LIVE TV LocalCrimeNationalInternationalPoliticsEducationTechnologyEntertainmentSportsFeature
State News

ತೀವ್ರಗೊಂಡ BEO ಕಚೇರಿಯಲ್ಲಿನ ಹಣ ದುರ್ಬಳಕೆ ಪ್ರಕರಣದ ತನಿಖೆ.....

ಕೊಪ್ಪಳ -

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ BEO ಕಚೇರಿ ಯಲ್ಲಿ ನ 70 ಲಕ್ಷ ರೂಪಾಯಿ ಅವ್ಯವಹಾರ ಪ್ರಕರಣ ದ ತ‌ನಿಖೆ ತೀವ್ರಗೊಂಡಿದೆ ಹೌದು ನಿವೃತ್ತ ನೌಕರರ ಗಳಿಕೆ ರಜೆ ನಗದೀಕರಣ ಬಿಲ್‌, ಅತಿಥಿ ಶಿಕ್ಷಕರ ಗೌರವಧನ ಬಿಲ್‌, ಅಂತಿಮ ಸಂದಾಯ ಬಿಲ್‌ (ಜಿಪಿಎಫ್‌) ಹಾಗೂ ತುಟ್ಟಿಭತ್ಯೆ ಬಾಕಿ ಬಿಲ್‌ಗಳ ಮೂಲಕ ಸರ್ಕಾರದ ಲಕ್ಷಾಂತರ ಹಣವನ್ನು ನೌಕರ ತನ್ನದೂ ಸೇರಿದಂತೆ ಇತರೆ ಖಾಸಗಿ ವ್ಯಕ್ತಿಗಳ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿರುವುದನ್ನು ಲೆಕ್ಕಪರಿಶೋಧಕರು ಪತ್ತೆಹಚ್ಚಿದ್ದಾರೆ.

ನಿಯಮಗಳ ಪ್ರಕಾರ ಕಚೇರಿಯ ಯಾವುದೇ ಒಂದು ಬಿಲ್‌ ಪಾವತಿ ಮಾಡಬೇಕಾದರೆ ಕಾರ್ಯನಿರ್ವಾಹಕ, ಅಧೀಕ್ಷಕ, ವ್ಯವಸ್ಥಾಪಕ ಹಾಗೂ ಬಿಇಒ ಅವರ ಟಿಪ್ಪಣಿಯೊಂದಿಗೆ ಖುದ್ದಾಗಿ (ಮ್ಯಾನುವೆಲ್‌) ಉಪ ಖಜಾನೆಗೆ ಸಲ್ಲಿಕೆಯಾಗಬೇಕಿರುವುದು ಕಡ್ಡಾಯ. ಆದರೆ BEO ಕಚೇರಿ ನೌಕರ ಕನಕನಗೌಡ ಯಾವುದೇ ಕಡತಗಳನ್ನು ಕಚೇರಿಯಲ್ಲಿ ಸಿಬ್ಬಂದಿ ಹಾಗೂ ಬಿಇಒ ಅವರ ಬಳಿ ಮಂಡಿಸದೇ ಕಾನೂನು ಬಾಹಿರವಾಗಿ ಉಪ ಖಜಾನೆಗೆ ಬಿಲ್‌ ಕಳಿಸಿ ಪಾಸ್‌ ಮಾಡಿಸಿಕೊಂಡಿದ್ದಾರೆ

ಉಪ ಖಜಾನೆಯಿಂದ ಪಾವತಿಯಾಗಿರುವ ಬಿಲ್‌ಗಳ ಪ್ರಕಾರ ಕನಕನಗೌಡ ಕೆಜಿ ಬ್ಯಾಂಕ್‌ನ ತನ್ನ ಖಾತೆಗೆ ₹7.63 ಲಕ್ಷ ಜಮೆ ಮಾಡಿಸಿಕೊಂಡಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಕಚೇರಿ, ಇಲಾಖೆಗೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಗಳಾದ ಶಿವರುದ್ರಪ್ಪ ಬಂಡಿ (ಮುತ್ತಣ್ಣ) ಅವರ ಎಕ್ಸಿಸ್‌ ಬ್ಯಾಂಕ್‌ ಖಾತೆಗೆ ₹26.75 ಲಕ್ಷ, ಎಸ್‌ಬಿಐ ಖಾತೆಗೆ ₹14.66 ಲಕ್ಷ, ಪೂಜಾ ಬಂಡಿ ಎಂಬುವವರ ಹೆಸರಿನಲ್ಲಿರುವ ಕರ್ನಾಟಕ ಬ್ಯಾಂಕ್‌ ಖಾತೆಗೆ ₹90 ಸಾವಿರ. ಬಸಮ್ಮ ಅಮರೇಶ ಬಂಡಿ ಎಂಬುವವರ ಕೆನರಾ ಬ್ಯಾಂಕ್‌ ಖಾತೆಗೆ ₹ 8.11 ಲಕ್ಷ ಹಾಗೂ ಎಕ್ಸಿಸ್‌ ಬ್ಯಾಂಕಿನಲ್ಲಿ ಬಸಮ್ಮ ಬಂಡಿ ಅವರ ಖಾತೆಗೆ ₹10.85 ಲಕ್ಷ ಸೇರಿ ಒಟ್ಟು ₹70 ಲಕ್ಷ ಸರ್ಕಾರದ ಹಣವನ್ನು ಬೇರೆ ಬೇರೆ ಖಾತೆಗಳಿಗೆ ಜಮೆ ಮಾಡಿಸುವ ಮೂಲಕ ಸರ್ಕಾರಕ್ಕೆ ಮೋಸ ಮಾಡಿದ್ದು ಕಾನೂನು ಕ್ರಮ ಜರುಗಿಸುವಂತೆ ಬಿಇಒ ದೂರಿನಲ್ಲಿ ತಿಳಿಸಿದ್ದಾರೆ.

ಶಿಕ್ಷಣಾಧಿಕಾರಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದ್ದು ಈಗಾಗಲೇ ಇವನನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು ಪೊಲೀಸರು ಕೂಡಾ ತನಿಖೆ ಯನ್ನು ತೀವ್ರಗೊಳಿಸಿದ್ದಾರೆ 

ಸುದ್ದಿ ಸಂತೆ ನ್ಯೂಸ್ ಕೊಪ್ಪಳ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಸಾವು.....ಚಿಕಿತ್ಸೆ ಫಲಿಸದೇ ನಿಧನ.....ಶಿಕ್ಷಕರಿಗೆ ಗಿಫ್ಟ್ ಕೂಪನ್ ದೂರು ದಾಖಲು.....ಕೊಡಗು ಜಿಲ್ಲೆಯಲ್ಲೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..... ನಾಳೆ ಎರಡು ಜಿಲ್ಲೆಗಳಲ್ಲಿ ರಜೆ ಘೋಷಣೆ.....ಅಕ್ಟೋಬರ್ 22 ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.....ಹೂಲಿ ಗ್ರಾಮದಲ್ಲಿ ಆರಂಭಗೊಂಡ ರೊಡ್ಡ ಹನಮಪ್ಪ ದೇವರ ದ್ವಾರಬಾಗಿಲು ಕಾಮಗಾರಿ..... ವಿರೇಶ ಬ್ಯಾಹಟ್ಟಿ ದೇಣಿಗೆ ನೀಡಿದ ಬೆನ್ನಲ್ಲೇ ಆರಂಭಗೊಂಡ ಕಾಮಗಾರಿ..... ಗ್ರಾಮಸ್ಥರಲ್ಲಿ ಹರ್ಷ.....ದಸರಾ ರಜೆ ವಿಸ್ತರಣೆ KSPSTA ದಿಂದ ಮಹತ್ವದ ಸಂದೇಶ.....ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ‘ಬಡ್ತಿ ಪರ್ವ’ ಅಭಿಯಾನ.....ಮಾಹಿತಿ ನೀಡಿದ KSPSTA ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ.....ಭೀಕರ ಅಪಘಾತ SSLC ವಿದ್ಯಾರ್ಥಿ ಸಾವು.....ಅಪ್ರಾಪ್ತ ರಿಗೆ ಬೈಕ್ ಕೊಡುವ ಮುನ್ನ ಇರಲಿ ಎಚ್ಚರಿಕೆ.....ತೀವ್ರಗೊಂಡ BEO ಕಚೇರಿಯಲ್ಲಿನ ಹಣ ದುರ್ಬಳಕೆ ಪ್ರಕರಣದ ತನಿಖೆ.....ಸರ್ಕಾರಿ ನೌಕರರ ಲಂಚ ಪ್ರಕರಣ ತನಿಖೆಗೆ ಪೂರ್ವ ಅನುಮತಿ ಬೇಡ.....