LIVE TV LocalCrimeNationalInternationalPoliticsEducationTechnologyEntertainmentSportsFeature
State News

ರಾಜ್ಯದ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಗುಡ್ ನ್ಯೂಸ್.....ಗ್ರೇಡ್-1 ಹುದ್ದೆಗೆ ಬಡ್ತಿ.....

ಬೆಂಗಳೂರು -

ರಾಜ್ಯದ ಪ್ರಾಥಮಿಕ ಶಾಲೆಗಳ ದೈಹಿಕ ಶಿಕ್ಷಕರಿಗೆ ಗುಡ್ ನ್ಯೂಸ್ ನ್ನು ನೀಡಲಾಗಿದ್ದು ಗ್ರೇಡ್-1 ಹುದ್ದೆಗೆ ಬಡ್ತಿಯನ್ನು ನೀಡಲಾಗಿದೆ ಹೌದು ರಾಜ್ಯದ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಗ್ರೇಡ್-2 ದೈಹಿಕ ಶಿಕ್ಷಣ (P.E) ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ, ಬಿ.ಪಿ.ಇಡಿ ವಿದ್ಯಾರ್ಹತೆ ಹೊಂದಿ ರುವ ಶಿಕ್ಷಕರಿಗೆ ಸರ್ಕಾರ ಶುಭ ಸುದ್ದಿ ನೀಡಿದೆ.

ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆಗಳಿಗೆ ಇವರನ್ನು ಬಡ್ತಿ ನೀಡಲು ಸರ್ಕಾರ ಸಿದ್ಧತೆ ನಡೆಸಿದ್ದು, ಶೀಘ್ರದಲ್ಲೇ ಈ ಪ್ರಕ್ರಿಯೆ ಚಾಲನೆ ಪಡೆಯುವ ಸಾಧ್ಯತೆಯಿದೆ.ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರಿಗೆ ಗ್ರೇಡ್-1 ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆಗೆ ಅಗತ್ಯ ಸಿದ್ಧತೆಗಳು ನಡೆದಿವೆ ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ಸುರಲ್ಕರ್ ವಿಕಾಸ್ ಕಿಶೋರ್ ಸ್ಪಷ್ಟಪಡಿಸಿದ್ದಾರೆ.

ಬಡ್ತಿಗೆ ಸಂಬಂಧಿಸಿದ ಕಡತಕ್ಕೆ ಈಗಾಗಲೇ ಶಿಕ್ಷಣ ಆಯುಕ್ತರಿಂದ ಅನುಮೋದನೆ ದೊರೆತಿದೆ. ಚುನಾವಣೆ ನೀತಿ ಸಂಹಿತೆ ಮುಕ್ತಾಯಗೊಂಡ ಬಳಿಕ ನಿಯಮಾನುಸಾರ ಪ್ರಕ್ರಿಯೆ ಆರಂಭವಾಗಲಿದೆ. ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಶೀಲಿಸಿ, ಸೇವಾ ಹಿರಿತನ, ವಿದ್ಯಾರ್ಹತೆ ಮತ್ತು ಲಭ್ಯವಿರುವ ಖಾಲಿ ಹುದ್ದೆಗಳ ಆಧಾರದ ಮೇಲೆ ಜಿಲ್ಲಾ ಉಪನಿರ್ದೇಶಕರು ಅರ್ಹರನ್ನು ಗುರುತಿಸಿ ಬಡ್ತಿ ಪ್ರಕ್ರಿಯೆ ನಡೆಸಲಿದ್ದಾರೆ.

ರಾಜ್ಯದ ಪ್ರೌಢಶಾಲೆಗಳಲ್ಲಿ ಸದ್ಯ ಸುಮಾರು 1 ಸಾವಿರ ಪಿ.ಇ ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. 2026-27ನೇ ಸಾಲಿನ 15,000 ಶಿಕ್ಷಕರ ನೇಮಕಾತಿಯಲ್ಲಿ 600 ಹುದ್ದೆಗಳನ್ನು ಗ್ರೇಡ್-1 ಹಾಗೂ ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರಿಗೆ ಮೀಸಲಿಡಲಾಗಿದೆ. ಪ್ರಸ್ತುತ ಬಡ್ತಿ ಪ್ರಕ್ರಿಯೆ ಜಾರಿಯಾದರೆ ಅರ್ಹ ಶಿಕ್ಷಕರಿಗೆ ಉನ್ನತ ಹುದ್ದೆ ದೊರೆಯುವುದರೊಂದಿಗೆ ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆಗೂ ಪರಿಹಾರ ಸಿಗಲಿದೆ.

ಬಿ.ಪಿ.ಇಡಿ ಅರ್ಹತೆ ಹೊಂದಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ನೀಡುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವೂ ಮನವಿ ಸಲ್ಲಿಸಿತ್ತು.ಲಭ್ಯವಿರುವ ಖಾಲಿ ಹುದ್ದೆಗಳು ಮತ್ತು ಅರ್ಹ ಅಭ್ಯರ್ಥಿಗಳ ವಿವರಗಳನ್ನು ಆಧರಿಸಿ ಪ್ರತಿ ಆರು ತಿಂಗಳಿಗೊಮ್ಮೆ ಬಡ್ತಿ ಪ್ರಕ್ರಿಯೆ ನಡೆಸಲು ಸೂಚಿಸಲಾಗಿದೆ ಈ ಕ್ರಮವು ದೈಹಿಕ ಶಿಕ್ಷಕರ ಕೊರತೆಯನ್ನು ನಿರಂತರವಾಗಿ ಕಡಿಮೆ ಮಾಡಲು ನೆರವಾಗಲಿದ್ದು, ಅರ್ಹ ಶಿಕ್ಷಕರಿಗೆ ಕಾಲಮಿತಿಯಲ್ಲಿ ಬಡ್ತಿ ಅವಕಾಶಗಳನ್ನು ಕಲ್ಪಿಸಲಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BEO ಯಲ್ಲಮ್ಮ ಅಮಾನತು.....ಸರ್ಕಾರಿ ಶಾಲೆಯಲ್ಲಿ ಭೀಕರ ಅಗ್ನಿ ಅವಘಡ: ರಜೆ ಇದ್ದಿದ್ದರಿಂದ ತಪ್ಪಿದ ಭಾರೀ ದುರಂತBEO ಕಚೇರಿಯಲ್ಲಿ ಹಗಲಲ್ಲೂ ಉರಿಯುವ ಲೈಟ್ ಗಳು.....ಕಂಡು ಕಾಣದಂತೆ ಕುಳಿತಿದ್ದಾರೆಯೇ ಇಲಾಖೆಯ ಅಧಿಕಾರಿಗಳು.....ಧಾರವಾಡ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಹೊಸ ರೂಪ ತಂದ ಗುತ್ತಿಗೆದಾರ ಫಕ್ರುದ್ದೀನ್ ಅಲಿ ಕುಂದಗೋಳ.....ಫೇವರ್ಸ್ ಅಳವಡಿಸಿ ಅಂದಚೆಂದ ಹೆಚ್ಚಿಸಿದ ಗುತ್ತಿಗೆದಾರ.....ಧಾರವಾಡ ಜಯನಗರ ಬಿಗ್ ಮಿಶ್ರಾಗೆ ಮೊದಲ ವರ್ಷದ ಸಂಭ್ರಮ.....ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ ಸಂಜಯ ಮಿಶ್ರಾ ರವರ ಬಿಗ್ ಮಿಶ್ರಾ.....ಬಾದಾಮಿ ಬನಶಂಕರಿ ದೇವಾಲಯಕ್ಕೆ ಹೋಗ್ತಾ ಇದ್ದರೆ ಪ್ಲಾನ್ ಬದಲಾವಣೆ ಮಾಡಿಕೊಳ್ಳಿ.....ಅಕ್ಟೋಬರ್ 11 ರಂದು 7 ಗಂಟೆ ದರ್ಶನ ಬಂದ್.....ಒಂಬತ್ತು ಸರ್ಕಾರಿ ಅಧಿಕಾರಿಗಳಿಗೆ ನೌಕರರಿಗೆ ಸಮನ್ಸ್ ಜಾರಿ.....ಲೋಕಾಯುಕ್ತ ನ್ಯಾಯಾಲಯದಿಂದ ಜಾರಿ.....8th Pay Commission ವಿಳಂಬವಾದರೆ ಹೆಚ್ಚಾಗಲಿದೆ ಅರಿಯರ್ಸ್.....ಹೆಡ್ ಕಾನ್ಸ್ಟೇಬಲ್ ಹನುಮಂತ ಅಮಾನತು..... ಅಮಾನತು ಮಾಡಿದ SP.....ಪೊಟೊ ವಿಡಿಯೋ ವೈರಲ್ ಬೆನ್ನಲ್ಲೇ ಶಿಕ್ಷಕ ಅಮಾನತು.....