ಬೆಂಗಳೂರು -
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರ್ಕಾರಿ ಶಾಲಾ ಶಿಕ್ಷಕರ ಹುದ್ದೆಗಳಿಗೆ ಕರೆಯಲಾಗಿದ್ದ ಹುದ್ದೆ ಗಳಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಿದೆ. ಅಭ್ಯರ್ಥಿಗಳು ದಿನಾಂಕ 25-09-2026 ರವರೆಗೆ ಅರ್ಜಿ ಸಲ್ಲಿಸಬಹುದೆಂದು ಪ್ರಕಟಿಸಲಾಗಿದೆ. ಶುಲ್ಕ ಪಾವತಿಸಿ, ಈಗಾಗಲೇ ಅರ್ಜಿಯನ್ನು ಸಬ್‌ಮಿಟ್ ಮಾಡಿರುವ ಅಭ್ಯರ್ಥಿಗಳಿಗೂ ಅರ್ಜಿಯಲ್ಲಿ ಬದ ಲಾವಣೆ ಮಾಡಲು ಎಡಿಟ್ ಅವಕಾಶವನ್ನು ನೀಡ ಲಾಗಿದೆ.
ಅಭ್ಯರ್ಥಿಗಳು ಎಷ್ಟು ಬಾರಿ ಬೇಕಾದರೂ ತಮ್ಮ ಅರ್ಜಿ ಯಲ್ಲಿ ಬದಲಾವಣೆ ಮಾಡಬಹುದಾಗಿದೆ. ಕೊನೆಯ ದಾಗಿ ಅವರು ಸಲ್ಲಿಸುವ ಅರ್ಜಿಯನ್ನೇ ಪರಿಗಣಿ ಸಲಾಗುತ್ತದೆ. ಅಭ್ಯರ್ಥಿಗಳು ಕೊನೆಯ ದಿನಾಂಕ ದವರೆಗೆ ಕಾಯದೇ ಮೊದಲೇ ಅರ್ಜಿ ಸಲ್ಲಿಸಬೇ ಕೆಂದು ಕೋರಲಾಗಿದೆ.
ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಯಾವುದೇ ರೀತಿಯ ಗೊಂದಲ, ತಾಂತ್ರಿಕ ಸಮಸ್ಯೆಗಳು ಎದುರಾದಲ್ಲಿ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಇಲಾಖೆ ಸೂಚನೆ ನೀಡಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು......