಗಿ ಸಮಯ ಬದಲಿಸುವ ಬದಲು ಪೋಷಕರು, ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಶಾಲಾ ವಾಹನಗಳ ಸಂಘಟನೆಗಳ ಅಭಿಪ್ರಾಯ ಪಡೆಯುವುದು ಅಗತ್ಯವಾಗಿದೆ.ಈ ಕುರಿತು ಸಂಚಾರ ಪೊಲೀಸರು, ಶಿಕ್ಷಣ ಇಲಾಖೆ, ಪೋಷಕರ ಪ್ರತಿನಿಧಿಗಳು, ಖಾಸಗಿ ಶಾಲಾ ಆಡಳಿತ ಮಂಡಳಿಗಳು ಹಾಗೂ ಶಾಲಾ ವಾಹನ ಚಾಲಕರ ಸಂಘಟನೆಗಳೊಂದಿಗೆ ಸಭೆ ನಡೆಸಲು ಸರ್ಕಾರ ಮುಂದಾಗಿದೆ ಎಲ್ಲಾ ವರ್ಗಗಳ ಅಭಿಪ್ರಾಯಗಳನ್ನು ಸಂಗ್ರಹಿಸಿದ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ
ಸದ್ಯಕ್ಕೆ ಶಾಲಾ ಸಮಯ ಬದಲಾವಣೆಯ ಬಗ್ಗೆ ಯಾವುದೇ ಅಂತಿಮ ಆದೇಶ ಹೊರಬಿದ್ದಿಲ್ಲ. ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಸಮಾಲೋಚನೆಯ ನಂತರವೇ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ.ಒಟ್ಟಿನಲ್ಲಿ, ಬೆಂಗಳೂರಿನ ದಟ್ಟಣೆಗೆ ಶಾಲಾ ಸಮಯ ಬದಲಾವಣೆ ಒಂದು ಪರಿಹಾರ ವಾಗಬಹುದೇ ಹೊರತು ಏಕೈಕ ಪರಿಹಾರವಲ್ಲ. ಶಾಲಾ ಸಮಯದೊಂದಿಗೆ ಕಚೇರಿ ಸಮಯದ ಹಂತವಾರು ಬದಲಾವಣೆ, ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ, ಶಾಲಾ ಬಸ್‌ಗಳ ಸಂಚಾರ ನಿರ್ವಹಣೆ ಹಾಗೂ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ನಿಯಂತ್ರಣ ಸೇರಿದಂತೆ ಹಲವು ಕ್ರಮಗಳನ್ನು ಸಮನ್ವಯಗೊಳಿಸಿದಾಗ ಮಾತ್ರ ನಗರದ ಸಂಚಾರ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....