LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ಶಾಲೆ ಮುಚ್ಚಲು ಸಂಚು.....ಮಾಹಿತಿ ಬಿಚ್ಚಿಟ್ಟ ಸಾಹಿತಿಗಳು ಚಿಂತಕರು.....

ಬೆಂಗಳೂರು

ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರವು ಹೊಸ ಸಂಚು ಹೂಡಿದೆ ಎಂದು ಸಾಹಿತಿಗಳ  ಚಿಂತಕರು ಹೇಳಿದ್ದು ಗಂಭೀರವಾದ ಮಾಹಿತಿ ಕುರಿತು ಆರೋಪಿಸಿರುವ ಸಾಹಿತಿಗಳು ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.

ಯಾವುದೇ ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಸರ್ಕಾರದ ಪ್ರತಿನಿಧಿಗಳು ಭರವಸೆ ನೀಡುತ್ತಲೇ ಕಡಿಮೆ ದಾಖಲಾತಿ ಇರುವ ಶಾಲೆಯ ಮಕ್ಕಳನ್ನು ಕೆಪಿಎಸ್ ಶಾಲೆಗಳಿಗೆ ವರ್ಗಾವಣೆ ಮಾಡಲಾಗುವುದು ಎಂದೂ ಹೇಳಿದ್ದಾರೆ.

ಬಡ, ರೈತ, ಕೂಲಿಕಾರರ ಮತ್ತು ಶೋಷಿತ ವರ್ಗಗಳ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವ ಸರ್ಕಾರದ ಜನವಿರೋಧಿ ಧೋರಣೆಯಿದು ಎಂದು ಆರೋಪಿ ಸಿದ್ದಾರೆ.ಕೆಪಿಎಸ್ ಶಾಲೆಗಳ ಆರಂಭವನ್ನು ನೆಪ ಮಾಡಿಕೊಂಡು ನೆರೆಹೊರೆಯ ಶಾಲೆಗಳನ್ನು ದುರ್ಬಲಗೊಳಿಸಬಾರದು ಎಂದು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಎ.ಮುರಿಗೆಪ್ಪ, ಸಾಹಿತಿಗಳಾದ ಕೆ.ಮರುಳಸಿದ್ದಪ್ಪ, ಎಸ್‌.ಜಿ.ಸಿದ್ದರಾಮಯ್ಯ ಸೇರಿ ಹಲವರು ಆಗ್ರಹಿಸಿದ್ದಾರೆ.

ಇನ್ನೂ ಇತ್ತ ಚಿತ್ರದುರ್ಗ ದಲ್ಲಿ ಕಡಿಮೆ ದಾಖಲಾತಿ ನೆಪವೊಡ್ಡಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮಕ್ಕಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ವರ್ಗಾವಣೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಹಾಗೂ ಎಐಡಿಎಸ್‌ಓ ಚಿತ್ರದುರ್ಗ ಜಿಲ್ಲಾ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು, ಯಾವುದೇ ಸರ್ಕಾರಿ ಶಾಲೆ ಯನ್ನು ಮುಚ್ಚುವುದಿಲ್ಲ ಎಂದು ಹೇಳಿಕೆ ನೀಡುತ್ತಲೇ ಕಡಿಮೆ ದಾಖಲಾತಿ ಇರುವ ಶಾಲೆಯ ಮಕ್ಕಳನ್ನು ಕೆಪಿಎಸ್ ಶಾಲೆಗಳಿಗೆ ವರ್ಗಾವಣೆ ಮಾಡಲಾಗು ವುದು ಎಂದು ಹೇಳಿದ್ದಾರೆ ನಾಡಿನ ಜನತೆಯನ್ನು ವಂಚಿಸಿ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚಲು ಕರ್ನಾಟಕ ರಾಜ್ಯ ಸರ್ಕಾರವು ಯಾವ ರೀತಿ ಪಿತೂರಿ ನಡೆಸುತ್ತಿದೆ ಎಂಬುದು ಇದರಿಂದ ಸಾಬೀತಾಗಿದೆ.

ಸರ್ಕಾರದ ಈ ವಿದ್ಯಾರ್ಥಿ- ಬಡಜನ ವಿರೋಧಿ ನಯವಂಚಕ ನಡೆಯನ್ನು ಎಐಡಿಎಸ್‌ಓ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ತೀವ್ರವಾಗಿ ಖಂಡಿಸುತ್ತವೆ.ಯಾವುದೇ ಸರ್ಕಾರಿ ಶಾಲೆಯನ್ನೂ ಮುಚ್ಚುವುದಿಲ್ಲ” ಎಂದು ಹೇಳುತ್ತಲೇ, ಕಡಿಮೆ ದಾಖ ಲಾತಿಯ ನೆಪವೊಡ್ಡಿ ಹಳ್ಳಿಗಾಡಿನ ಶಾಲೆಗಳ ಮಕ್ಕಳನ್ನು ಕೆಪಿಎಸ್ ಶಾಲೆಗಳಿಗೆ ಸ್ಥಳಾಂತರಿಸುವ ಈ ತೀರ್ಮಾನವು ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಗಳನ್ನು ಶಾಶ್ವತವಾಗಿ ಮುಚ್ಚುವ ಹುನ್ನಾರವಾಗಿದೆ.

ಇಲ್ಲಿ ಕಡಿಮೆ ದಾಖಲಾತಿಗೆ ಯಾವುದೇ ನಿರ್ದಿಷ್ಟ ಮಾನದಂಡವಿಲ್ಲ. ಇದು ಬಡ, ರೈತ, ಕೂಲಿಕಾರರ ಮತ್ತು ಶೋಷಿತ ವರ್ಗಗಳ ಮಕ್ಕಳಿಗೆ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವ ಸರ್ಕಾರದ ಜನವಿರೋಧಿ ಧೋರಣೆಯಾಗಿದೆ.ಪ್ರತಿಯೊಂದು ಹಳ್ಳಿಯಲ್ಲೂ ಸರ್ಕಾರಿ ಶಾಲೆ ಇರಬೇಕೆಂಬುದು ಸಂವಿಧಾನಬದ್ಧ ಹಕ್ಕು. ಮಕ್ಕಳನ್ನು ದೂರದ ಶಾಲೆಗಳಿಗೆ ಸಾಗಿಸುವ ಬದಲು, ಕಡಿಮೆ ದಾಖಲಾತಿ ಇರುವ ಶಾಲೆಗಳಿಗೆ ಮೂಲಸೌಕರ್ಯ, ಅಗತ್ಯ ಶಿಕ್ಷಕರು ಹಾಗೂ ಗುಣ ಮಟ್ಟದ ಶಿಕ್ಷಣ ಒದಗಿಸಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ಹೊಣೆಗಾರಿಕೆಯನ್ನು ಸರ್ಕಾರ ಹೊರಬೇಕು

ಮಕ್ಕಳಿಗೆ ಬಸ್ ಸೌಲಭ್ಯ ಕಲ್ಪಿಸುತ್ತೇವೆ ಎಂಬ ಆಮಿಷ ವೊಡ್ಡಿ ಶಾಲೆಗಳನ್ನು ಮುಚ್ಚುವುದು ಸರ್ಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂತ್ರವಾಗಿದೆ. ಇಂದಿಗೂ ಎಷ್ಟೋ ಹಳ್ಳಿಗಳಿಗೆ ಬಸ್ ಸೌಕರ್ಯವಿಲ್ಲ. ಸಾರಿಗೆ ಸಮಸ್ಯೆಯಿಂದಾಗಿ ಗ್ರಾಮೀಣ ಭಾಗದ, ಅದರಲ್ಲೂ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತ ರಾಗುವ ಅಪಾಯವಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲೇ ಕೆಪಿಎಸ್ ಶಾಲೆಗಳಿಗೆ ತೆರಳುತ್ತಿರುವ 25,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸರ್ಕಾರ ಬಸ್ ಸೌಕರ್ಯ ಒದಗಿಸಿಲ್ಲ.

ಕೆಪಿಎಸ್ ಶಾಲೆಗಳ ಆರಂಭವನ್ನು ನೆಪ ಮಾಡಿಕೊಂಡು ನೆರೆಹೊರೆಯ ಶಾಲೆಗಳನ್ನು ದುರ್ಬಲಗೊಳಿಸಬಾರದು. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೂ ಸುಸಜ್ಜಿತ ಕಟ್ಟಡ, ಲ್ಯಾಬ್, ಗ್ರಂಥಾಲಯ ಹಾಗೂ ಖಾಲಿ ಇರುವ ಬೋಧಕ ಹುದ್ದೆಗಳ ನೇಮಕಾತಿ ಮಾಡಿ ಸಾರ್ವಜನಿಕ ಶಿಕ್ಷಣವನ್ನು ಉಳಿಸಿ ಬೆಳೆಸಬೇಕು. ಸರ್ಕಾರ ತಕ್ಷಣವೇ ಈ ಅವೈಜ್ಞಾನಿಕ ತೀರ್ಮಾನವನ್ನು ಕೈಬಿಡಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರನ್ನು ಒಗ್ಗೂಡಿಸಿ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟವನ್ನು ಪುನರ್ ಆರಂಭಿ ಸಲಾಗುವುದು ಸಮಿತಿ ಎಚ್ಚರಿಕೆ ನೀಡಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯುವ ಉದ್ಯಮಿಯಾಗಿ ಬೆಳೆಯುತ್ತಿರುವ ಸೂರಜ್ ಮಿಶ್ರಾ.....ತಂದೆಯ ಮಾರ್ಗದರ್ಶನದಲ್ಲಿ Big Mishraಗೆ ಹೊಸ ವೇಗ.....ಶಿಕ್ಷಕ ಉಮಾಶಂಕರ್ ನಿಧನ.....ಸರ್ಕಾರಿ ಶಾಲೆ ಮುಚ್ಚಲು ಸಂಚು.....ಮಾಹಿತಿ ಬಿಚ್ಚಿಟ್ಟ ಸಾಹಿತಿಗಳು ಚಿಂತಕರು.....ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು.....ಲೋಕಾಯುಕ್ತರಿಂದ ದೂರು.....ಸರ್ಕಾರಿ ಶಾಲೆಯಲ್ಲಿ ಸ್ಪೋಟ ಮಹಿಳೆ ಸಾವು.....ಬೆಚ್ಚಿಬಿದ್ದ ಶಾಲೆಯಲ್ಲಿನ ವಿದ್ಯಾರ್ಥಿ ಗಳು ಶಿಕ್ಷಕರು.....ಸರ್ಕಾರಿ ಶಾಲೆ ಕಾಂಪೌಂಡ್ ಕುಸಿತ.....ತಪ್ಪಿತು ದೊಡ್ಡ ಅನಾಹುತ.....ರಾಜ್ಯದಲ್ಲಿ ಮಾರಾಟಕ್ಕಿವೆ 200 ಕ್ಕೂ ಹೆಚ್ಚು ಶಾಲೆಗಳು.....ಬೆಳಕಿಗೆ ಬಂತು ಸ್ಪೋಟಕ ವಿಚಾರ.....ಬೆಳ್ಳಂ ಬೆಳಿಗ್ಗೆ SSLC ವಿದ್ಯಾರ್ಥಿ ಆತ್ಮಹತ್ಯೆ..... ಓದು ಅಂತಾ ಹೇಳಿದ್ದು ತಪ್ಪಾಯಿತಾ‌.....ಶಾಲಾ ಕಾಲೇಜುಗಳಿಗೆ ರಜೆಗಿಂತ ಬಿಸಿಲಿನ ಬಿಸಿ ಹೆಚ್ಚು.....ಕೆಲವೊಂದಿಷ್ಟು ಮುನ್ನೆಚ್ಚರಿಕೆ ನೀಡಿದ ತಜ್ಞರು.....ರಾಜಕೀಯಕ್ಕೆ IAS ಅಧಿಕಾರಿ.....ರಾಜೀನಾಮೆ ಬೆನ್ನಲ್ಲೇ ಮಹತ್ವದ ಘೋಷಣೆ ‌.....