LIVE TV LocalCrimeNationalInternationalPoliticsEducationTechnologyEntertainmentSportsFeature
State News

ಬೆಳ್ಳಂ ಬೆಳಿಗ್ಗೆ SSLC ವಿದ್ಯಾರ್ಥಿ ಆತ್ಮಹತ್ಯೆ..... ಓದು ಅಂತಾ ಹೇಳಿದ್ದು ತಪ್ಪಾಯಿತಾ‌.....

ಹಾವೇರಿ -

ಮಕ್ಕಳ ಕೈಯಲ್ಲಿ ಮೊಬೈಲ್ ಇದ್ದರೆ ಸಾಕು ಅವರಿಗೆ ಬೇರೇನೂ ಬೇಕಾಗುವುದಿಲ್ಲ ಊಟ-ಆಟ ಮಾತ್ರ ವಲ್ಲ ಓದುವುದನ್ನೂ ಮರೆತು ಬಿಡುತ್ತಾರೆ ಹೀಗೆ ಸದಾ ಕಾಲ ಮೊಬೈಲ್ ಫೋನ್ ಹಿಡಿದುಕೊಂಡು ಕೂರುತ್ತಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗೆ ಪೋಷಕರು ಬೈದು ಬುದ್ಧಿ ಹೇಳಿದ್ದಾರೆ.

ಇದನ್ನೇ ಮನಸ್ಸಿಗೆ ಹಚ್ಚಿಕೊಂಡ ಆತ ದುಡುಕಿನ ನಿರ್ಧಾರ ಮಾಡಿದ್ದಾನೆ.ಮೊಬೈಲ್ ಫೋನ್ ನಲ್ಲಿ ಕಾಲ ಕಳೆಯುವುದನ್ನು ಬಿಟ್ಟು ಸಮಯ ವ್ಯರ್ಥ ಮಾಡದೇ ಓದಿನತ್ತ ಗಮನ ಕೊಡು. ಪರೀಕ್ಷೆಗಳು ಸಮೀಪು ಸುತ್ತಿವೆ ಚೆನ್ನಾಗಿ ಓದು ಎಂದು ಪೋಷಕರು ಮಗನಿಗೆ ಬುದ್ಧಿವಾದ ಹೇಳಿದ್ದಾರೆ ಇದರಿಂದ ಮನನೊಂದ ವಿದ್ಯಾರ್ಥಿ ಬೇರೆ ಯೋಚನೆ ಮಾಡದೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಲ್ಲೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. 16 ವರ್ಷದ ಹರ್ಷ ಮೋರೆ ಮೃತ ಬಾಲಕ. ಎಸ್.ಎಸ್.ಎಲ್.ಸಿ ಓದುತ್ತಿದ್ದ. ಪರೀಕ್ಷೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ಮಗನಿಗೆ ಮೊಬೈಲ್ ಬಿಟ್ಟು ವಿದ್ಯಾ ಭ್ಯಾಸದ ಕಡೆ ಗಮನ ಕೊಡು ಎಂದು ಬೈದಿದ್ದಾರೆ. ಇಷ್ಟಕ್ಕೆ ಮನನೊಂದ ಹರ್ಷ ಮನೆಯ ಕೋಣೆ ಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮಗ ಎಷ್ಟು ಹೊತ್ತಾದರೂ ರೂಮ್ ಬಾಗಿಲು ತೆಗೆಯದಿದ್ದಾಗ ಮಗನನ್ನೆ ಕರೆದಿದ್ದಾರೆ ಆದರೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಇದರಿಂದ ಆತಂಕಕ್ಕೊಳಗಾದ ಪೋಷರು ಬಾಗಿಲು ತೆರೆದು ಒಳ ನುಗ್ಗಿದಾಗ ಮಗ ಆತ್ಮಹತ್ಯೆಗೆ ಶರಣಾ ಗಿರುವುದು ಗೊತ್ತಾಗಿದೆ. ಮಗನನ್ನು ಕಳೆದು ಕೊಂಡಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಘಟನಾ ಸ್ಥಳಕ್ಕೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹಾವೇರಿ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯುವ ಉದ್ಯಮಿಯಾಗಿ ಬೆಳೆಯುತ್ತಿರುವ ಸೂರಜ್ ಮಿಶ್ರಾ.....ತಂದೆಯ ಮಾರ್ಗದರ್ಶನದಲ್ಲಿ Big Mishraಗೆ ಹೊಸ ವೇಗ.....ಶಿಕ್ಷಕ ಉಮಾಶಂಕರ್ ನಿಧನ.....ಸರ್ಕಾರಿ ಶಾಲೆ ಮುಚ್ಚಲು ಸಂಚು.....ಮಾಹಿತಿ ಬಿಚ್ಚಿಟ್ಟ ಸಾಹಿತಿಗಳು ಚಿಂತಕರು.....ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು.....ಲೋಕಾಯುಕ್ತರಿಂದ ದೂರು.....ಸರ್ಕಾರಿ ಶಾಲೆಯಲ್ಲಿ ಸ್ಪೋಟ ಮಹಿಳೆ ಸಾವು.....ಬೆಚ್ಚಿಬಿದ್ದ ಶಾಲೆಯಲ್ಲಿನ ವಿದ್ಯಾರ್ಥಿ ಗಳು ಶಿಕ್ಷಕರು.....ಸರ್ಕಾರಿ ಶಾಲೆ ಕಾಂಪೌಂಡ್ ಕುಸಿತ.....ತಪ್ಪಿತು ದೊಡ್ಡ ಅನಾಹುತ.....ರಾಜ್ಯದಲ್ಲಿ ಮಾರಾಟಕ್ಕಿವೆ 200 ಕ್ಕೂ ಹೆಚ್ಚು ಶಾಲೆಗಳು.....ಬೆಳಕಿಗೆ ಬಂತು ಸ್ಪೋಟಕ ವಿಚಾರ.....ಬೆಳ್ಳಂ ಬೆಳಿಗ್ಗೆ SSLC ವಿದ್ಯಾರ್ಥಿ ಆತ್ಮಹತ್ಯೆ..... ಓದು ಅಂತಾ ಹೇಳಿದ್ದು ತಪ್ಪಾಯಿತಾ‌.....ಶಾಲಾ ಕಾಲೇಜುಗಳಿಗೆ ರಜೆಗಿಂತ ಬಿಸಿಲಿನ ಬಿಸಿ ಹೆಚ್ಚು.....ಕೆಲವೊಂದಿಷ್ಟು ಮುನ್ನೆಚ್ಚರಿಕೆ ನೀಡಿದ ತಜ್ಞರು.....ರಾಜಕೀಯಕ್ಕೆ IAS ಅಧಿಕಾರಿ.....ರಾಜೀನಾಮೆ ಬೆನ್ನಲ್ಲೇ ಮಹತ್ವದ ಘೋಷಣೆ ‌.....