ಬೆಂಗಳೂರು -
8 ನೇ ತರಗತಿ ವಿದ್ಯಾರ್ಥಿಗೆ ಸತತ ಬೆದರಿಕೆ ಹಾಕಿ 6 ಲಕ್ಷ ಹಣ, 150 ಗ್ರಾಂ ಚಿನ್ನ ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ 8ನೇ ತರಗತಿಯಲ್ಲಿ ಓದುತ್ತಿದ್ದ 14 ವರ್ಷದ ವಿದ್ಯಾರ್ಥಿಯೊಬ್ಬನಿಗೆ ಭೀತಿ ಹುಟ್ಟಿಸಿ ಕಿಡಿಗೇಡಿಗಳ ಗುಂಪೊಂದು ಲಕ್ಷಾಂತರ ರೂಪಾಯಿ ನಗದು ಹಾಗೂ ಬಂಗಾರದ ಆಭರಣ ಗಳನ್ನು ದೋಚಿರುವ ಅತ್ಯಂತ ಆಘಾತಕಾರಿ ಪ್ರಕರಣ ವೊಂದು ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ನಗರದ ಟಿ. ದಾಸರಹಳ್ಳಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಪ್ರಾಪ್ತ ಬಾಲಕನನ್ನು ಬೆದರಿಸಿ ಆತನಿಂದ ಬಲವಂತವಾಗಿ 6 ಲಕ್ಷ ರೂಪಾಯಿ ನಗದು ಮತ್ತು ಸುಮಾರು 150 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕಾಶ್, ಸಾಗರ್, ತರುಣ್ , ವೀರೇಶ್, ಶಂಕರ್, ದಿಗಂತ್, ಲಿಖಿತ್, ಪ್ರಜ್ವಲ್, ನಾಗರಾಜು ಮತ್ತು ಪ್ರಶಾಂತ್ ಎಂಬುವವರ ವಿರುದ್ದ ಪ್ರಕರಣ ದಾಖಲಾ ಗಿದೆ.ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಕಿಡಿಗೇಡಿಗಳ ಗುಂಪು ಕಳೆದ ಕೆಲವು ದಿನಗಳಿಂದ ಈ ಬಾಲಕನೊಂದಿಗೆ ಸ್ನೇಹ ಬೆಳೆಸಿತ್ತು .ಬಳಿಕ ತನ್ನ ಎಲೆಕ್ಟ್ರಿಕ್ ಬೈಕ್ ಹಾಳು ಮಾಡಿದ್ದಾನೆಂದು ಆರೋಪಿಸಿ ಈತನ ಹಣದ ಹಿನ್ನೆಲೆಯನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕಲು ಪ್ರಾರಂಭಿಸಿದ್ದರು.
ಬಾಲಕನಿಗೆ ಭಯ ಹುಟ್ಟಿಸಿ ಆತನ ಮನೆಯಲ್ಲಿದ್ದ ಹಣ ಹಾಗೂ ಬೆಲೆಬಾಳುವ ಆಭರಣಗಳನ್ನು ತಂದುಕೊಡು ವಂತೆ ಒತ್ತಡ ಹೇರಲಾಗಿತ್ತು. ಕಿಡಿಗೇಡಿಗಳ ಬೆದರಿಕೆಗೆ ಹೆದರಿದ ಅಪ್ರಾಪ್ತ ವಿದ್ಯಾರ್ಥಿಯು, ಮನೆಯಲ್ಲಿದ್ದ ಬಂಗಾರ ಮತ್ತು ನಗದನ್ನು ಆ ಗುಂಪಿಗೆ ಹಸ್ತಾಂತರಿ ಸಿದ್ದಾನೆ.ಮನೆಯಲ್ಲಿದ್ದ ನಗದು ಹಾಗೂ ಆಭರಣಗಳು ನಾಪತ್ತೆಯಾಗಿರುವುದು ಕುಟುಂಬದವರ ಗಮನಕ್ಕೆ ಬಂದಾಗ ಈ ಬೃಹತ್ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.
ತಕ್ಷಣವೇ ಬಾಲಕನ ತಂದೆ ಬಾಗಲಗುಂಟೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ದೂರು ಸ್ವೀಕರಿಸಿ ರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಅಪ್ರಾಪ್ತ ವಿದ್ಯಾರ್ಥಿಗೆ ಈ ರೀತಿಯ ಬೆದರಿಕೆ ಒಡ್ಡಿ ಹಣ ದೋಚಿದ ಕಿಡಿಗೇಡಿಗಳು ಯಾರು ಮತ್ತು ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದರ ಕುರಿತು ತೀವ್ರ ತನಿಖೆ ಮುಂದುವರಿದಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....