LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಮೈಸೂರಿಗೆ ಬಚ್ಚಾಖಾನ್ ನನ್ನು ಕರೆದೊಯ್ದ ಧಾರವಾಡ ಉಪನಗರ ಪೊಲೀಸರು

ಧಾರವಾಡ -

ಭೂಗತ ಪಾತಕಿ ಬಚ್ಚಾಖಾನ್ ನನ್ನು ಧಾರವಾಡದ ಉಪನಗರ ಪೊಲೀಸರು ಮೈಸೂರಿಗೆ ಕರೆದುಕೊಂಡು ಹೋಗಿದ್ದಾರೆ.

ಈಗಾಗಲೇ ಇವರನ್ನು ನ್ಯಾಯಾಲಯಕ್ಕೆ ಹಾಜರು ಮಾಡಿ ವಿಚಾರಣೆಗೆ ನಾಲ್ಕು ದಿನ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ‌. ಇದಕ್ಕೂ ಮುಂಚೆ ಮೈಸೂರು ಕಾರಾಗೃಹದಲ್ಲಿದ್ದ ಬಚ್ಚಾಖಾನ್ ನನ್ನು ಧಾರವಾಡ ಉಪನಗರ ಠಾಣೆ ಇನಸ್ಪೇಕ್ಟರ್ ಪ್ರಮೋದ ಯಲಿಗಾರ ನೇತ್ರತ್ವದಲ್ಲಿ ಕಾರ್ಯಾಚರಣೆ ಮಾಡಿದ ಪೊಲೀಸರು ವಶಕ್ಕೆ ತಗೆದುಕೊಂಡಿದ್ದಾರೆ.

ಮೈಸೂರು ಜೈಲಿನಲ್ಲಿದ್ದುಕೊಂಡೇ ಧಾರವಾಡದ ಅನೇಕರಿಗೆ ಬೆದರಿಕೆ ಹಾಕುತ್ತಿದ್ದನಂತೆ. ತನ್ನ ಬಂಟರ ಮೂಲಕ ಧಮ್ಕಿ ಹಾಕಿಸಿ ಹಫ್ತಾ ವಸೂಲಿ ಗಿಳಿದಿದ್ದನಂತೆ ಬಚ್ಚಖಾನ್, ಫ್ರೂಟ್ ಇರ್ಫಾನ್ ಸಾವಿನ ಬಳಿಕ ಹುಬ್ಬಳ್ಳಿ-ಧಾರವಾಡ ಮೇಲೆ ಹಿಡಿತ ಸಾಧಿಸಲು ಮುಂದಾಗಿರೋ ಬಚ್ಚಾಖಾನ್ ನನ್ನು ಉಪನಗರ ಠಾಣೆ ವ್ಯಾಪ್ತಿಯಲ್ಲಿ ಅನೇಕ ಉದ್ಯಮಿಗಳಿಗೆ ಬೆದರಿಕೆ ಪೆಟ್ರೋಲ್ ಬಂಕ್ ಮಾಲೀಕರು ಸೇರಿ ಅನೇಕರಿಗೆ ಬಚ್ಚಾಖಾನ್ ಬಂಟರಿಂದ ಧಮ್ಕಿ ನಡೆದಿದ್ದಂತೆ. ಈ ಹಿನ್ನೆಲೆ ಬಚ್ಚಾಖಾನ್ ವಶಕ್ಕೆ ಪಡೆದ ಉಪನಗರ ಠಾಣೆ ಪೊಲೀಸರು ಬಚ್ಚಾಖಾನ್‌ನ ಮೂವರು ಬಂಟರನ್ನೂ ಈಗಾಗಲೇ ಬಂಧಿಸಿ ವಿಚಾರಣೆಗೆ ಮೈಸೂರಿಗೆ ಕರೆದುಕೊಂಡು ಹೋಗಿದ್ದಾರೆ.

ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ ವಿಚಾರಣೆಗೆ ನಾಲ್ಕು ದಿನ ತಗೆದುಕೊಂಡಿದ್ದಾರೆ.ಕೆಲ ಸಮಯ ಬಚ್ಚಾಖಾನ್ ನನ್ನು ವಿಚಾರಣೆ ನಡೆಸಿದ ಧಾರವಾಡ ಉಪನಗರ ಪೊಲೀಸರು ಸಧ್ಯ ಹೆಚ್ಚಿನ ವಿಚಾರಣೆಗೆ ಮೈಸೂರಿಗೆ ಕರೆದುಕೊಂಡು ಹೋಗಿದ್ದಾರೆ. ಇನ್ಸ್ಪೆಕ್ಟರ್ ಪ್ರಮೋದ್ ಯಲಿಗಾರ ನೇತೃತ್ವದಲ್ಲಿ ಮೈಸೂರಿಗೆ ಪೊಲೀಸರು ಹೆಚ್ಚಿನ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ.

ಪ್ರಮುಖವಾಗಿ ಬೆದರಿಕೆ ಹಾಕಿದ್ದವರು ಯಾರು ಯಾವ ನಂಬರ್ ನಿಂದ ಹಾಕಿದ್ದು ಯಾರು ಯಾವಾಗ ಹೀಗೆ ಹತ್ತಾರು ಪ್ರಶ್ನೆಗಳಿಗೆ ಉತ್ತರ ಹುಡುಕಲು ಪೊಲೀಸರು ಬಚ್ಚಾಖಾನ್ ನನ್ನು ಮೈಸೂರಿಗೆ ಕರೆದುಕೊಂಡು ಹೋಗಿದ್ದಾರೆ. ಇವನೊಂದಿಗೆ ಇವನ‌ ಮೂರು ಜನ ಸಹಚರರನ್ನು ಪೊಲೀಸರು ಕರೆದುಕೊಂಡು ಹೋಗಿದ್ದು ಮೊಬೈಲ್ ಫೋನ್ ಸೇರಿದಂತೆ ಹಲವು ವಸ್ತುಗಳನ್ನು ಉಪನಗರ ಪೊಲೀಸರು ಹುಡುಕಲು ತೆರಳಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......