ತಮಿಳುನಾಡು -
ಸರ್ಕಾರಿ ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ತಮಿಳುನಾಡು ಸಚಿವರ ಮಹತ್ವದ ಮಾಹಿತಿ ಹೌದು ಇಂತಹ ದೊಂದು ನಿರ್ಧಾರ ವನ್ನು ತಮಿಳುನಾಡು ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಊಟದ ಮೆನುವಿನಲ್ಲಿ ಚಿಕನ್ ಬಿರಿಯಾನಿ ಸೇರಿ ಸುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಮುಂದಿಟ್ಟಿದೆ.ಮಕ್ಕಳಿಗೆ ಹೆಚ್ಚಿನ ಪ್ರೋಟೀನ್ ಹಾಗೂ ಪೌಷ್ಟಿಕಾಂಶ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಪರಿಗಣಿಸಲಾಗುತ್ತಿದೆ.
ಆದರೆ ಯೋಜನೆಯನ್ನು ತಕ್ಷಣವೇ ಜಾರಿಗೊಳಿಸು ವುದಿಲ್ಲ ಎಂದು ಶಾಲಾ ಶಿಕ್ಷಣ ಸಚಿವ ಎ. ರಾಜಮೋಹನ್ ಸ್ಪಷ್ಟಪಡಿಸಿದ್ದಾರೆ.ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಆಶಯದಂತೆ ಸರ್ಕಾರಿ ಶಾಲಾ ಮಕ್ಕಳಿಗೆ ವಿವಿಧ ಹಾಗೂ ಪೌಷ್ಟಿಕ ಆಹಾರ ನೀಡುವ ಕುರಿತು ವಿಶೇಷ ಸಮಿತಿ ರಚಿಸುವ ಚಿಂತನೆ ನಡೆದಿದೆ.
ಚಿಕನ್ ಬಿರಿಯಾನಿ ನೀಡುವ ಮೊದಲು ಪ್ರಾಯೋಗಿಕವಾಗಿ ಪೈಲಟ್ ಯೋಜನೆ ನಡೆಸಿ, ಆಹಾರ ತಯಾರಿಕೆ, ಸ್ವಚ್ಛತೆ, ಆಹಾರ ಸುರಕ್ಷತೆ ಹಾಗೂ ಪೂರೈಕೆ ವ್ಯವಸ್ಥೆಗಳನ್ನು ಪರಿಶೀಲಿಸಲಾಗುತ್ತದೆ.ಈ ಕುರಿತು ಮಾತನಾಡಿದ ಸಚಿವ ರಾಜಮೋಹನ್, ಜೈಲಿನಲ್ಲಿರುವ ಕೈದಿಗಳಿಗೆ ಚಿಕನ್ ಬಿರಿಯಾನಿ ಸಿಗುತ್ತದೆ. ಹಾಗಿದ್ದರೆ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೂ ಈ ಆಯ್ಕೆ ಸಿಗಬಾರದೇ ಎಂದು ಪ್ರಶ್ನಿಸಿದ್ದಾರೆ ಬೆಳೆಯುತ್ತಿರುವ ಮಕ್ಕಳಿಗೆ ಅಗತ್ಯವಿರುವ ಪ್ರೋಟೀನ್ ಮತ್ತು ಪೌಷ್ಟಿಕಾಂಶವನ್ನು ಒದಗಿಸು ವುದು ಸರ್ಕಾರದ ಉದ್ದೇಶ ಎಂದು ಹೇಳಿದ್ದಾರೆ.
ಚಿಕನ್ ಬಿರಿಯಾನಿ ಸೇವಿಸದ ವಿದ್ಯಾರ್ಥಿಗಳಿಗೆ ಸಸ್ಯಾ ಹಾರಿ ಆಹಾರದ ಆಯ್ಕೆಯನ್ನೂ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಯೋಜನೆ ಜಾರಿ ಯಾದರೆ ವಾರಕ್ಕೆ ಒಂದು ಬಾರಿ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆ ಪರಿಗಣನೆಯಲ್ಲಿದೆ.
ಸದ್ಯ ಯೋಜನೆ ಪ್ರಸ್ತಾವನೆ ಮತ್ತು ಪೈಲಟ್ ಹಂತದಲ್ಲಿದ್ದು, ಅಂತಿಮವಾಗಿ ಯಾವ ರೀತಿಯಲ್ಲಿ ಹಾಗೂ ಯಾವ ಪ್ರಮಾಣದಲ್ಲಿ ಜಾರಿಯಾಗಲಿದೆ ಎಂಬುದು ಮುಂದಿನ ನಿರ್ಧಾರಗಳ ಬಳಿಕ ಸ್ಪಷ್ಟವಾಗಲಿದೆ.
ಸುದ್ದಿ ಸಂತೆ ನ್ಯೂಸ್ ತಮಿಳುನಾಡು......