ಹರಪನಹಳ್ಳಿ -
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕಿ ಯೊಬ್ಬರು ಮೆಕ್ಕಾದಲ್ಲಿ ನಿಧನರಾಗಿದ್ದಾರೆ ಹೌದು ವಿಜಯನಗರ ನಗರದ 9ನೇ ವಾರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದ ನಗೀನಾಬಾನು(45) ಅನಾರೋಗ್ಯದಿಂದ ಮೆಕ್ಕಾದಲ್ಲಿ ನಿಧನರಾಗಿದ್ದಾರೆ. ದಸರಾ ರಜೆ ಹಿನ್ನೆಲೆಯಲ್ಲಿ ತವರೂರಿ ದಾವಣಗೆರೆ ಜಿಲ್ಲೆ ನಲ್ಲೂರಿನ ತಮ್ಮ ತವರೂರಿಗೆ ತೆರಳಿದ್ದ ನಗೀನಾ ಬಾನು ಕುಟುಂಬದವರೊಂದಿಗೆ ಮೆಕ್ಕಾಗೆ ಉಮ್ರಾ ಯಾತ್ರೆಯನ್ನು ಅಕ್ಟೊಬರ್ 3 ರಂದು ಕೈಗೊಂಡಿದ್ದರು.
ಮೆಕ್ಕಾ ತಲುಪಿದಾಗ ಅನಾರೋಗ್ಯ ಉಂಟಾಗಿ ಅಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು ಚಿಕಿತ್ಸೆ ಫಲಿಸದೇ ನಿಧನ ರಾದರು. ಅಂತಿಮ ಸಂಸ್ಕಾರವನ್ನು ಮೆಕ್ಕಾದಲ್ಲಿಯೇ ನೆರವೇರಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಶಿಕ್ಷಕ ದಂಪತಿಯಾದ ಅತಾವುಲ್ಲಾ ಮತ್ತು ನಗೀನಾಬಾನು ಅವರು ಆಚಾರ್ಯ ಬಡಾವಣೆಯಲ್ಲಿ ವಾಸವಾಗಿದ್ದರು. ಪತಿ ಅತಾವುಲ್ಲಾ ಅವರು ಬಾಣಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಮೆನ್ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.ಇವರ ನಿಧನಕ್ಕೆ ಶಿಕ್ಷಕ ಬಂಧುಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹರಪನಹಳ್ಳಿ.....