LIVE TV LocalCrimeNationalInternationalPoliticsEducationTechnologyEntertainmentSportsFeature
State News

ಒಂದು ಹುದ್ದೆಗೆ ಇಬ್ಬರು BEO.....ಗೊಂದಲ ದಲ್ಲಿ ಶಿಕ್ಷಕರು.....ಕರ್ತವ್ಯ ಮಾಡುತ್ತಿರುವ ಇಬ್ಬರು.....

ಚನ್ನಪಟ್ಟಣ -

ಚನ್ನಪಟ್ಟಣದಲ್ಲಿ ಇಬ್ಬರು ಬಿಇಒಗಳು ಶಿಕ್ಷಕರು, ಆಡಳಿತದಲ್ಲಿ ಗೊಂದಲ ಹೌದು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಯಲ್ಲಿ ಇಬ್ಬರು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಕರು ಹಾಗೂ ಆಡಳಿತ ದಲ್ಲಿ ಗೊಂದಲ ಉಂಟಾಗಿದೆ.ಕಳೆದ ತಿಂಗಳು ವರ್ಗಾವಣೆಯಾಗಿ ಬಂದಿದ್ದ ಬಿಇಒ ರಾಮಲಿಂಗಯ್ಯ ಹಾಗೂ ಅವರ ಸ್ಥಾನಕ್ಕೆ ಸರ್ಕಾರದಿಂದ ನೇಮಕ ಗೊಂಡು ಅಧಿಕಾರ ವಹಿಸಿಕೊಂಡಿರುವ ರಂಗಸ್ವಾಮಿ ಅವರು ಒಟ್ಟಿಗೆ ಕಚೇರಿಗೆ ಆಗಮಿಸಿ ಕರ್ತವ್ಯ ನಿರ್ವಹಿ ಸುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ಬಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಮಲಿಂಗಯ್ಯ ಅವರನ್ನು ಚಿಕ್ಕ ಬಳ್ಳಾಪುರದ ಡಯಟ್ ಹಿರಿಯ ಉಪನ್ಯಾಸಕರಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಕಳೆದ ತಿಂಗಳು ಆದೇಶ ಹೊರಡಿಸಿತ್ತು. ಅವರ ಸ್ಥಾನಕ್ಕೆ ರಂಗಸ್ವಾಮಿ ಅವರನ್ನು ನೇಮಕ ಮಾಡಲಾಗಿತ್ತು ಆದರೆ ರಾಮಲಿಂಗಯ್ಯ ಅವರು ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೊರೆ ಹೋಗಿದ್ದರು.

ಅರ್ಜಿ ವಿಚಾರಣೆ ನಡೆಸಿದ ಕೆಎಟಿಯು ರಾಮಲಿಂ ಗಯ್ಯ ಅವರ ವರ್ಗಾವಣೆಗೆ ತಡೆಯಾಜ್ಞೆ ನೀಡಿದೆ. ಜೊತೆಗೆ ತಕ್ಷಣವೇ ಸ್ಥಾನ ತೆರವು ಮಾಡದೆ ಅದೇ ಹುದ್ದೆಯಲ್ಲಿ ಮುಂದುವರಿಯುವಂತೆ ಆದೇಶಿಸಿದೆ. ಸೆ. 21ರಂದು ಅಂತಿಮ ವಿಚಾರಣೆಗೆ ದಿನಾಂಕ ನಿಗದಿಪ ಡಿಸಿದೆ.ಕೋರ್ಟ್ ಆದೇಶದಂತೆ ರಾಮಲಿಂಗಯ್ಯ ಕಳೆದ ಮೂರು ದಿನಗಳಿಂದ ಕಚೇರಿಗೆ ಬಂದು ಕೆಲಸ ನಿರ್ವಹಿಸುತ್ತಿದ್ದಾರೆ. ಸರ್ಕಾರದ ಆದೇಶದಂತೆ ಕಳೆದ ತಿಂಗಳು ಅಧಿಕಾರ ವಹಿಸಿಕೊಂಡಿದ್ದ ರಂಗಸ್ವಾಮಿ ಅವರೂ ಎಂದಿನಂತೆ ಕರ್ತವ್ಯದಲ್ಲಿ ತೊಡಗಿದ್ದಾರೆ.

ಇಬ್ಬರು ಬಿಇಒಗಳು ಕಚೇರಿಗೆ ಬಂದು ಅಧಿಕಾರ ನಡೆಸುತ್ತಿರುವುದು ಶಿಕ್ಷಕರು ಹಾಗೂ ಸಿಬ್ಬಂದಿಯಲ್ಲಿ ಗೊಂದಲ ಏರ್ಪಟ್ಟಿದೆ. ಯಾರ ಆದೇಶವನ್ನು ಪಾಲಿಸ ಬೇಕು ಎಂಬುದು ಸಿಬ್ಬಂದಿಯ ಗೊಂದಲಕ್ಕೆ ಕಾರಣ ವಾಗಿದೆ. ಇದಲ್ಲದೆ ಇಬ್ಬರ ಅಧಿಕಾರ ಶಿಕ್ಷಣ ಕ್ಷೇತ್ರದ ಆಡಳಿತಾತ್ಮಕ ಕಾರ್ಯಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತಿದೆ.

ಸುದ್ದಿ ಸಂತೆ ನ್ಯೂಸ್ ಚನ್ನಪಟ್ಟಣ.... ‌

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
AI ಬಳಸಿ 1980ರ ಟ್ರೆಂಡಿಂಗ್‌ ಫೋಟೋ ಕ್ರಿಯೇಟ್ ಮಾಡುವ ಮುನ್ನ ಎಚ್ಚರ.....ಸರ್ಕಾರಿ ನೌಕರರೇ ಟಾರ್ಗೆಟ್.....ನೌಕರರ ಬಡ್ತಿಗೆ ಗ್ರಹಣ.....ನೌಕರರ ವಲಯದಿಂದ ಆಕ್ರೋಶ ಅಸಮಾಧಾನ.....ಶಿಕ್ಷಣ ಸಚಿವರನ್ನು ಭೇಟಿಯಾದ KSPSTA ಟೀಮ್..... ಸಚಿವರೊಂದಿಗೆ ಮಹತ್ವದ ಚರ್ಚೆ ಮಾಡಿದ ಚಂದ್ರಶೇಖರ ನುಗ್ಗಲಿ ನೇತೃತ್ವದ ನಿಯೋಗ.....ಗೌರಿ ಗಣೇಶ ಹಬ್ಬಕ್ಕೆ ಮಧುವಣಗಿತ್ತಿಯಂತೆ ಕಂಗೊಳಿಸುತ್ತಿರುವ Big Mishra.....ಹಬ್ಬದ ಸಂಭ್ರಮಕ್ಕೆ ಮಳಿಗೆಗಳಿಗೆ ಹೊಸ ಮೆರುಗು ನೀಡಿದ ಸಂಜಯ ಮಿಶ್ರಾ.....ಶಾಲಾ ಸಮಯ ಬದಲಾವಣೆ ಗೆ ಶಿಕ್ಷಕ ಸಂಘಟನೆಗಳು ಮನವಿ ನೀಡಿದ್ರಾ.....ಮಾಹಿತಿ ಬಿಚ್ಚಿಟ್ಟ ಸಚಿವರು.....ಚರಂಡಿ ದಾಟಲು ವೃದ್ಧನ ಹೆಗಲೇರಿದ ಸರ್ಕಾರಿ ಅಧಿಕಾರಿ.....ಇದು ಆಡಳಿತ ವ್ಯವಸ್ಥೆ.....ಒಂದು ಹುದ್ದೆಗೆ ಇಬ್ಬರು BEO.....ಗೊಂದಲ ದಲ್ಲಿ ಶಿಕ್ಷಕರು.....ಕರ್ತವ್ಯ ಮಾಡುತ್ತಿರುವ ಇಬ್ಬರು.....ಶಾಲಾ ವಿದ್ಯಾರ್ಥಿ ಅಪಹರಣ..... ಲಕ್ಷ ಲಕ್ಷ ವಸೂಲಿ ಚಿನ್ನ ಸುಲಿಗೆ.....ನಿಲ್ಲದ ಬೆದರಿಕೆ.....ನಾಡಿನ ಜನತೆಗೆ Big Mishra ದಿಂದ ಗೌರಿ ಗಣೇಶ ಹಬ್ಬದ ಶುಭಾಶಯಗಳು..... ಸಂಸ್ಥೆಯ ಪರವಾಗಿ ಶುಭ ಕೋರಿದ ಸಂಜಯ ಮಿಶ್ರಾ.....ರಕ್ಷಣೆ ಇಲ್ಲದ ಶತಮಾನದ ಸರಕಾರಿ ಶಾಲೆ.....ಶಾಲೆಗೆ ಎದುರಾಗಿದೆ ಬಹುದೊಡ್ಡ ಆತಂಕ.....