LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕಿ ಆತ್ಮಹತ್ಯೆ ಪ್ರಕರಣ ಮೂವರ ಮೇಲೆ FIR.....ತನಿಖೆ ಮಾಡ್ತಾ ಇರುವ ಪೊಲೀಸರು.....

ಕೊಪ್ಪಳ -

ಕೊಪ್ಪಳದಲ್ಲಿ ನಡೆದ ಶಿಕ್ಷಕಿ ಆತ್ಮಹತ್ಯೆ ಪ್ರಕರಣ ಕುರಿತು ಪೊಲೀಸರು ಮೂವರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಯಾಗಿ ಕೆಲಸ ಮಾಡುತ್ತಿದ್ದ ತಾಲ್ಲೂಕಿನ ಕಾತರಕಿ ಗ್ರಾಮದ ಸಂಗೀತಾ ಮೇಟಿ (34) ಆತ್ಮಹತ್ಯೆ ಮಾಡಿ ಕೊಂಡಿದ್ದು, ಪ್ರೇಮ ಪ್ರಕರಣವೇ ಇದಕ್ಕೆ ಕಾರಣ ಎಂದು ಗೊತ್ತಾಗಿದೆ.

ಈ ಕುರಿತು ಮೃತ ಸಂಗೀತಾಳ ಅಣ್ಣ ಸಂತೋಷ ಮೇಟಿ ದೂರು ನೀಡಿದ್ದು 'ನನ್ನ ತಂಗಿ ಸೋದರ ಮಾವನ ಮಗ ವಿಕಾಶ ಕೆ.ಕೊಪ್ಪದನನ್ನು ಪ್ರೀತಿಸಿದ್ದು ಮನೆಯವರು ಒಪ್ಪಿ ಮದುವೆ ಮಾಡುವುದಾಗಿ ಹೇಳಿದ್ದರು.ಮದುವೆಯಾಗಲು ವಿಕಾಶ ಕೂಡ ಒಪ್ಪಿಕೊಂಡಿದ್ದ. ಆಗಿನಿಂದಲೂ ಇಬ್ಬರೂ ಸಲುಗೆ ಯಿಂದ ಓಡಾಡಿಕೊಂಡಿದ್ದರು.

ಹಿಂದಿನ ಎರಡು ವರ್ಷಗಳಿಂದ ಮದುವೆ ವಿಚಾರ ವಾಗಿ ಸಂಗೀತಾ ಕೇಳಿದಾಗ ವಿಕಾಶ ನನಗೆ ನೀನು ಇಷ್ಟವಿಲ್ಲ; ನನ್ನ ಅಣ್ಣ ಹಾಗೂ ಅತ್ತಿಗೆ ಹೇಳಿದವರನ್ನು ಮದುವೆಯಾಗುತ್ತೇನೆ ಎಂದು ಬೈಯ್ದಿದ್ದರು' ಎಂದು ಆರೋಪಿಸಿದ್ದಾರೆ.'ಇದರಿಂದ ನನ್ನ ತಂಗಿ ಮಾನಸಿ ಕವಾಗಿ ನೊಂದಿದ್ದಳು. ಅ. 19ರಂದು ದಸರಾ ಹಬ್ಬಕ್ಕೆ ಸಾಮಗ್ರಿ ಖರೀದಿಸಲು ಕೊಪ್ಪಳಕ್ಕೆ ಹೋಗುವುದಾಗಿ ತಿಳಿಸಿ ಹೋಗಿದ್ದು ವಾಪಸ್‌ ಬಂದಿಲ್ಲ.news_1792508769_0_958.webp

ಮೃತ ಶಿಕ್ಷಕಿ 

ಆಕೆ ಸಾವಿಗೂ ಮೊದಲು ಬರೆದ ಪತ್ರವನ್ನು ನನಗೆ ವ್ಯಾಟ್ಸ್‌ಆಯಪ್‌ ಮಾಡಿದ್ದಾಳೆ. 14 ವರ್ಷ ಇಷ್ಟಪಟ್ಟು ಮದುವೆಯಾಗುವುದಾಗಿ ನಂಬಿಸಿ ವಿಕಾಶ ಮೋಸ ಮಾಡಿದ್ದಾನೆ ಎಂದು ಪತ್ರದಲ್ಲಿ ತಿಳಿಸಿದ್ದಾಳೆ' ಎಂದು ಸಂತೋಷ ದೂರಿನಲ್ಲಿ ಆಪಾದಿಸಿದ್ದಾರೆ.ಮೃತ ಸಂಗೀತ ಅವರ ಮೃತದೇಹ ತುಂಗಭದ್ರಾ ನದಿಯ ಮದಲಗಟ್ಟಿ ಸೇತುವೆ ಬಳಿ ಲಭ್ಯವಾಗಿದ್ದು, ಹೂವಿನ ಹಡಗಲಿ ಪೊಲೀಸ್‌ ಠಾಣೆಯಲ್ಲಿ ವಿಕಾಶ ಕೊಪ್ಪದ, ಅವರ ಅಣ್ಣ ವಸಂತರೆಡ್ಡಿ ಕೊಪ್ಪದ ಮತ್ತು ಅತ್ತಿಗೆ ರೇಣುಕಾ ರೆಡ್ಡಿ ವಿರುದ್ಧ ದೂರು ದಾಖಲಾಗಿದೆ.

ಸುದ್ದಿ ಸಂತೆ ನ್ಯೂಸ್ ಕೊಪ್ಪಳ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಶಾಲೆಯಲ್ಲಿ ಬೆಂಕಿ ಅವಘಡ ತಪ್ಪಿತು ದೊಡ್ಡ ಅವಘಡ.....ಶಾಲಾ ಆರಂಭ ಮೊದಲ ದಿನವೇ ಅವಘಡ.....ಶಿಕ್ಷಕಿ ಆತ್ಮಹತ್ಯೆ ಪ್ರಕರಣ ಮೂವರ ಮೇಲೆ FIR.....ತನಿಖೆ ಮಾಡ್ತಾ ಇರುವ ಪೊಲೀಸರು.....ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಸಾವು.....ಚಿಕಿತ್ಸೆ ಫಲಿಸದೇ ನಿಧನ.....ಶಿಕ್ಷಕರಿಗೆ ಗಿಫ್ಟ್ ಕೂಪನ್ ದೂರು ದಾಖಲು.....ಕೊಡಗು ಜಿಲ್ಲೆಯಲ್ಲೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..... ನಾಳೆ ಎರಡು ಜಿಲ್ಲೆಗಳಲ್ಲಿ ರಜೆ ಘೋಷಣೆ.....ಅಕ್ಟೋಬರ್ 22 ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.....ಹೂಲಿ ಗ್ರಾಮದಲ್ಲಿ ಆರಂಭಗೊಂಡ ರೊಡ್ಡ ಹನಮಪ್ಪ ದೇವರ ದ್ವಾರಬಾಗಿಲು ಕಾಮಗಾರಿ..... ವಿರೇಶ ಬ್ಯಾಹಟ್ಟಿ ದೇಣಿಗೆ ನೀಡಿದ ಬೆನ್ನಲ್ಲೇ ಆರಂಭಗೊಂಡ ಕಾಮಗಾರಿ..... ಗ್ರಾಮಸ್ಥರಲ್ಲಿ ಹರ್ಷ.....ದಸರಾ ರಜೆ ವಿಸ್ತರಣೆ KSPSTA ದಿಂದ ಮಹತ್ವದ ಸಂದೇಶ.....ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ‘ಬಡ್ತಿ ಪರ್ವ’ ಅಭಿಯಾನ.....ಮಾಹಿತಿ ನೀಡಿದ KSPSTA ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ.....ಭೀಕರ ಅಪಘಾತ SSLC ವಿದ್ಯಾರ್ಥಿ ಸಾವು.....ಅಪ್ರಾಪ್ತ ರಿಗೆ ಬೈಕ್ ಕೊಡುವ ಮುನ್ನ ಇರಲಿ ಎಚ್ಚರಿಕೆ.....