LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಧಾರವಾಡ ಜಿಲ್ಲಾಡಳಿತದ ವಿನೂ ತನ ಪ್ರಯೋಗ - ಮೆಚ್ಚುಗೆಗೆ ಪಾತ್ರ ವಾಯಿತು ಈ ಒಂದು ಬ್ಯಾಂಡ್ ಪ್ರಯೋಗ.....

ಧಾರವಾಡ -

ಕೊರೊನಾ ಮಹಾಮಾರಿಯ ನಡುವೆ ಮದುವೆ ಸೇರಿದಂತೆ ಬೇರೆ ಬೇರೆ ಕಾರ್ಯಕ್ರಮ ಮಾಡುತ್ತಿ ರುವ ಸಾರ್ವಜನಿಕರಿಗೆ ಹೊಸದೊಂದು ನಿಯಮ ವನ್ನು ಧಾರವಾಡ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಜಾರಿಗೆ ತಂದಿದ್ದಾರೆ‌‌‌.ಹೌದು ಒಂದು ಕಡೆ ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಇದನ್ನು ಜಿಲ್ಲೆಯಲ್ಲಿ ನಿಯಂತ್ರಣ ಮಾಡಲು ಧಾರ ವಾಡ ಜಿಲ್ಲಾಧಿಕಾರಿ ಹೊಸದೊಂದು ಪ್ಲಾನ್ ಮಾಡಿ ದ್ದಾರೆ.ಹೌದು ಮದುವೆ ಮನೆಗೆ ಬರಬೇಕಾದರೆ ಕೈಗೆ ಬ್ಯಾಂಡ್ ಇರಲೇಬೇಕು.

ಕೈಗೆ ಬ್ಯಾಂಡ್ ಹಾಕಿಕೊಳ್ಳಬೇಕು ಇಲ್ಲದೇ ಹೋದ್ರೆ ದಂಡ ಫಿಕ್ಸ್.ಅರೇ ಮದುವೆಗೂ ಬ್ಯಾಂಡ್ ಗೂ ಏನು ಸಂಬಂಧ ಅಂತಿರಾ.ಹೌದು ಕೊರೋನಾ ಪ್ರಕರಣ ಗಳು ಹೆಚ್ಚಾಗುತ್ತಿರೊ ಹಿನ್ನೆಲೆ ಸರ್ಕಾರದ ಹೊಸ ಮಾರ್ಗಸೂಚಿ ಅನ್ವಯ ಮದುವೆಯಲ್ಲಿ ವಿಶೇಷ ಸುರಕ್ಷಾ ಕ್ರಮ ಕೈಗೊಂಡಿದ್ದು,ಮುಖ್ಯವಾಗಿ ಮದುವೆ ಯಲ್ಲಿ ಪಾಲ್ಗೊಳ್ಳುವ 50 ಜನರ ಕೈಗಳಿಗೆ ಬ್ಯಾಂಡ್ ಧರಿಸಲು ಧಾರವಾಡ ಜಿಲ್ಲಾಡಳಿತ ವಿನೂತನ ಕ್ರಮ ಜಾರಿಗೊಳಿಸಿದೆ.

ಈ ಕುರಿತು ಪ್ರಕಟಣೆ ನೀಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಧಾರವಾಡ ಜಿಲ್ಲೆಯಲ್ಲಿ ಮಹಾನಗರ ಪಾಲಿಕೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮೇ.4 ರವರೆಗೆ ಜರುಗುವ ಮದುವೆಗಳಿಗೆ ಅನುಮತಿ ಪಡೆ ಯುವುದು ಕಡ್ಡಾಯ ಮಾಡಲಾಗಿದೆ.ಮದುವೆಗಳ ಲ್ಲಿ ಪಾಲ್ಗೊಳ್ಳುವ 50 ಜನರ ಕೈಗಳಿಗೆ ಬ್ಯಾಂಡ್ ಧರಿಸಲು ಆಯೋಜಕರಿಗೆ ಅನುಮತಿ ನೀಡಲು ತಿಳಿಸಿದೆ.

ಈ ನಿಯಮ ಪಾಲನೆ ಹಾಗೂ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಿಶೇಷ ಕ್ರಮ ಕೈಗೊ ಳ್ಳಲಾಗಿದೆ.ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಲ ಯ ಸಹಾಯಕ ಆಯುಕ್ತರು ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಉಳಿದ ಎಲ್ಲ ತಾಲೂಕು ವ್ಯಾಪ್ತಿ ಯಲ್ಲಿ ತಹಶೀಲ್ದಾರರು ಮದುವೆಗಳ ಆಯೋಜನೆಗೆ ಅನುಮತಿ ನೀಡಲು ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಬ್ಯಾಂಡ್‌ಗಳು ಜಲ ನಿರೋಧಕವಾಗಿವೆ.ಕೈಗಳಿಗೆ ಧರಿಸಿದಾಗ ಮಡಿಕೆ ಬೀಳುವುದಿಲ್ಲ.ಒಬ್ಬ ವ್ಯಕ್ತಿ ಒಂದು ಸಲ ಧರಿಸಿದರೆ ಅದನ್ನು ತೆಗೆದು ಮರುಬಳಕೆ ಮಾಡಲು,ಮತ್ತೊಬ್ಬರಿಗೆ ಬ್ಯಾಂಡ್ ವರ್ಗಾಯಿಸಲು ಬರುವುದಿಲ್ಲ.ಒಂದು ವೇಳೆ ವರ್ಗಾಯಿಸಿದರೆ ಅದು ತುಂಡಾಗುತ್ತದೆ.ಇದರಿಂದ ಕೇವಲ 50 ಜನ ಮದುವೆ ಗಳಲ್ಲಿ ಭಾಗವಹಿಸುವುದರ ಮೇಲೆ ನಿಗಾವಹಿಸಲು ಸಾಧ್ಯವಾಗುತ್ತದೆ.

ಈ ಬ್ಯಾಂಡ್ ಧರಿಸಿದ ಮದುವೆಯು ಅನುಮತಿ ಪಡೆದಿರುವುದನ್ನು ಗುರುತಿಸುತ್ತದೆ. ಮಾರ್ಗಸೂಚಿ ಯಲ್ಲಿ ತಿಳಿಸಿದ ಸಂಖ್ಯೆಗಿಂತ ಹೆಚ್ಚು ಜನ ಕಂಡುಬಂ ದಲ್ಲಿ ಮದುವೆ ಆಯೋಜಕರ ಹಾಗೂ ಮದುವೆ ಮಂಟಪದ ಮಾಲೀಕರ ಮೇಲೆ ಎಫ್‌ಐಆರ್ ದಾಖ ಲಿಸಿ, ಕಲ್ಯಾಣ ಮಂಟಪ ಸೀಜ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......