ಶ್ರೀರಂಗಪಟ್ಟಣ -
ಸರ್ಕಾರಿ ಶಾಲಾ ಕಾಂಪೌಂಡ್ ವೊಂದು ಕುಸಿದು ಬಿದ್ದ ಘಟನೆ ಶ್ರೀರಂಗಪಟ್ಟಣ ದಲ್ಲಿ ನಡೆದಿದೆ ಧಾರಾಕಾರ ವಾಗಿ ಸುರಿದ ಮಳೆಗೆ ತಾಲ್ಲೂಕಿನ ಪೀಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಕುಸಿದಿದೆ.ಶಾಲೆಯ ಎಡ ಪಾರ್ಶ್ವದಲ್ಲಿ ಸುಮಾರು 35 ಅಡಿ ಉದ್ದದಷ್ಟು ಕಾಪೌಂಡ್ ಕುಸಿದು ಬಿದ್ದಿದೆ. ಎರಡು ದಶಕಗಳ ಹಿಂದೆ ನಿರ್ಮಿಸಿದ್ದ ಕಾಂಪೌಂಡ್ ಸಂಪೂರ್ಣ ಕುಸಿದಿದ್ದು, ಅರ್ಧದಷ್ಟು ಪಕ್ಕದ ಚರಂಡಿಗೆ ಬಿದ್ದಿದೆ.
'ಈ ಶಾಲೆಯ ಕಾಂಪೌಂಡ್ ಹಲವು ದಿನಗಳ ಹಿಂದೆಯೇ ಶಿಥಿಲವಾಗಿತ್ತು ಅದನ್ನು ತೆರವು ಮಾಡದೇ ಬಿಟ್ಟಿದ್ದರಿಂದ ಸಾಧಾರಣ ಮಳೆಗೆ ಕುಸಿದು ಬಿದ್ದಿದೆ. ಶಾಲೆ ನಡೆಯುತ್ತಿದ್ದ ಸಂದರ್ಭದಲ್ಲಿ ಕುಸಿದಿದ್ದರೆ ದೊಡ್ಡ ಅನಾಹುತವೇ ಘಟಿಸುತ್ತಿತ್ತು' ಎಂದು ಗ್ರಾಮದವರೇ ಆದ ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ಎಸ್. ರಮೇಶ್ ಕಳವಳ ವ್ಯಕ್ತಪಡಿಸಿದ್ದಾರೆ.
ವಿಷಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್. ಚಂದ್ರಶೇಖರ್ ಅವರ ಗಮನಕ್ಕೆ ತರಲಾಗಿದೆ. ಕುಸಿದಿರುವ ಕಾಂಪೌಂಡ್ ಅನ್ನು ಪುನರ್ ನಿರ್ಮಿಸುವಂತೆ ಕೊಡಿಯಾಲ ಗ್ರಾ.ಪಂ. ಕಚೇರಿಗೆ ಮನವಿ ಸಲ್ಲಿಸಲಾಗಿದೆ' ಎಂದು ಶಾಲೆ ಶಿಕ್ಷಕ ಟಿ.ಪಿ. ಕುಮಾರ್ ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಶ್ರೀರಂಗಪಟ್ಟಣ.....