LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಾಲೆಗಳಲ್ಲಿ ಆರಂಭಗೊಂಡ ಡೆಸ್ಕ್‌ ಅಭಿಯಾನ - ಅಗತ್ಯ ಶಾಲೆಗಳಿಗೆ ವಿತರಣೆ ಖುಷಿಯಾದ ವಿದ್ಯಾರ್ಥಿಗಳು.....ಇಲಾಖೆಗೆ ಉಳಿತಾಯವಾಯಿತು ಕೋಟಿ ಕೋಟಿ ರೂಪಾಯಿ.....

ಬೆಳಗಾವಿ -

ಶಾಲೆಗಳಲ್ಲಿ ಆರಂಭಗೊಂಡ ಶಾಲೆಗಳಲ್ಲಿ 'ಡೆಸ್ಕ್‌ ಅಭಿಯಾನ' ಅಗತ್ಯ ಶಾಲೆಗಳಿಗೆ ವಿತರಣೆ ಹೌದು  ಇಂತಹದೊಂದು ಹೊಸ ಕಾರ್ಯಕ್ರಮ ವೊಂದು ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಆರಂಭವಾಗಿದೆ ಬಳಕೆಯಾಗದೇ ಇರುವ ಹೆಚ್ಚುವರಿ ಡೆಸ್ಕ್‌ಗಳನ್ನು ಅಗತ್ಯವಿರುವ ಶಾಲೆಗಳಿಗೆ ನೀಡಿ, ಸದ್ಬಳಕೆ ಮಾಡುವ 'ಡೆಸ್ಕ್ ಅಭಿಯಾನ' ಆರಂಭಗೊಂಡಿದೆ.

ಡೆಸ್ಕ್‌ಗಳ ಕೊರತೆ ನೀಗಿಸಲು ಜಿಲ್ಲಾ ಪಂಚಾಯಿತಿ ಮತ್ತು ಶಾಲಾ ಶಿಕ್ಷಣ ಇಲಾಖೆಯು ಆರಂಭಿಸಿರುವ ಈ ಅಭಿಯಾನವು ಕೆಲ ಶಾಲೆಗಳಲ್ಲಿ ಡೆಸ್ಕ್‌ಗಳ ಕೊರತೆ ನೀಗಿಸಿದೆ.ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಸಮೀಕ್ಷೆ ನಡೆಸಿ, ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 1,407, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 6,080 ಸೇರಿ 7,487 ಹೆಚ್ಚುವರಿ ಡೆಸ್ಕ್‌ಗಳಿವೆ ಎಂದು ಹೇಳಿದ್ದರು

'ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಹೆಚ್ಚುವರಿ ಆಗಿದ್ದ 1,407 ಡೆಸ್ಕ್ ಪೈಕಿ 1,007 ಡೆಸ್ಕ್‌ಗಳನ್ನು ಅಗತ್ಯವಿರುವ ಶಾಲೆಗಳಿಗೆ ಸ್ಥಳಾಂತರಿಸಿದ್ದು ಉಳಿದ ಡೆಸ್ಕ್‌ಗಳನ್ನು ಹಂತಹಂತವಾಗಿ ಸ್ಥಳಾಂತರಿಸುತ್ತೇವೆ ಎಂದು ಶಾಲಾ ಶಿಕ್ಷಣ ಇಲಾಖೆಯ ಬೆಳಗಾವಿ ಉಪನಿರ್ದೇಶಕಿ ಲೀಲಾವತಿ ಹಿರೇಮಠ ಹೇಳಿದ್ದಾರೆ

ಮೊದಲ ಹಂತದಲ್ಲಿ ಅಗತ್ಯ ಶಾಲೆಗಳಿಗೆ ಸ್ಥಳಾಂತರಿಸು ತ್ತೇವೆ. ಇದರೊಂದಿಗೆ ಪ್ರೌಢಶಾಲೆಗಳಲ್ಲಿ ಹೊಸ ಡೆಸ್ಕ್‌ಗಳ ಖರೀದಿಗೂ ಟೆಂಡರ್‌ ಕರೆಯಲಾಗಿದೆ ಮುಂದಿನ ದಿನ ಗಳಲ್ಲಿ ಡೆಸ್ಕ್‌ಗಳ ಕೊರತೆ ತಗ್ಗಲಿದೆ' ಎಂದು ಶಾಲಾ ಶಿಕ್ಷಣ ಇಲಾಖೆಯ ಚಿಕ್ಕೋಡಿ ಪ್ರಭಾರ ಉಪನಿರ್ದೇಶಕ ಬಿ.ಎ.ಮೇಕಲಮರಡಿ ಹೇಳಿದರು.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 1,477 ಸರ್ಕಾರಿ ಶಾಲೆಗಳಿದ್ದು, 1.86 ಲಕ್ಷ ವಿದ್ಯಾರ್ಥಿಗಳಿದ್ದಾರೆ. 36,507 ಡೆಸ್ಕ್‌ ಲಭ್ಯ ಇವೆ. ಇವುಗಳನ್ನು ಹೊರತುಪಡಿಸಿ, 30,229 ಡೆಸ್ಕ್‌ಗಳ ಅಗತ್ಯವಿದೆ. ಚಿಕ್ಕೋಡಿಯಲ್ಲಿ 1,595 ಸರ್ಕಾರಿ ಶಾಲೆಗಳಿದ್ದು, 1.97 ಲಕ್ಷ ವಿದ್ಯಾರ್ಥಿ ಗಳು ಇದ್ದಾರೆ. 37,823 ಡೆಸ್ಕ್‌ ಲಭ್ಯವಿವೆ. 24 ಸಾವಿರ ಡೆಸ್ಕ್‌ಗಳ ಅಗತ್ಯವಿದೆ.

ಜಿಲ್ಲೆಯಲ್ಲಿ ಹೆಚ್ಚುವರಿ ಮತ್ತು ಕಡಿಮೆ ಡೆಸ್ಕ್‌ಗಳಿರುವ ಶಾಲೆಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ.ಹೆಚ್ಚುವರಿ ಡೆಸ್ಕ್‌ಗಳಿದ್ದರೆ, ಶೇ 20ರಷ್ಟು ಹೆಚ್ಚು ಉಳಿಸಿಕೊಂಡು ಉಳಿದವು ಸ್ಥಳಾಂತರಿಸಲಾಗುತ್ತದೆ.ವಿದ್ಯಾರ್ಥಿಗಳ ಕೊರತೆಯಿಂದ ಕೆಲ ಶಾಲೆಗಳಲ್ಲಿ ಕೆಲವಷ್ಟು ಡೆಸ್ಕ್‌ಗಳು ಬಳಕೆ ಆಗುತ್ತಿರಲಿಲ್ಲ. ಅವು ಶಾಲೆಯ ಜಾಗ ಆಕ್ರಮಿಸಿ ಕೊಂಡಿದ್ದವು.ಇನ್ನೂ ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಡೆಸ್ಕ್‌ಗಳ ಕೊರತೆ ಇತ್ತು.

ಅದಕ್ಕೆ ಪರಿಹಾರ ಕಂಡುಕೊಳ್ಳಲು ಡೆಸ್ಕ್‌ ಅಭಿಯಾನ ಆರಂಭಿಸಿದೆವು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್‌ ಶಿಂಧೆ ಹೇಳಿದರು

ಜಿಲ್ಲಾ ಪಂಚಾಯಿತಿ ಬೆಳಗಾವಿ7 ಸಾವಿರ ಡೆಸ್ಕ್‌ ಹೊಸದಾಗಿ ಖರೀದಿಸಿದ್ದರೆ ₹4 ಕೋಟಿ ವೆಚ್ಚವಾ ಗುತ್ತಿತ್ತು. ಈ ಅಭಿಯಾನದಿಂದ ಅಷ್ಟು ಹಣ ಉಳಿದಿದೆ  ಸಮಗ್ರ ಶಿಕ್ಷಣ ಯೋಜನೆ ಡೆಸ್ಕ್‌ಗಳನ್ನು ಯಥಾರೀತಿ ಸ್ಥಳಾಂತರಿಸುವುದಿಲ್ಲ ಗ್ರಾಮ ಪಂಚಾಯಿತಿ ನೆರವಿನಿಂದ ದುರಸ್ತಿ ಮಾಡಿ ಬಣ್ಣ ಬಳಿದು ಕಳುಹಿಸುತ್ತಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಳಗಾವಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....