ಹನುಮನಹಳ್ಳಿ -
ಕೆ.ಪಿ.ಎಸ್. ಹನುಮನಹಳ್ಳಿ ಶಾಲೆಯ ಶಿಕ್ಷಕ ಕೆ.ಎಸ್. ಉಮಾಶಂಕರ್ ನಿಧನರಾಗಿದ್ದಾರೆ ಹೌದು
ಹನುಮನಹಳ್ಳಿ ಗ್ರಾಮದ ಕೆ.ಪಿ.ಎಸ್. ಹನುಮನಹಳ್ಳಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ಎಸ್. ಉಮಾಶಂಕರ್ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ಉಮಾಶಂಕರ್ ಅವರ ನಿಧನದಿಂದ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಆತ್ಮೀಯರಲ್ಲಿ ದುಃಖದ ಛಾಯೆ ಆವರಿಸಿದೆ. ಅವರ ಅಗಲಿಕೆಗೆ ಸಹೋದ್ಯೋಗಿಗಳು ಹಾಗೂ ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ಅಕ್ಟೋಬರ್ 1ರ ಗುರುವಾರ ತವಕದಹಳ್ಳಿಯಲ್ಲಿ ನೆರವೇರಿಸಲಾಗು ವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನಿಧನರಾದ ಕೆ.ಎಸ್. ಉಮಾಶಂಕರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಬಂಧು-ಬಳಗ ಹಾಗೂ ಹಿತೈಷಿಗಳು ಪ್ರಾರ್ಥಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್