LIVE TV LocalCrimeNationalInternationalPoliticsEducationTechnologyEntertainmentSportsFeature
International News

ನಾಲ್ಕು ವರ್ಷಗಳ ನಂತರ ತವರಿನತ್ತ ಹೊರಟ 'ಚಿನ್ನಮ್ಮ'

ಹೊಸೂರು -

ನಾಲ್ಕು ವರ್ಷಗಳ ಅಜ್ಞಾತವಾಸ ಮುಗಿಸಿ ತಮಿಳುನಾಡಿಗೆ ಮರಳಿದ ಶಶಿಕಲಾಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಕಳೆದ ಜನವರಿ 4ರಂದು ಬಿಡುಗಡೆಯಾಗಿದ್ದ ಶಶಿಕಲಾ ಅವರು ಜ್ಯೋತಿಷಿಗಳ ಸೂಚನೆಯಂತೆ ದೇವನಹಳ್ಳಿ ಬಳಿಯ ರೆಸಾರ್ಟ್‍ನಲ್ಲಿ ಉಳಿದುಕೊಂಡಿದ್ದರು.
ಇಂದು ಬೆಳಗ್ಗೆ ರೆಸಾರ್ಟ್‍ನಿಂದ ತಮಿಳುನಾಡಿಗೆ ಹೊರಡುತ್ತಿದ್ದಂತೆಯೇ ಅಭಿಮಾನಿಗಳು ಹೂವಿನ ಸುರಿಮಳೆಗರೆದು ಅದ್ಧೂರಿಯಾಗಿ ಸ್ವಾಗತಿಸಿದರು.

ಮಡಿವಾಳ, ಸಿಲ್ಕ್ ಬೋರ್ಡ್ ಮೂಲಕ ಕರ್ನಾಟಕ ಪೊಲೀಸರು ಬಿಗಿಭದ್ರತೆಯಲ್ಲಿ ಶಶಿಕಲಾ ಅವರನ್ನು ಅತ್ತಿಬೆಲೆ ಬಳಿಯ ತಮಿಳುನಾಡಿನ ಗಡಿವರೆಗೂ ಕರೆತಂದರು. ಗಡಿಯಲ್ಲೇ ಕಾದು ನಿಂತಿದ್ದ ಸಾವಿರಾರು ಕಾರ್ಯಕರ್ತರು, ಮಹಿಳೆಯರು ಪೂರ್ಣಕುಂಭ ಹಿಡಿದು ಚಿನ್ನಮ್ಮಗೆ ಭವ್ಯ ಸ್ವಾಗತ ನೀಡಿದರು.

ನಿರೀಕ್ಷೆಗೂ ಮೀರಿ ಜಮಾಯಿಸಿದ್ದ ಜನರು ಚಿನ್ನಮ್ಮ ಪರ ಘೋಷಣೆಗಳನ್ನು ಕೂಗಿ ದಾರಿಯುದ್ದಕ್ಕೂ ಹೂಮಳೆಗರೆದರು.

ಇಡಿ ರಸ್ತೆಯುದ್ದಕ್ಕೂ ಜನರ ಜಮಾವಣೆಯಿಂದ ಇತರ ವಾಹನಗಳ ಸಂಚಾರ ಸ್ತಬ್ಧಗೊಂಡಿತ್ತು. ಜಯಲಲಿತಾ ಅವರ ಮಾದರಿಯಲ್ಲೇ ಪೋಷಾಕು ತೊಟ್ಟು ಗೆಲುವಿನ ನಗೆ ಬೀರುತ್ತಲೇ ಅಭಿಮಾನಿಗಳತ್ತ ಕೈ ಮುಗಿದರು. ಇಡೀ ತಮಿಳುನಾಡಿನಲ್ಲಿ ಈ ದೃಶ್ಯ ನೋಡಲು ರಾಜಕೀಯ ಪಂಡಿತರು ತುದಿಗಾಲ ಮೇಲೆ ನಿಂತಿದ್ದರು. ಶಶಿಕಲಾ ಅವರ ಅನುಯಾಯಿಗಳ ಪ್ರಕಾರ, ರಾಜ್ಯದಲ್ಲಿ ಬಿರುಗಾಳಿ ಎದ್ದಿದೆ ಎಂದು ಹೇಳಿದರೆ, ಅತ್ತ ಆಡಳಿತಾರೂಢ ಎಐಎಡಿಎಂಕೆ ಅಂತರ ಕಾಯ್ದುಕೊಂಡು ಮುಂದಿನ ರಾಜಕೀಯ ತಂತ್ರಗಾರಿಕೆ ಹೆಣೆಯುತ್ತಿದೆ.

ಒಟ್ಟಾರೆ ತಮಿಳುನಾಡಿಗೆ ಶಶಿಕಲಾ ಎಂಟ್ರಿ ಕೊಟ್ಟಿರುವುದು ರಾಜಕೀಯ ಸಂಚಲನ ಸೃಷ್ಟಿಸಿದ್ದು, ಮುಂದೆ ಅವರು ಕಿಂಗ್ ಮೇಕರ್ ಆಗುತ್ತಾರಾ ಅಥವಾ ಸಕ್ರಿಯ ರಾಜಕಾರಣದಲ್ಲಿ ನೇರವಾಗಿಯೇ ಅಖಾಡಕ್ಕೆ ಧುಮುಕುತ್ತಾರಾ ಎಂಬುದು ಭಾರೀ ಕುತೂಹಲ ಕೆರಳಿಸಿದೆ. ಚೆನ್ನೈಗೆ ತೆರಳಿದ ನಂತರ ಜಯಲಲಿತಾ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿ ಎಲ್ಲರ ಕಣ್ಣು ಹುಬ್ಬೇರುವಂತೆ ಮಾಡಿದರು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....