LIVE TV LocalCrimeNationalInternationalPoliticsEducationTechnologyEntertainmentSportsFeature
State News

ಭೀಕರ ಅಪಘಾತ SSLC ವಿದ್ಯಾರ್ಥಿ ಸಾವು.....ಅಪ್ರಾಪ್ತ ರಿಗೆ ಬೈಕ್ ಕೊಡುವ ಮುನ್ನ ಇರಲಿ ಎಚ್ಚರಿಕೆ.....

ಬೆಂಗಳೂರು -

ಒನ್‌ವೇನಲ್ಲಿ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬಂದು ಬುಲೆಟ್‌ಗೆ ಡಿಕ್ಕಿ ಹೊಡೆದ ಪರಿಣಾಮ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ ವಿದ್ಯಾರಣ್ಯಪುರದ ನಿವಾಸಿ ಹೇಮಂತ್ (16) ಮೃತ ವಿದ್ಯಾರ್ಥಿಯಾಗಿದ್ದಾನೆ.

ಹೇಮಂತ್ ಸ್ನೇಹಿತನನ್ನು ರಾಯಲ್‌ ಎನ್‌ಫಿಲ್ಡ್ ಬೈಕ್‌ನ ಹಿಂಬದಿ ಕೂರಿಸಿಕೊಂಡು ದೊಡ್ಡಬೆಟ್ಟಹಳ್ಳಿ ಲೇಔಟ್ ಕಡೆಯಿಂದ ಶ್ಯಾಮರಾಜಪುರದ ಜೆ.ಕೆ ಬಸವಣ್ಣ ಸರ್ಕಲ್ ಬಳಿಯ ನ್ಯೂ ಬಿಡಿಎ ಲೇಔಟ್ ರಸ್ತೆಯಲ್ಲಿ ಹೋಗುತ್ತಿದ್ದ. ಅದೇ ಸಮಯಕ್ಕೆ ಬ್ಯಾಲದ ಕೆರೆ ಕಡೆಯಿಂದ ಕಾರು ಚಾಲಕ ಒನ್‌ವೇನಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದು ಇವರ ಬೈಕ್‌ ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಈ ಇಬ್ಬರು ವಿದ್ಯಾರ್ಥಿಗಳು ರಸ್ತೆಗೆ ಉರುಳಿಬಿದ್ದಿದ್ದಾರೆ.

ತಕ್ಷಣ ಅವರಿಬ್ಬರಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸ ಲಾಗಿತ್ತು. ಆದರೆ, ಹೇಮಂತ್ ತಲೆಗೆ ಗಂಭೀರ ಪೆಟ್ಟಾ ಗಿದ್ದರಿಂದ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರನಿಗೆ ಕಾಲು ಹಾಗೂ ತೊಡೆಯ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು. ಈ ಸಂಬಂಧ ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಸಾವು.....ಚಿಕಿತ್ಸೆ ಫಲಿಸದೇ ನಿಧನ.....ಶಿಕ್ಷಕರಿಗೆ ಗಿಫ್ಟ್ ಕೂಪನ್ ದೂರು ದಾಖಲು.....ಕೊಡಗು ಜಿಲ್ಲೆಯಲ್ಲೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..... ನಾಳೆ ಎರಡು ಜಿಲ್ಲೆಗಳಲ್ಲಿ ರಜೆ ಘೋಷಣೆ.....ಅಕ್ಟೋಬರ್ 22 ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.....ಹೂಲಿ ಗ್ರಾಮದಲ್ಲಿ ಆರಂಭಗೊಂಡ ರೊಡ್ಡ ಹನಮಪ್ಪ ದೇವರ ದ್ವಾರಬಾಗಿಲು ಕಾಮಗಾರಿ..... ವಿರೇಶ ಬ್ಯಾಹಟ್ಟಿ ದೇಣಿಗೆ ನೀಡಿದ ಬೆನ್ನಲ್ಲೇ ಆರಂಭಗೊಂಡ ಕಾಮಗಾರಿ..... ಗ್ರಾಮಸ್ಥರಲ್ಲಿ ಹರ್ಷ.....ದಸರಾ ರಜೆ ವಿಸ್ತರಣೆ KSPSTA ದಿಂದ ಮಹತ್ವದ ಸಂದೇಶ.....ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ‘ಬಡ್ತಿ ಪರ್ವ’ ಅಭಿಯಾನ.....ಮಾಹಿತಿ ನೀಡಿದ KSPSTA ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ.....ಭೀಕರ ಅಪಘಾತ SSLC ವಿದ್ಯಾರ್ಥಿ ಸಾವು.....ಅಪ್ರಾಪ್ತ ರಿಗೆ ಬೈಕ್ ಕೊಡುವ ಮುನ್ನ ಇರಲಿ ಎಚ್ಚರಿಕೆ.....ತೀವ್ರಗೊಂಡ BEO ಕಚೇರಿಯಲ್ಲಿನ ಹಣ ದುರ್ಬಳಕೆ ಪ್ರಕರಣದ ತನಿಖೆ.....ಸರ್ಕಾರಿ ನೌಕರರ ಲಂಚ ಪ್ರಕರಣ ತನಿಖೆಗೆ ಪೂರ್ವ ಅನುಮತಿ ಬೇಡ.....